ಛತ್ತೀಸ್ ಗಢದ ಸುಕ್ಮಾದಲ್ಲಿ 18 ನಕ್ಸಲರ ಬಂಧನ
ಛತ್ತಿಸ್ ಗಢ, ಜೂನ್ 8: ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ಪೊಲೀಸರು ಗುರುವಾರ ಭರ್ಜರಿ ಭೇಟೆಯಾಡಿದ್ದಾರೆ. ಇಲ್ಲಿನ ನಕ್ಸಲ್ ಪ್ರಾಬಲ್ಯ ಇರುವ ಸುಕ್ಮಾ ಜಿಲ್ಲೆಯಲ್ಲಿ 18 ನಕ್ಸಲರನ್ನು ಬಂಧಿಸಿದ್ದಾರೆ.
ಇವರೆಲ್ಲಾ ಇತ್ತೀಚೆಗೆ ಸುಕ್ಮಾದ ಬುರ್ಕಾಪಾಲ್ ನಲ್ಲಿ ನಡೆದಿದ್ದ ಪೊಲೀಸರ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದವರು ಎನ್ನಲಾಗಿದೆ.

ಇದೇ ಸುಕ್ಮಾ ಪ್ರದೇಶದಲ್ಲಿ ತಿಂಗಳ ಹಿಂದೆ 26 ಸಿಆರ್'ಪಿಎಫ್ ಯೋಧರನ್ನು ನಕ್ಸಲರು ಹೊಡೆದುರುಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಸ್ತಾರ್ ನಲ್ಲಿ 743 ಜನ ನೇಮಕ
ಇನ್ನು ಛತ್ತೀಸ್ ಗಢದ ಬಸ್ತಾರ್ ಪ್ರದೇಶದಿಂದ 743 ಬುಡಕಟ್ಟು ಜನರನ್ನು ಸಿಆರ್'ಪಿಎಫ್ ನೇಮಕ ಮಾಡಿಕೊಂಡಿದೆ. ಇದರಲ್ಲಿ 242 ಮಹಿಳೆಯರೂ ಸೇರಿದ್ದಾರೆ. ಮೀಸಲಾತಿ ಅಡಿಯಲ್ಲಿ ಇವರನ್ನೆಲ್ಲಾ ನೇಮಕ ಮಾಡಿಕೊಳ್ಳಲಾಗಿದ್ದು ನಕ್ಸಲರ ವಿರುದ್ಧ ಇವರು ಹೋರಾಟ ಮಾಡಲಿದ್ದಾರೆ.












Click it and Unblock the Notifications