• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಧ್ಯಮದವರನ್ನು ಕೊಲ್ಲುವ ಉದ್ದೇಶ ಇರಲಿಲ್ಲ: ನಕ್ಸಲರ ಹೇಳಿಕೆ

|

ಛತ್ತೀಸ್ ಗಢ, ನವೆಂಬರ್ 2: ಛತ್ತೀಡ್‌ಗಢದ ದಾಂತೇವಾಡದಲ್ಲಿ ಅ.30ರಂದು ಚುನಾವಣಾ ಪೂರ್ವ ಪರಿಸ್ಥಿತಿಯ ವರದಿ ಮಾಡಲು ಹೋಗಿದ್ದ ದೂರದರ್ಶನದ ತಂಡದ ಮೇಲೆ ದಾಳಿ ನಡೆಸಿ ಛಾಯಾಗ್ರಾಹಕ ಮತ್ತು ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದ ನಕ್ಸಲರು, ಆ ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಾಧ್ಯಮದವರನ್ನು ಗುರಿಯಾಗಿಸುವ ಯಾವ ಉದ್ದೇಶವೂ ಇರಲಿಲ್ಲ ಎಂದು ನಕ್ಸಲು ಹೇಳಿದ್ದಾರೆ. ಈ ಹೇಳಿಕೆಯನ್ನು ಕೈಬಹರದಲ್ಲಿ ಬರೆದ ಹಾಳೆಯಲ್ಲಿ ಬಿಡುಗಡೆ ಮಾಡಲಾಗಿದೆ.

ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ

ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ದೂರದರ್ಶನದ ಛಾಯಾಗ್ರಾಹಕ ಅಚ್ಯುತಾನಂದ ಸಾಹು ಮೃತಪಟ್ಟಿದ್ದರು. ಅವರನ್ನು ರಕ್ಷಿಸಲು ಮುಂದಾದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಸಹ ನಕ್ಸಲರು ಕೊಂದಿದ್ದರು. ದೂರದರ್ಶನದ ಇತರೆ ಸಿಬ್ಬಂದಿ ತಪ್ಪಿಸಿಕೊಂಡಿದ್ದರು.

ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ

ನಕ್ಸಲರು ಬಿಡುಗಡೆ ಮಾಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್, 'ಮಾಧ್ಯಮದವರ ಮೇಲೆ ದಾಳಿ ಮಾಡುವ ಉದ್ದೇಶ ಇರದಿದ್ದರೆ ಕ್ಯಾಮೆರಾವನ್ನು ಏಕೆ ದೋಚಲಾಯಿತು? ಏಕೆಂದರೆ ಮಾಧ್ಯಮದವರ ಮೇಲೆ ದಾಳಿ ನಡೆಸುವ ಮುನ್ನ ಅಲ್ಲೇನು ನಡೆದಿತ್ತು ಎನ್ನುವುದು ಕ್ಯಾಮೆರಾದಲ್ಲಿ ಸಾಕ್ಷ್ಯಗಳು ದಾಖಲಾಗಿದ್ದವು. ಛಾಯಾಗ್ರಾಹಕನ ದೇಹದಲ್ಲಿದ್ದ ಹಲವು ಗುಂಡೇಟುಗಳು ಮತ್ತು ತಲೆಬುರಡೆಯನ್ನು ಒಡೆದಿರುವುದು ಅದು ತಪ್ಪಿ ನಡೆದ ಘಟನೆ ಅಲ್ಲ ಎನ್ನುವುದಕ್ಕೆ ಪುರಾವೆ' ಎಂದು ಹೇಳಿದ್ದಾರೆ.

ಛತ್ತೀಸಗಡ: ಪೊಲೀಸ್ ಎನ್‌ಕೌಂಟರ್‌ಗೆ 14 ನಕ್ಸಲರು ಬಲಿ

ದೆಹಲಿಯಿಂದ ಬಂದಿದ್ದ ದೂರದರ್ಶನ ವಾಹಿನಿಯ ವರದಿಗಾರರ ತಂಡ, ಬೆಳಿಗ್ಗೆ ಅಭಿಷೇಕ್ ಪಲ್ಲವ್ ಅವರ ಸಂದರ್ಶನ ಮುಗಿಸಿ, ನೀಲಭಯ ಎಂಬ ಸ್ಥಳಕ್ಕೆ ತೆರಳುತ್ತಿದ್ದರು. ಆಗ ನಕ್ಸಲರ ತಂಡ ಅವರ ಮೇಲೆ ದಾಳಿ ನಡೆಸಿತ್ತು.

English summary
Naxals release a statement on Dantewada attack, saying they had no intention of targetting media in the ambush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X