ರಾಜಕೀಯ ಇತಿಹಾಸದಲ್ಲಿ ಮಾಜಿ ಗೃಹ ಸಚಿವರ ಬಂಧನ ಇದೇ ಮೊದಲು

ಬೆಂಗಳೂರು, ಆಗಸ್ಟ್ 21: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಗೃಹಸಚಿವರೊಬ್ಬರು ಬಂಧನಕ್ಕೊಳಗಾಗುತ್ತಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಕೇಂದ್ರದ ಮಾಜಿ ಗೃಹ ಸಚಿವರನ್ನು ಪೊಲೀಸರು ಅಥವಾ ಸಿಬಿಐ ಬಂಧಿಸಿದ ಉದಾಹರಣೆ ಇಲ್ಲ.

ಮಾಜಿ ಹಣಕಾಸು ಹಾಗೂ ಗೇಹ ಸಚಿವರಾಗಿರುವ ಚಿದಂಬರಂ ಈ ಕುಖ್ಯಾತಿಗೆ ಕಾರಣರಾಗಿದ್ದಾರೆ. ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿ ಸಿಬಿಐ ಹಾಗೂ ದೆಹಲಿ ಪೊಲೀಸ್ ಇಲಾಖೆಯನ್ನು ಮುನ್ನಡೆಸಿದಂತಹ ವ್ಯಕ್ತಿಯೇ ಇಂದು ಅದೇ ತನಿಖಾ ಸಂಸ್ಥೆಗಳಿಂದ ಬಂಧನಕ್ಕೊಳಗಾಗುತ್ತಿರುವುದು ವಿಪರ್ಯಾಸ.

ಸಿಬಿಐ ಬಳಿಕ ಬಂಧಿಸಲು ತಯಾರಿ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ ಕೂಡ ಅವರು ಹಿಂದೆ ನಿಭಾಯಿಸಿದ್ದ ಹಣಕಾಸು ಸಚಿವಾಲಯದ ವ್ಯಾಪತಿಗೆ ಬರುತ್ತದೆ.

Chidambaram Is The First Former Home Minister Who Is Arrested By CBI

ಆದರೆ ಈ ಕ್ರಮವನ್ನು ಕಾಂಗ್ರೆಸ್ ರಾಜಕೀಯ ದ್ವೇಷ ಎಂದು ಟೀಕಿಸುತ್ತಿದೆ. ಇದೇ ಒಂದು ದಶಕದ ಹಿಂದೆ ಚಿದಂಬರಂ ಗೃಹಸಚಿವರಾಗಿದ್ದಾಗ, ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಸಿಕ್ಕಿ ಹಾಕಿಸಲು ಸೊಹರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಸಬಿಐ ತನಿಖೆ ನಡೆಸಲು ಕಾರಣರಾಗಿದ್ದರು. ಇದರಿಂದ ಅಮಿತ್ ಶಾ ಗುಜರಾತ್‌ನಿಂದ ಹೊರಗುಳಿಯಬೇಕಾಯಿತು ಎಂಬ ಆರೋಪವೂ ಚಿದಂಬರಂ ಮೇಲಿದೆ.

ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗುಜರಾತ್ ಗಲಭೆ ಪ್ರಕರಣದಲ್ಲಿಯೂ ಚಿದಂಬರಂ ಅಗತ್ಯಕ್ಕಿಂತ ಹೆಚ್ಚಿನ ಆಸಕ್ತಿ ತೋರಿಸಿ ತನಿಖೆಗೆ ಒತ್ತಡ ಹೇರಿದ್ದರು ಎನ್ನುವ ಆರೋಪಗಳಿವೆ. ಈಗ ಅದೇ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದ ಆರೋಪದ ಮೇಲೆ ಚಿದಂಬರಂ ಅವರನ್ನು ಬಂಧಿಸಿರುವುದು ವಿಪರ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+