ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆ ತರುವಂತೆ ಅರ್ಜಿ ಬಗ್ಗೆ ಸಿಜೆಐ ಹೇಳಿದ್ದೇನು?

ನವದೆಹಲಿ, ಮಾರ್ಚ್ 3: ಉಕ್ರೇನ್‌ ಹಾಗೂ ರಷ್ಯಾ ಯುದ್ಧ ನಡೆಯುತ್ತಿದ್ದು, ಆ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಗುರುವಾರದಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಸುಪ್ರೀಂ ಕೋರ್ಟ್ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿದ್ದ ನ್ಯಾಯಪೀಠ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತವಾದ ಆಹಾರ, ಔಷಧ ಮತ್ತು ವಸತಿಗೆ ಅಗತ್ಯವಾಗುವಂತಹ ಜೀವನಾವಶ್ಯಕ ಮತ್ತು ತುರ್ತು ಸಾಮಗ್ರಿಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಅವರು ನ್ಯಾಯಾಲಯವನ್ನು ಕೋರಲಾಗಿದೆ.

"ನ್ಯಾಯಾಲಯವು ಏನು ಮಾಡಲು ಸಾಧ್ಯವಿದೆ? ಯುದ್ಧವನ್ನು ನಿಲ್ಲಿಸಲು ನಾನು ರಷ್ಯಾದ ಅಧ್ಯಕ್ಷರಿಗೆ ನಿರ್ದೇಶನಗಳನ್ನು ನೀಡಬಹುದೇ?" ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಸ್ತಾಪಿಸಿ ಸಿಜೆಐ ಹೇಳಿದರು. ಅರ್ಜಿದಾರರ ವಕೀಲರು ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ರೊಮೇನಿಯಾಗೆ ದಾಟದಂತೆ ತಡೆಯಲಾಗುತ್ತಿದೆ ಎಂದು ಹೇಳಿದರು.

Chief Justice on PIL Filed on Evacuation of Indians

"ಸಾಮಾಜಿಕ ಮಾಧ್ಯಮಗಳಲ್ಲಿ, ಸಿಜೆಐ ಏನು ಮಾಡುತ್ತಿದ್ದಾರೆಂದು ಹೇಳುವ ಕೆಲವು ವೀಡಿಯೊಗಳನ್ನು ನಾನು ನೋಡಿದ್ದೇನೆ! ನಾವು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ" ಎಂದು ಸಿಜೆಐ ಹೇಳಿದರು. ಪಿಐಎಲ್‌ಗೆ ಸ್ಪರ್ಧಿಸಿದ್ದ ವಕೀಲರು, "ಜನರು ಚಳಿಯಿಂದ ಹೆಪ್ಪುಗಟ್ಟುತ್ತಿದ್ದಾರೆ. ಅವರು ಕಾಳಜಿ ವಹಿಸಬೇಕು" ಎಂದು ಹೇಳುತ್ತಿದ್ದಂತೆ, ಸಿಜೆಐ, "ಯಾರು ಕಾಳಜಿ ವಹಿಸಬೇಕು? ಸರ್ಕಾರ ಈಗಾಗಲೇ ಮಾಡುತ್ತಿದೆ. ನಾವು ಕಂಡುಹಿಡಿಯಲು ಎಜಿಗೆ ಕೇಳುತ್ತೇವೆ" ಎಂದು ಹೇಳಿದರು.

"ಉಕ್ರೇನ್‌ನ ವಾಯುಪ್ರದೇಶವನ್ನು ನಿರ್ಬಂಧಿಸಲಾಗಿದ್ದು ಅಲ್ಲಿಗೆ ಕಳುಹಿಸಲಾದ ಏರ್ ಇಂಡಿಯಾ ವಿಮಾನ ಯಾವುದೇ ಭಾರತೀಯ ನಾಗರಿಕರನ್ನು ಕರೆತರಲಾಗದೆ ಹಿಂತಿರುಗಿದೆ. ಇದರಿಂದಾಗಿ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಪರಿಸ್ಥಿತಿ ಇನ್ನಷ್ಟು ಹದಗೆಡುವಂತಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಉಕ್ರೇನ್‌ನ ವಿವಿಗಳಲ್ಲಿ ಅಧ್ಯಯನ ಮಾಡಿದ ಭಾರತೀಯ ವಿದ್ಯಾರ್ಥಿಗಳ ಎಂಬಿಬಿಎಸ್‌ ಪದವಿಗೆ ಭಾರತದಲ್ಲಿ ಮನ್ನಣೆ ನೀಡಬೇಕು ಎಂದು ಕೂಡ ಕೋರಲಾಗಿದೆ.

ಸರ್ಕಾರದೊಂದಿಗೆ ಮಾತನಾಡಿದ ನಂತರ ಸಿಕ್ಕಿಬಿದ್ದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರನ್ನು ಕೇಳಿತು. "ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ" ಎಂದು ಸಿಜೆಐ ವೇಣುಗೋಪಾಲ್ ಅವರಿಗೆ ಹೇಳಿದರು. ಪಿಐಎಲ್ ಅನ್ನು ಎಜಿ ಕಚೇರಿಗೆ ಕಳುಹಿಸಲಾಗುತ್ತದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಹಲವಾರು ಅಮಾಯಕರ ಬಲಿ ಪಡೆಯುತ್ತಿದೆ. ಇದು ಯುರೋಪ್​ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ರಷ್ಯಾ ಉಕ್ರೇನ್‌ ಜೊತೆ ಮಾತುಕತೆ ನಡೆಸಿದರೂ ಸಂಧಾನ ಸಫಲವಾಗುತ್ತಿಲ್ಲ, ಭಾರತ ಸರ್ಕಾರವು ಆಪರೇಷನ್ ಗಂಗಾ ಹೆಸರಿನಲ್ಲಿ ಕೀವ್, ಖಾರ್ಕಿವ್ ಸೇರಿದಂತೆ ಉಕ್ರೇನ್ ನಗರಗಳಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ಮುಂದುವರೆಸಿದೆ.

ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚುವುದರೊಂದಿಗೆ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಉಕ್ರೇನ್‌ನ ನೆರೆಯ ರಾಷ್ಟ್ರಗಳ ಮೂಲಕ ಪರ್ಯಾಯ ಮಾರ್ಗಗಳ ಮೂಲಕ ಭಾರತವು ವಿಶೇಷ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಪರೇಷನ್ ಗಂಗಾ ಹೆಸರಿನ ಈ ಕಾರ್ಯಾಚರಣೆಯಡಿ ಗುರುವಾರ 3,726 ಭಾರತೀಯರನ್ನು ಬುಕಾರೆಸ್ಟ್‌ನಿಂದ ಎಂಟು ವಿಮಾನಗಳು, ಸುಸೇವಾದಿಂದ ಎರಡು ವಿಮಾನಗಳು, ಕೊಸಿಸ್‌ನಿಂದ ಒಂದು ವಿಮಾನ, ಬುಡಾಪೆಸ್ಟ್‌ನಿಂದ ಐದು ವಿಮಾನಗಳು ಮತ್ತು ಮೂರು ವಿಮಾನಗಳಲ್ಲಿ ಗುರುವಾರ ಭಾರತಕ್ಕೆ ಕರೆತರಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+