ಛತ್ತೀಸ್‌ಗಢ: ಮಹಿಳಾ ರೋಗಿಯನ್ನು ಥಳಿಸಿದ ಕುಡುಕ ವೈದ್ಯ- ವಿಡಿಯೋ ವೈರಲ್

ಕೊರ್ಬಾ (ಛತ್ತೀಸ್‌ಗಢ), ನವೆಂಬರ್ 10: ಮಹಿಳಾ ರೋಗಿಗೆ ಮದ್ಯದ ಅಮಲಿನಲ್ಲಿದ್ದ ವೈದ್ಯನೊಬ್ಬ ಆಸ್ಪತ್ರೆಯಲ್ಲಿ ಥಳಿಸಿದ ಘಟನೆ ನಡೆದಿದೆ. ಛತ್ತೀಸ್‌ಗಢ ಕೊರ್ಬಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿದ್ದ ಮಹಿಳೆಗೆ ಥಳಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ರೋಗಿಯ ಮಗ ಗೇರ್ವಾನಿ ಗ್ರಾಮದ ನಿವಾಸಿ ಶ್ಯಾಮ್ ಕುಮಾರ್ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

 Chhattisgarh: Drunk doctor beats female patient - video goes viral

ತಡರಾತ್ರಿ ತಾಯಿ ಸುಖಮತಿ ಅವರ ಆರೋಗ್ಯ ಹದಗೆಟ್ಟ ಪರಿಣಾಮ ಶ್ಯಾಮ್ ಕುಮಾರ್ ಅವರು 108 ಮತ್ತು 112 ಗೆ ಕರೆ ಮಾಡಿದರು. ಆಗ ಶ್ಯಾಮ್ ಕುಮಾರ್ ಅವರು ಇರುವ ಸ್ಥಳಕ್ಕೆ ಅಂಬ್ಯುಲೆನ್ಸ್ ಆಗಮಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಯಿತು. ಇದರಿಂದ ಶ್ಯಾಮ್ ಕುಮಾರ್ ಆಕೆಯ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಕಂಡ ಕೂಡಲೇ ಆಟೋರಿಕ್ಷಾದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆತಂದರು. ಚಿಕಿತ್ಸೆ ವೇಳೆ ವೈದ್ಯರು ನನ್ನ ತಾಯಿಗೆ ಥಳಿಸಿದ್ದಾರೆ. ನಾವು ಅದನ್ನು ವಿರೋಧಿಸಿದಾಗ ಅವರು ನನಗೆ ಸುಮ್ಮನಿರಲು ಹೇಳಿದರು ಎಂದು ಶ್ಯಾಮ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

 Chhattisgarh: Drunk doctor beats female patient - video goes viral

ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ.ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಛತ್ತೀಸ್‌ಗಢ ಆಸ್ಪತ್ರೆಯಲ್ಲಿ ಕುಡುಕ ವೈದ್ಯ ಮಹಿಳೆಯನ್ನು ಥಳಿಸಿದ ವೈರಲ್ ವಿಡಿಯೊ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+