Viral: ನಿಮ್ಮ ಫೈಲ್‌ ಸಿಗುತ್ತಿಲ್ಲ ಎಂದು ಸತಾಯಿಸಿದ ಸರ್ಕಾರಿ ಅಧಿಕಾರಿ: "ತಿನ್ನಿ ನೆನಪಾಗಬಹುದು" ಎಂದು ಬಾದಾಮಿ ಸುರಿದ ಸಾರ್ವಜನಿಕ

ಸರ್ಕಾರಿ ಅಧಿಕಾರಿಯೊಬ್ಬರ ವಿಳಂಬ ಧೋರಣೆಗೆ ಛತ್ತೀಸ್‌ಗಢದ ವ್ಯಕ್ತಿಯೊಬ್ಬರು ನೀಡಿದ ವಿಶಿಷ್ಟ ಪ್ರತಿಕ್ರಿಯೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಜಿನ ಮೇಲೆ ಬಾದಾಮಿ ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸತತವಾಗಿ ಕಚೇರಿಗೆ ಅಲೆದರೂ ತಮ್ಮ ಆಸ್ತಿ ದಾಖಲೆಗಳ ಫೈಲ್ ಸಿಗದಿದ್ದಕ್ಕೆ ಬೇಸತ್ತ ಇವರು, "ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಲಿ" ಎಂಬ ವ್ಯಂಗ್ಯದ ಉದ್ದೇಶದೊಂದಿಗೆ ಈ ರೀತಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸರ್ಕಾರಿ ಕೆಲಸಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸಿದೆ.

ವರದಿಗಳ ಪ್ರಕಾರ, ಈ ವ್ಯಕ್ತಿ ತನ್ನ ಆಸ್ತಿಗೆ ಸಂಬಂಧಿಸಿದ ಕೆಲಸಕ್ಕಾಗಿ ಹಲವು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಅಧಿಕಾರಿಗಳು ಪ್ರತಿ ಬಾರಿಯೂ 'ಫೈಲ್ ಹುಡುಕುತ್ತಿದ್ದೇವೆ' ಅಥವಾ 'ನೆನಪಿಲ್ಲ' ಎಂಬ ಹಾರಿಕೆ ಉತ್ತರ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿಹೋದ ವ್ಯಕ್ತಿ, ಅಧಿಕಾರಿಯ ನೆನಪಿನ ಶಕ್ತಿ ಚುರುಕಾಗಲಿ ಎಂದು ಬಾದಾಮಿ ಚೀಲದೊಂದಿಗೆ ಕಚೇರಿಗೆ ಬಂದು, ಅವರ ಮುಂದೆಯೇ ಅದನ್ನು ಸುರಿದು ಪ್ರತಿಭಟಿಸಿದ್ದಾರೆ.

Chhattisgarh

ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಅನೇಕ ಜನರು ಆ ವ್ಯಕ್ತಿಯ ಸೃಜನಾತ್ಮಕ ಪ್ರತಿಭಟನೆಯನ್ನು ಶ್ಲಾಘಿಸಿದ್ದಾರೆ. "ಭ್ರಷ್ಟಾಚಾರ ಮತ್ತು ಕೆಲಸದ ವಿಳಂಬಕ್ಕೆ ಇದು ಸೂಕ್ತ ಉತ್ತರ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿ ಅನುಭವಿಸುವ ನೋವಿಗೆ ಈ ವಿಡಿಯೋ ಧ್ವನಿಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಘಟನೆ?

ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ತಿಫ್ರಾ ಹೌಸಿಂಗ್ ಬೋರ್ಡ್ ಕಚೇರಿಯಲ್ಲಿ ವಿಭಿನ್ನವಾದ ಘಟನೆಯೊಂದು ನಡೆದಿದೆ. ತರುಣ್ ಸಾಹು ಎಂಬ ವ್ಯಕ್ತಿ ತನ್ನ ಆಸ್ತಿ ದಾಖಲೆಗಳ ವಿಳಂಬದಿಂದ ಬೇಸತ್ತು, ಅಧಿಕಾರಿಯ ಮೇಜಿನ ಮೇಲೆ ಬಾದಾಮಿಗಳನ್ನು ಸುರಿಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. "ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಲಿ, ಆಗಲಾದರೂ ನನ್ನ ಫೈಲ್ ಎಲ್ಲಿದೆ ಎಂದು ನೆನಪಿಸಿಕೊಳ್ಳಿ" ಎಂಬ ವ್ಯಂಗ್ಯದ ಸಂದೇಶದೊಂದಿಗೆ ಅವರು ಈ ರೀತಿ ಪ್ರತಿಭಟಿಸಿದ್ದಾರೆ.

ವರ್ಷ ಕಳೆದರೂ ಸಿಗದ ದಾಖಲೆ

ತರುಣ್ ಸಾಹು ಅವರು ಸುಮಾರು ಒಂದು ವರ್ಷದ ಹಿಂದೆ ಮರುಮಾರಾಟದ ಮೂಲಕ ಇಡಬ್ಲ್ಯೂಎಸ್ (EWS) ಫ್ಲಾಟ್ ಒಂದನ್ನು ಖರೀದಿಸಿದ್ದರು. ಮಾಲೀಕತ್ವದ ವರ್ಗಾವಣೆಗಾಗಿ (Mutation) ಅವರು ಕಳೆದ ಒಂದು ವರ್ಷದಿಂದ ಕಚೇರಿಗೆ ಸತತವಾಗಿ ಅಲೆದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಪ್ರತಿ ಬಾರಿಯೂ ಹಾರಿಕೆ ಉತ್ತರ ನೀಡುತ್ತಿದ್ದರು. ಇತ್ತೀಚಿನ ಭೇಟಿಯ ವೇಳೆ ಅಧಿಕಾರಿಗಳು "ನಿಮ್ಮ ಫೈಲ್ ಕಳೆದುಹೋಗಿರಬಹುದು" ಎಂದು ತಿಳಿಸಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಭಟನೆಯ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಣ್ಣ ಕೆಲಸಗಳಿಗೂ ಜನಸಾಮಾನ್ಯರು ಅನುಭವಿಸುವ ಕಿರಿಕಿರಿ ಮತ್ತು ಫೈಲ್‌ಗಳ ವಿಲೇವಾರಿಯಲ್ಲಿ ಆಗುವ ವಿಳಂಬಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಅನೇಕ ನೆಟ್ಟಿಗರು ಈ ಪ್ರತಿಭಟನೆಯನ್ನು "ಗ್ರೇಟ್ ಜಾಬ್" ಎಂದು ಶ್ಲಾಘಿಸಿದ್ದು, ಆಡಳಿತ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+