ಮಕ್ಕಳಿಗೆ ಕೊರೊನಾ ಲಸಿಕೆ ಕಾರ್ಯ ಸದ್ಯ ಆರಂಭವಾಗಲ್ಲ; ಸಲಹಾ ಸಮಿತಿ

ನವದೆಹಲಿ, ಆಗಸ್ಟ್‌ 25: ದೇಶದಲ್ಲಿ ಝೈಡಸ್ ಕ್ಯಾಡಿಲಾದ ಮಕ್ಕಳ (12-17 ವಯಸ್ಸಿನವರಿಗೆ) ಕೊರೊನಾ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದ್ದರೂ ಸದ್ಯಕ್ಕೆ ಮಕ್ಕಳಿಗೆ ಕೊರೊನಾ ಲಸಿಕೆ ಕಾರ್ಯಕ್ರಮ ಆರಂಭವಾಗುವುದಿಲ್ಲ.

ವಯಸ್ಕರಿಗೆ ಕೊರೊನಾ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡಿದ ಬಳಿಕವಷ್ಟೇ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗುವುದು ಎಂದು ರಾಷ್ಟ್ರೀಯ ಕೊರೊನಾ ಲಸಿಕೆ ಸಲಹಾ ಸಮಿತಿ ಅಧ್ಯಕ್ಷ ಎನ್‌.ಕೆ. ಅರೋರಾ ಮಾಹಿತಿ ನೀಡಿದ್ದಾರೆ.

ಆದರೆ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿರುವ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಕ್ಟೋಬರ್‌ ತಿಂಗಳಿನಿಂದ ಝೈಡಸ್ ಅಭಿವೃದ್ಧಿಗೊಳಿಸಿರುವ ಕೊರೊನ ಲಸಿಕೆ ನೀಡಲಾಗುವುದಷ್ಟೆ ಎಂದರು.

v

ವಯಸ್ಕರಲ್ಲಿ ಕೊರೊನಾ ಸೋಂಕಿನ ಸಾಧ್ಯತೆ ಹೆಚ್ಚಿರುವುದರಿಂದ ಅವರಿಗೆ ಆದ್ಯತೆ ನೀಡಿ ಲಸಿಕೆ ನಿಡಲಾಗುತ್ತಿದೆ. ಇದೀಗ ಮೂರನೇ ಅಲೆ ಭೀತಿ ಎದುರಾಗಿರುವುದರಿಂದ, ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಸಾರ್ವತ್ರಿಕವಾಗಿ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಅರೋರಾ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ಮಕ್ಕಳು ತುತ್ತಾಗುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಅವರಿಗೆ ಇನ್ನಷ್ಟು ಸಮಯದ ನಂತರ ಲಸಿಕೆ ನೀಡಬಹುದಾಗಿದೆ ಎಂದು ವಿವರಣೆ ನೀಡಿದರು.

ಆರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ಲಸಿಕೆ: ಇತರೆ ಆರೋಗ್ಯ ಸಮಸ್ಯೆಗಳುಳ್ಳ, ಹನ್ನೆರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯಲ್ಲಿ ಮೊದಲು ಆದ್ಯತೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ ಸರ್ಕಾರಿ ಸಲಹಾ ಸಮಿತಿ ಮಂಗಳವಾರ ತಿಳಿಸಿದೆ. ಸದ್ಯಕ್ಕೆ 12 ವರ್ಷ ಮೇಲ್ಪಟ್ಟವರಿಗೆ ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಲಸಿಕೆಗೆ ಕಳೆದ ವಾರ ಅನುಮೋದನೆ ದೊರೆತಿದೆ. ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಸೋಂಕಿನ ಅಪಾಯ ಹೆಚ್ಚಿರುವವರಿಗೆ ಕೆಲವು ಪ್ರಮಾಣದ ಲಸಿಕೆಯನ್ನು ಮೀಸಲಿಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎನ್‌.ಕೆ. ಅರೋರಾ ಮಾಹಿತಿ ನೀಡಿದ್ದಾರೆ.

ಭಾರತೀಯ ಔಷಧ ನಿಯಂತ್ರಕ ಸಂಸ್ಥೆ (ಡಿಸಿಜಿಐ) ಕಳೆದ ಶುಕ್ರವಾರ ಝೈಡಸ್ ಕ್ಯಾಡಿಲಾದ ಮೂರು ಡೋಸ್ ಡಿಎನ್‌ಎ ಲಸಿಕೆಯನ್ನು ವಯಸ್ಕರು ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕಗೆ ಅನುಮೋದನೆ ನೀಡಿದ್ದು, ದೇಶದಲ್ಲಿ ಬಳಕೆಗೆ ಅನುಮೋದನೆ ಪಡೆದ ಆರನೇ ಲಸಿಕೆ ಇದಾಗಿದೆ.

ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಝೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

Children Inoculation May Not Start Soon Says National Technical Advisory Group On Immunisation

ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಇದುವರೆಗೂ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಇದೀಗ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ಅನುಮೋದಿಸುವ ಪ್ರಕ್ರಿಯೆಯು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ವೇಳೆಗೆ ಆರಂಭವಾಗಲಿದೆ ಎಂದು ಸಿಎನ್‌ಬಿಸಿ ವರದಿ ತಿಳಿಸಿದೆ.

ದೇಶದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿರುವುದರಿಂದ ಲಸಿಕಾ ವಿತರಣೆಯನ್ನು ಚುರುಕುಗೊಳಿಸಲಾಗಿದೆ.

ದೇಶದ ಕೊರೊನಾ ಸ್ಥಿತಿಗತಿ:
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಭಾರತದ ಒಟ್ಟು ಪ್ರಕರಣಗಳು 3,25,12,366. ಒಟ್ಟು ಗುಣಮುಖಗೊಂಡವರು 3,17,54,281. ಸಕ್ರಿಯ ಪ್ರಕರಣಗಳ ಸಂಖ್ಯೆ 3,22,327. ಒಟ್ಟು ಮೃತಪಟ್ಟವರು 4,35,758.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+