ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಯುಎಸ್ ರಾಯಭಾರಿ ಕಚೇರಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸಮಾವೇಶ

|
Google Oneindia Kannada News

ಚೆನ್ನೈ, ಅಕ್ಟೋಬರ್ 15: ಚೆನ್ನೈನಲ್ಲಿರುವ ಅಮೇರಿಕಾ ದೂತಾವಾಸವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(ಐಐಟಿ ಮದ್ರಾಸ್) ಮತ್ತು ಇಂಡಿಯನ್ ಸ್ಪೇಸ್ ಅಸೋಸಿಯೇಷನ್ (ಐಎಸ್‌ಪಿಎ) ಆಶ್ರಯದಲ್ಲಿ 'ಸ್ಪೇಸ್ ಟೆಕ್ನಾಲಜಿ'ಗೆ ಸಂಬಂಧಿಸಿದಂತೆ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅಕ್ಟೋಬರ್ 15ರಂದು ಶನಿವಾರ ಚಾಲನೆ ನೀಡಿತು.
ಅಕ್ಟೋಬರ್ 15-17ರವರೆಗೆ ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಪಾಲುದಾರರು ಐಐಟಿ ಮದ್ರಾಸ್‌ನಲ್ಲಿ ಒಗ್ಗೂಡಿ ಉದ್ಯಮದ ಅವಕಾಶಗಳನ್ನು ಹೆಚ್ಚಿಸುವ ಮತ್ತು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಹಾಗೂ ಆಚೆಗೂ ಸಹಯೋಗ ವಿಸ್ತರಿಸುವ ಮಾರ್ಗಗಳ ಕುರಿತು ಈ ಸಮಾವೇಶದಲ್ಲಿ ಚರ್ಚೆ ನಡೆಸಲಿದ್ದಾರೆ.

ಅಮೆರಿಕಾದಲ್ಲಿ ಸಾಧನೆಗೈದ ಭಾರತೀಯ ವೀಣಾ ರೆಡ್ಡಿ ಬಗ್ಗೆ ನಿಮಗೆಷ್ಟು ಗೊತ್ತು?ಅಮೆರಿಕಾದಲ್ಲಿ ಸಾಧನೆಗೈದ ಭಾರತೀಯ ವೀಣಾ ರೆಡ್ಡಿ ಬಗ್ಗೆ ನಿಮಗೆಷ್ಟು ಗೊತ್ತು?

ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಸ್ಟೇಟ್ಸ್, ಭಾರತ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಪೂರ್, ದಕ್ಷಿಣ ಕೊರಿಯಾ, ಜರ್ಮನಿ, ಯುನೈಟೆಡ್ ಕಿಂಗ್‌ಡಂ, ಮಲೇಷಿಯಾ, ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯ ಸೇರಿದಂತೆ ಇಂಡೊ- ಪೆಸೆಪಿಕ್ ಪ್ರಾಂತ್ಯಗಳೂ ಸೇರಿದಂತೆ 80 ವಿಶೇಷ ಆಹ್ವಾನಿತರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದು, ಬಾಹ್ಯಾಕಾಶ ನೀತಿ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಬಾಹ್ಯಾಕಾಶ ಉದ್ಯಮಶೀಲತೆಯ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

Chennai: IIT Madras partners with US Consulate General to host Space Technology conclave

ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರ ಮಾತು:
ಈ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ನವದೆಹಲಿಯ ಅಮೇರಿಕ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸೆಲರ್ ಫಾರ್ ಇಕನಾಮಿಕ್, ಎನ್ವಿರಾನ್ ಮೆಂಟ್, ಸೈನ್ಸ್ ಅಂಡ್ ಟೆಕ್ನಾಲಜಿ ಅಫೇರ್ಸ್ ಆಂಡ್ರ್ಯೂ ಸ್ಕಫ್ಲೆಟೌಸ್ಕಿ ಮಾತನಾಡಿದರು.
"ನಮ್ಮ ಬಾಹ್ಯಾಕಾಶ ಬಾಂಧವ್ಯದಲ್ಲಿ ಮತ್ತು ಖಾಸಗಿ ವಲಯದಲ್ಲಿ ತೊಡಗಿಕೊಂಡಿರುವ ಇತರೆ ಇಂಡೊ-ಪೆಸಿಫಿಕ್ ಪಾಲುದಾರರಲ್ಲಿ ಅತ್ಯಂತ ಹೆಚ್ಚು ಬೆಳವಣಿಗೆ ಪ್ರಗತಿಯ ಸಾಮರ್ಥ್ಯವಿದೆ. ಭಾರತದ ಬಾಹ್ಯಾಕಾಶ ವಲಯವು ಪರಿವರ್ತನೆಯತ್ತ ಮುನ್ನಡೆದಿದ್ದು ಖಾಸಗಿ ಕಂಪನಿಗಳು ಉಡ್ಡಯನ ವಾಹಕಗಳು, ಉಪಗ್ರಹಗಳು, ಗ್ರೌಂಡ್ ಸ್ಟೇಷನ್‌ಗಳು ಮತ್ತಿತರೆ ಅಂಶಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಪ್ರಭಾವಿ ಪಾತ್ರ ವಹಿಸುತ್ತಿದ್ದು ಅದು ಬಾಹ್ಯಾಕಾಶ ಆವಿಷ್ಕಾರ ಮತ್ತು ಅಪ್ಲಿಕೇಷನ್‌ಗಳ ಹೃದಯದಲ್ಲಿದೆ" ಎಂದು ಹೇಳಿದರು.

ಮಿನಿಸ್ಟರ್ ಕೌನ್ಸೆಲರ್ ಸ್ಕಫ್ಲೆಟೌಸ್ಕಿ ಹೇಳಿದ್ದೇನು?:
ಮಿನಿಸ್ಟರ್ ಕೌನ್ಸೆಲರ್ ಸ್ಕಫ್ಲೆಟೌಸ್ಕಿ, "ಭಾರತದ ಉದ್ಯಮಗಳು ಈಗ ಭೂಮಿಯನ್ನು ಗಮನಿಸಲು ಮತ್ತು ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲು ಸಣ್ಣ ಉಡಾವಣಾ ವಾಹನಗಳನ್ನು ನಿರ್ಮಿಸುತ್ತಿವೆ. ಇಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಇಂಡೊ-ಪೆಸಿಫಿಕ್ ಪ್ರದೇಶದಾದ್ಯಂತ ವ್ಯಾಪಾರ, ಹೂಡಿಕೆ ಮತ್ತು ತಾಂತ್ರಿಕ ಸಹಯೋಗದಿಂದ ಈ ವಾಣಿಜ್ಯ ವಲಯದ ಬೆಳವಣಿಗೆ ವೇಗ ಹೆಚ್ಚಿಸಬಹುದು" ಎಂದರು.

Chennai: IIT Madras partners with US Consulate General to host Space Technology conclave

ಭವಿಷ್ಯದ ನೀಲನಕ್ಷೆ ಶಿಫಾರಸು:
ಈ ವಿಚಾರ ಸಂಕಿರಣವು ಅಸೋಸಿಯೇಷನ್ ಆಫ್ ಸ್ಪೇಸ್ ಎಂಟರ್‌ಪ್ರಿನ್ಯೂರ್ಸ್ ಇನ್ ಇಂಡೊ-ಪೆಸಿಫಿಕ್(ಎಎಸ್‌ಇಐಪಿ) ಎಂಬ ನೆಟ್‌ವರ್ಕಿಂಗ್ ಮತ್ತು ಲಾಬಿ ನಡೆಸುವ ವೇದಿಕೆಯನ್ನು ಬಾಹ್ಯಾಕಾಶ ವಲಯದಲ್ಲಿ ರೂಪಿಸುವ ಗುರಿ ಹೊಂದಿದೆ. ಪಾಲುದಾರರು ಅಂತಾರಾಷ್ಟ್ರೀಯ ವೈಮಾನಿಕ ಉದ್ಯಮ ಮತ್ತು ವೈಜ್ಞಾನಿಕ ಬಾಹ್ಯಾಕಾಶ ಸಹಯೋಗಗಳಲ್ಲಿ ಭವಿಷ್ಯದ ನೀಲನಕ್ಷೆ ಶಿಫಾರಸು ಮಾಡಲಿದ್ದಾರೆ.

ಉದ್ಘಾಟನಾ ಭಾಷಣ ಮಾಡಿದ ಡಾ.ಸತ್ಯ ಚಕ್ರವರ್ತಿ:
ಐಐಟಿ ಮದ್ರಾಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಕಂಬಷನ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ (ಎನ್‌ಸಿಸಿಆರ್‌ಡಿ) ನಿರ್ದೇಶಕ ಡಾ.ಸತ್ಯ ಚಕ್ರವರ್ತಿ, ಉದ್ಘಾಟನಾ ಭಾಷಣ ಮಾಡಿದರು.
ಈ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಖ್ಯಾತ ವಿಜ್ಞಾನಿ ಮತ್ತು ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಅಂಡ್ ಆಥರೈಸೇಷನ್ ಸೆಂಟರ್(ಐಎನ್-ಎಸ್‌ಪಿಎಸಿಇ) ಟೆಕ್ನಿಕಲ್ ಡೈರೆಕ್ಟರ್ ಪ್ರೊಫೆಸರ್ ರಾಜೀವ್ ಜ್ಯೋತಿ, ಸ್ಪೇಸ್ ಇಂಡಸ್ಟ್ರಿ ಅಸೋಸಿಯೇಷನ್ ಆಫ್ ಆಸ್ಟ್ರೇಲಿಯಾ(ಎಸ್‌ಐಎಎ) ಡಾ. ಮೈಕಲ್‌ ಮೆಲಿಂಗ್, ಜನರಲ್‌ ಪಾರ್ಟ್ನರ್ ಸ್ಟಾರ್ಬ್ರಿಡ್ಜ್‌ ವೆಂಚರ್ ಕ್ಯಾಪಿಟಲ್‌, ಹೆಲಿಫಿಸಿಕ್ಸ್ ನ ನ್ಯೂ ಇನಿಷಿಯೇಟಿವ್ಸ್ ಹಿರಿಯ ಸಲಹೆಗಾರರು ಮತ್ತು ಪ್ರೋಗ್ರಾಮ್ ಸೈಂಟಿಸ್ಟ್ ಡಾ.ಮಧುಲಿಕಾ ಗುಹಾತಕುರ್ತಾ, ಇಂಡಿಯನ್ ಸ್ಪೇಸ್ ಅಸೋಸಿಯೇಷನ್‌ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅನಿಲ್ ಕುಮಾರ್(ನಿವೃತ್ತರು); ಮತ್ತು ವರ್ಲ್ಡ್ ಜಿಯೊಸ್ಪೇಷಿಯಲ್ ಇಂಡಸ್ಟ್ರಿ ಕೌನ್ಸಿಲ್(ಡಬ್ಲ್ಯೂಜಿಐಸಿ)ಯ ಯುನೈಟೆಡ್ ನೇಷನ್ಸ್ ಅಂಡ್ ರಿಲೇಟೆಡ್ ಎಂಟಿಟೀಸ್ ಆಸ್ಟ್ರೇಲಿಯಾದ ಅಧ್ಯಕ್ಷ ಪ್ರೊ.ಡಾ.ಜಾಫರ್ ಸಾದಿಕ್ ಮೊಹಮದ್-ಗೌಸ್ ಉಪಸ್ಥಿತರಿದ್ದರು.

English summary
Chennai: IIT Madras partners with US Consulate General to host Space Technology conclave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X