ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃತಿ ಚೌರ್ಯ ಆರೋಪ ಅಲ್ಲಗಳೆದ ಚೇತನ್ ಭಗತ್

By Mahesh
|
Google Oneindia Kannada News

ಪಾಟ್ನ, ನ.24: ನಾನು ಏನು ಎಂಬುದು ನನ್ನ ಓದುಗರಿಗೆ ಚೆನ್ನಾಗಿ ಗೊತ್ತು. ಹತ್ತಾರು ವರ್ಷಗಳಿಂದ ಕೃತಿಗಳನ್ನು ರಚಿಸುತ್ತಿದ್ದೇನೆ. ನಾನು ಕೃತಿ ಚೌರ್ಯ ಮಾಡಿ ಲಾಭ ಪಡೆಯಬೇಕಾಗಿಲ್ಲ ಎಂದು ಜನಪ್ರಿಯ ಸಾಹಿತಿ ಚೇತನ್ ಭಗತ್ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಕೃತಿ ಚೌರ್ಯದ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಾಫ್ ಗರ್ಲ್ ಫ್ರೆಂಡ್ ಕಥೆ ಕದಿಯಲಾಗಿದೆ ಎಂದು ಬಿಹಾರದ ಪ್ರೊಫೆಸರ್ ರೊಬ್ಬರು ಆರೋಪಿಸಿದ್ದಾರೆ.

ಜನಪ್ರಿಯತೆ ಜೊತೆಗೆ ವಿವಾದಗಳನ್ನು ಕಟ್ಟಿಕೊಂಡೇ ಬೆಳೆದಿರುವ ಚೇತನ್ ಭಗತ್ ಅವರ ಮೇಲೆ ಕೃತಿ ಚೌರ್ಯ ಆರೋಪ ಹೊರೆಸಿದವರು ಬಿಹಾರದ ಇಂಗ್ಲೀಷ್ ವಿದ್ವಾಂಸ ಡಾ. ಬಿರ್ಬಲ್ ಝಾ. 'ಇಂಗ್ಲೀಷಿಯಾ ಬೋಲಿ' ಕೃತಿಯನ್ನು ನಕಲು ಮಾಡಿ ಹಾಫ್ ಗರ್ಲ್ ಫ್ರೆಂಡ್ ಕಥೆ ರಚಿಸಲಾಗಿದೆ ಎಂದು ವಿದ್ವಾಂಸ ಝಾ ಆರೋಪಿಸಿದ್ದಾರೆ.

Controversy catches up with Chetan Bhagat, this time the writer is accused of plagiarism

ಭಗತ್ ಅವರು ಈ ವರ್ಷ ನಮ್ಮ ವಿದ್ಯಾಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದರು. ಜೊತೆಗೆ ನಾನು ರಚಿಸಿದ್ದ ನಾಟಕವನ್ನು ನೋಡಿ ಆನಂದಿಸಿದ್ದರು. ನನ್ನ ಕಾದಂಬರಿ ಹಾಗೂ ನಾಟಕದ ಕಥಾವಸ್ತುವನ್ನು ಆಧಾರವಾಗಿಟ್ಟುಕೊಂಡು ಭಗತ್ ತಮ್ಮ ಮುಂದಿನ ಕೃತಿ ರಚಿಸಿದ್ದಾರೆ ಎಂದು ಪಾಟ್ನದ ಸ್ಪೋಕನ್ ಇಂಗ್ಲೀಷ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ. ಝಾ ಆರೋಪಿಸಿದ್ದಾರೆ. [ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]

ಭಗತ್ ಗೆ ಉಭಯ ಸಂಕಟ: ಕೃತಿ ಚೌರ್ಯದ ಆರೋಪ ಒಂದು ಕಡೆಯಾದರೆ ದರ್ಮಾವ್ ನ ರಾಜ ಕುಟುಂಬದಿಂದ ಚೇತನ್ ಭಗತ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ತಮ್ಮ ಕೃತಿಯಲ್ಲಿ ರಾಜ ಪರಿವಾರದ ಬಗ್ಗೆ ಅವಹೇಳನಕಾರಿ ಅಂಶಗಳನ್ನು ದಾಖಲಿಸಿ ಭಗತ್ ಅವರು ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ ಪರಿವಾರ ನಿಷ್ಠಾವಂತರು ಭಗತ್ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದ ಘಟನೆಯೂ ವರದಿಯಾಗಿದೆ. ಇವೆಲ್ಲ ಆರೋಪಗಳಿಗೆ ಚೇತನ್ ಟ್ವೀಟ್ ಮೂಲಕ ನೀಡಿರುವ ಉತ್ತರ ಮುಂದಿದೆ.

English summary
Best-selling author Chetan Bhagat is caught up in yet another controversy and this time the controversy surrounds his latest and much-hyped novel 'Half Girlfriend.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X