ಜಡ್ಜ್ ಮನೆ ಕೈದೋಟಕ್ಕೆ ನುಗ್ಗಿದ ಮೇಕೆಗೆ ಜೈಲೂಟ!

Subscribe to Oneindia Kannada

ಛತ್ತೀಸ್ ಘಡ, ಫೆಬ್ರವರಿ, 09: ನಿಮ್ಮ ಮನೆ ಕೈ ತೋಟಕ್ಕೆ ಆಕಳು ಕರುವೋ , ಮೇಕೆಯೋ ನುಗ್ಗಿದರೆ ಏನು ಮಾಡುತ್ತೀರಿ. ಒಂದೆರಡು ಬಾರಿ ಗದರಿಸಿ ಹೊರಕ್ಕೆ ಹಾಕುತ್ತಿರಿ. ಮತ್ತೆ ನುಗ್ಗಿದರೆ ಮಾಲೀಕನ ಕರೆದು ಬುದ್ಧಿ ಹೇಳುತ್ತೀರಿ...

ಆದರೆ ಛತ್ತೀಸ್ ಘಡದ ಕೋರಿಯಾ ಜಿಲ್ಲೆಯ ಜಡ್ಜ್ ವೊಬ್ಬರ ಮನೆಯ ಮುಂದಿನ ತೋಟಕ್ಕೆ ನುಗ್ಗಿ ಧಾಂದಲೆ ಮಾಡಿದ್ದ ಮೇಕೆ ಮತ್ತು ಅದರ ಮಾಲೀಕ ಇಬ್ಬರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.[ಹುಲಿ, ಮೇಕೆಯ ಹಾಡು..."ಯೇ ದೋಸತಿ ಹಮ್ ನಹಿ ಛೋಡೆಂಗೆ"]

goat

ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹೇಮಂತ್ ರಾತ್ರೆ ಅವರ ಹೂದೋಟಕ್ಕೆ ನುಗ್ಗುವ ಮೇಕೆ ಲೂಟಿ ಮಾಡಿ ಬರುತ್ತಿತ್ತು. ಹೀಗಾಗಿ ಮೇಕೆ ಮತ್ತು ಅದರ ಮಾಲೀಕ ಮಾಲೀಕ ಅಬ್ದುಲ್ ಹಸನ್ ನನ್ನು ಬಂಧಿಸಲಾಗಿತ್ತು.

ಜಡ್ಜ್ ಮನೆಯ ಮುಂದೆ ಕಬ್ಬಿಣದ ಗೇಟ್ ಇದೆ. ಆ ಗೇಟ್ ಜಂಪ್ ಮಾಡಿ ಮೇಕೆ ಪದೇ ಪದೇ ಹೋಗಿ ಗಿಡಗಳನ್ನು ತಿಂದು ನಾಶ ಮಾಡಿದೆ ಎಂದು ಸಬ್ ಇನ್ಸ್ ಪೆಕ್ಟರ್ ಆರ್.ಪಿ ಶ್ರೀವಾತ್ಸವ ತಿಳಿಸಿದ್ದಾರೆ.[ಬೆಂಗಳೂರ ಶಾಲೆಗೆ ಮತ್ತೆ ಬಂದ ಚಿರತೆ, ಮೂವರ ಮೇಲೆ ದಾಳಿ]

ಜಡ್ಜ್ ಮನೆಯ ಮುಂದಿನ ಗೇಟು ಹಾರಿ ತನ್ನ ಮೇಕೆ, ಹೂವಿನ ಗಿಡ ಹಾಗೂ ತರಕಾರಿಗಳನ್ನು ತಿಂದು ಬಂದಿದೆ ಎಂಬ ಆರೋಪದಲ್ಲಿ ನನ್ನ ಹಾಗೂ ಮೇಕೆಯ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು ಯಾವ ನ್ಯಾಯ ಎಂದು ಮೇಕೆ ಮಾಲೀಕ ಅಬ್ದುಲ್ ಹಸನ್ ಪ್ರಶ್ನೆ ಮಾಡಿದ್ದಾರೆ.

"ಈ ಕಾಲದಲ್ಲಿ ಮನುಷ್ಯರೇ ಮಾತು ಕೇಳಲ್ಲ. ಅಂಥದ್ರಲ್ಲಿ ಮೇಕೆ ಕೇಳುತ್ತದೆಯೇ? ಹಸಿರಿದ್ದ ಕಡೆ ನುಗ್ಗಿದೆ" ಅಂಥ ನ್ಯಾಯಾಲಯದ ಹೊರಗೆ ಯಾರೋ ಗೊಣಗಿದ್ದು ಜಡ್ಜ್ ಕಿವಿಗೆ ಬೀಳಲಿಲ್ವಂತೆ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bizarre incident in Korea, about 350 km from Chhattisgarh's capital Raipur, a goat has been arrested. The goat which was lebelled as a "repeat offender", was booked under such charges which carry a two to seven year prison term and a fine.
Please Wait while comments are loading...