ಕಾಶ್ಮೀರ ವಿಚಾರಕ್ಕೆ ಚೀನಾ ಕಿರಿಕ್? ಪಾಕಿಗಳ ಬಾಲ ಹಿಡಿದ ಟರ್ಕಿ!
ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಕಿರಿಕ್ ಮಾಡುವ ಚೀನಾ ಜಿ20 ಸಭೆಯಲ್ಲೂ ಕಿರಿಕಿರಿ ಮುಂದುವರಿಸಿದೆ. ಮೇ 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಹಾಗೂ ಟರ್ಕಿ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪಾಕಿಸ್ತಾನಕ್ಕೆ ಬಕೇಟ್ ಹಿಡಿಯಲು ಟರ್ಕಿ ಇಂತಹ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಭಾರತವು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಜಿ20 ಒಕ್ಕೂಟದಲ್ಲಿರುವ ಪ್ರಬಲ ರಾಷ್ಟ್ರಗಳ ಒತ್ತಾಯ. ಈ ನಿಲುವಿಗೆ ಅಂಟಿಕೊಂಡಿರುವ ರಾಷ್ಟ್ರಗಳು ಸಭೆಯಿಂದ ಹಿಂದೆ ಸರಿಯುವುದು ನಿಶ್ಚಿತ ಎಂದು ವಿಶ್ವಸಂಸ್ಥೆಯ ಅಲ್ಪಸಂಖ್ಯಾತರ ವಿಭಾಗದ ವರದಿಗಾರ ಫರ್ನಾಂಡ್ ಡಿ ವಾರೆನ್ನೆಸ್ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಬಾಲ ಹಿಡಿಯುತ್ತಿರುವ ಟರ್ಕಿ ಕಿರಿಕ್ ಶುರು ಮಾಡಿದೆ. ಹಿಂದೆ ಕೂಡ ಹಲವು ಬಾರಿ ಭಾರತದ ಬಗ್ಗೆ ಕಮೆಂಟ್ ಮಾಡಿ ಸರಿಯಾಗಿ ಬಿಸಿ ಮುಟ್ಟಿಸಿಕೊಂಡಿದ್ದರೂ ಟರ್ಕಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.

ಅರುಣಾಚಲ ಸಭೆಗೂ ಬಂದಿರಲಿಲ್ಲ ಚೀನಾ
ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ, ಪಾಕಿಸ್ತಾನದ ಜೊತೆ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಗೊಳ್ಳಬಹುದು ಎನ್ನುವ ಅಂದಾಜು ಇದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈ ನಡೆ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಮತ್ತಷ್ಟು ಹುಳಿ ಹಿಂಡುತ್ತಿದೆ.
ಭಾರತಕ್ಕೆ ಇದು ಮಹತ್ವದ ಸಭೆ
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಪಾಕಿಸ್ತಾನ ಮತ್ತು ಚೀನಾ ವಿರೋಧದ ನಡುವೆ ಜಿ20ಗೆ ಸೇರಿದ ಹಲವು ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ. ಇದು ಪಾಕಿಗಳಿಗೆ ಹಿನ್ನಡೆ ಉಂಟುಮಾಡಿದ್ದು, ಟರ್ಕಿ ಮತ್ತು ಚೀನಾ ಮಾತ್ರ ಪಾಕಿಸ್ತಾನಕ್ಕೆ ಇಷ್ಟವಾಗುವ ನಿರ್ಧಾರ ಕೈಗೊಳ್ಳು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೇನು 2 ದಿನದಲ್ಲಿ ಅದಕ್ಕೆ ಉತ್ತರ ಕೂಡ ಸಿಗಲಿದೆ.

ಭಾರತದ ಶಕ್ತಿ ಪ್ರದರ್ಶನಕ್ಕೆ ವೇದಿಕೆ
ಅಷ್ಟಕ್ಕೂ ಶ್ರೀನಗರದಲ್ಲಿ ಈ ಸಭೆ ಆಯೋಜಿಸಿರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಬೇಜವಾಬ್ದಾರಿಯುತ ನಡೆ ಎಂದು ಭಾರತದ ವಿರುದ್ಧ ಟೀಕಿಸಿತ್ತು ಉಗ್ರರ ಪೋಷಕ ಪಾಕಿಸ್ತಾನ. ಇನ್ನು ಪಾಕಿಸ್ತಾನದ ಇಂತಹ ಮಾತಿಗೆ ಸೂಕ್ತ ಉತ್ತರವೂ ಸಿಕ್ಕಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಶ್ರೀನಗರದಲ್ಲಿ ಸಭೆ ನಡೆಸುವುದು ನಮ್ಮ ಹಕ್ಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿ, ಪಾಕಿಸ್ತಾನದ ಬಾಯಿ ಮುಚ್ಚಿಸಿತ್ತು. ಈ ನೋಡಿದರೆ ಚೀನಾ ಯಾವ ನಿಲುವು ಕೈಗೊಳ್ಳಬಹುದು ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಜಿ20 ಒಕ್ಕೂಟದಲ್ಲಿ ಯಾವೆಲ್ಲಾ ರಾಷ್ಟ್ರಗಳು ಇವೆ?
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಹೀಗಾಗಿ ಇಡೀ ಜಗತ್ತಿನ ಗಮನ ಈಗ ಭಾರತದ ಮೇಲೆ ನೆಟ್ಟಿದೆ.
ಒಟ್ನಲ್ಲಿ 3 ದಿನ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರವು, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನಲಾಗಿದೆ. ಮತ್ತೊಂದ್ಕಡೆ ನೆರೆ ದೇಶಗಳು ಕಾಶ್ಮೀರದ ಮೇಲೆ ಕಣ್ಣುಹಾಕಿ ಕೂತಿರುವ ಸಂದರ್ಭದಲ್ಲಿ ಇಂತಹ ಸಭೆ ಆಯೋಜನೆ ಮಾಡಿದ್ದು ಕೂಡ ಭಾರತದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಆದರೆ ಉಗ್ರರ ಪೋಷಕ ಪಾಕಿಸ್ತಾನ ಮಾತ್ರ ತನ್ನ ಕಿರಿಕ್ ಬುದ್ಧಿ ಬಿಡದೇ ಇರುವುದು ವಿಪರ್ಯಾಸದ ಸಂಗತಿ.












Click it and Unblock the Notifications