ಛತ್ತೀಸ್ ಗಢ: ಮೋದಿ ಸಭೆಗೂ ಮುನ್ನಾದಿನ ನಕ್ಸಲರ ದಾಳಿಗೆ ನಾಲ್ವರು ಬಲಿ

ದಾಂತೇವಾಡ, ನವೆಂಬರ್ 8: ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಛತ್ತೀಸ್ ಗಢದಲ್ಲಿ ನಕ್ಸಲರು ಮತ್ತೊಂದು ದಾಳಿ ನಡೆಸಿದ್ದು, ಸಿಐಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಅವರ ಭೇಟಿಯ ಮುನ್ನಾದಿನವೇ ದಾಂತೇವಾಡದಲ್ಲಿ ಈ ದಾಳಿ ನಡೆದಿದೆ.

ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿ ಕೇಂದ್ರೀಯ ಕೈಗಾರಿಕಾ ಪಡೆಯ ವಾಹನವನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಸಿಐಎಸ್‌ಎಫ್ ಯೋಧ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

Chhattisgarh dantewada naxal attack 4 killed before narendra modi visit

ನರೇಂದ್ರ ಮೋದಿ ಜಗ್ದಲ್ಪುರದಲ್ಲಿ ಪ್ರಚಾರ ನಡೆಸಲಿದ್ದರೆ, ರಾಹುಲ್ ಗಾಂಧಿ ಎರಡು ದಿನದಲ್ಲಿ ಐದು ಕಡೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ನಕ್ಸಲ್ ಪೀಡಿತ ದಾಂತೇವಾಡ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಎರಡನೆಯ ದಾಳಿಯಾಗಿದೆ. ಅ.30ರಂದು ನಕ್ಸಲರು ದೂರದರ್ಶನದ ಛಾಯಾಗ್ರಾಹಕ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.

ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ.

ಛತ್ತೀಸ್‌ ಗಢದಲ್ಲಿ ನವೆಂಬರ್ 12ರಂದು ಎಂಟು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ 18 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 20ರಂದು ಉಳಿದ 72 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+