ಛತ್ತೀಸ್‌ಗಢ ವಿಧಾನಸಭಾ ಚುನಾವಣೆ: ಲೋಕ್ ಪೋಲ್ ಸಮೀಕ್ಷೆ ಬಹಿರಂಗ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ನವೆಂಬರ್ ನಲ್ಲಿ ನಡೆಯಲಿದೆ. ಬಹು ನಿರೀಕ್ಷಿತ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗವಾಗಿದೆ. ಲೋಕ್‌ ಪೋಲ್ ಸಂಸ್ಥೆ ಸಮೀಕ್ಷೆ ಮಾಡಿದ್ದು, ವಿವರಗಳನ್ನು ಬಹಿರಂಗಪಡಿಸಿದೆ. ಈ ಬಾರಿ ಚುನಾವಣೆಯಲ್ಲಿ ಅಧಿಕಾರರೂಡ ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಮತ್ತೆ ಗದ್ದುಗೆ ಏರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಕರ್ನಾಟಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್ ಮತ್ತೊಂದು ರಾಜ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಛತ್ತೀಸ್‌ಗಢದಲ್ಲಿ ಮತದಾರರು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪರವಾಗಿದ್ದಾರೆ ಎಂದು ಲೋಕ್‌ ಪೋಲ್ ಸಮೀಕ್ಷೆಯ ಫಲಿತಾಂಶಗಳು ಸೂಚಿಸುತ್ತವೆ.

Chhattisgarh Assembly Election

ಜೂನ್ 1 ರಿಂದ ಜುಲೈ 5 ರ ನಡುವೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಅಂಕಿ-ಅಂಶಗಳನ್ನು ನೀಡಲಾಗಿದೆ. ಸಮೀಕ್ಷೆಯಲ್ಲಿ 13,500 ಜನ ಪಾಲ್ಗೊಂಡಿದ್ದರು ಎಂದು ಲೋಕ್ ಪೋಲ್ ಮಾಹಿತಿ ನೀಡಿದೆ.

ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಐದು ತಿಂಗಳ ಮೊದಲು ನಡೆಸಲಾದ ಸಮೀಕ್ಷೆಯು ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 56-60 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ. ಇನ್ನು ಬಿಜೆಪಿ 25-29 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದ್ದು, ಬಿಎಸ್‌ಪಿ 1-2 ಸ್ಥಾನಗಳಲ್ಲಿ ಗೆದ್ದರೆ, ಇತರೆ 0-1 ಸ್ಥಾನಗಳು ಬರಬಹುದು ಎಂದು ಹೇಳಿದೆ. ಛತ್ತೀಸ್‌ಗಢ 90 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿದ್ದು, ಸರಳ ಬಹುಮತಕ್ಕೆ 46 ಸ್ಥಾನಗಳಲ್ಲಿ ಗೆಲ್ಲಬೇಕಿದೆ.

ಲೋಕ್ ಪೋಲ್ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 43-45 ಶೇಕಡಾ ಮತಗಳ ಹಂಚಿಕೆಯೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಬಿಜೆಪಿ ಶೇಕಡಾ 37-39 ರಷ್ಟು ಮತ ಪಡೆಯಬಹುದು ಎಂದು ಹೇಳಿದೆ. ಇತರ ಪಕ್ಷಗಳಾದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸ್ವತಂತ್ರ ಅಭ್ಯರ್ಥಿಗಳು ಒಂದೆರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಭೂಪೇಶ್ ಭಾಗೇಲ್ ಜನಪ್ರಿಯತೆ ವರದಾನ?

ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರ ಜನಪ್ರಿಯತೆಯು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪರ ಭಾವನೆಗೆ ದೊಡ್ಡ ಅಂಶವಾಗಿದೆ ಎನ್ನಲಾಗಿದೆ. ಭಾಗೇಲ್ ಹೈಲೈಟ್ ಮಾಡಿದ ಪ್ರಾದೇಶಿಕ ಗುರುತು ಮತ್ತು ಪ್ರಾದೇಶಿಕತೆಯ ಕಾರ್ಡ್‌ಗಳು ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿವೆ.

ಆಡಳಿತ ಪಕ್ಷದ ಕೆಲಸಗಳು ಜನರಿಗೆ ಒಪ್ಪಿಗೆಯಾಗಿದ್ದು ಮತ್ತೊಂದು ಅವಧಿಗೆ ಕಾಂಗ್ರೆಸ್ ಅವಕಾಶ ನೀಡಲು ಇಲ್ಲಿನ ಮತದಾರರು ಬಯಸಿದ್ದಾರೆ. ಆದರೂ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಪಡೆದ ಸೀಟುಗಳು ಕಡಿಮೆಯಾಗಿದ್ದು, ಬಿಜೆಪಿ ಗೆಲ್ಲುವ ಸೀಟುಗಳ ಸಂಖ್ಯೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+