Chennai Rain Alert: ಚೆನ್ನೈನಲ್ಲಿ ಗುರುವಾರ ಹಠಾತ್ ಮಳೆ ದಾಖಲು: ಈ ಜಿಲ್ಲೆಗಳಲ್ಲಿ ಒಂದು ವಾರ ವರುಣಾರ್ಭಟ

ಚೆನ್ನೈ, ಜನವರಿ 04: ತಮಿಳುನಾಡು ರಾಜ್ಯ ರಾಜಧಾನಿಯಲ್ಲಿ ಗುರುವಾರ ಸಂಜೆ ಹಠಾತ್ ಮಳೆ ಸುರಿಯಿತು. ಬಿಸಿಲಿನ ಅನೇಕ ದಿನಗಳನ್ನು ಕಂಡಿದ್ದ ಚೆನ್ನೈ ನಗರದ ಜನರಿಗೆ ಇಂದು ಮಳೆ ತಂಪೆರೆಯಿತು. ಸಂಜೆ 4 ಗಂಟೆಗೆ ನೀಲಿ ಆಕಾಶ ಮರೆಯಾಗಿ ಕಪ್ಪು ಮೋಡಗಳು ಆವೃತವಾದವು. ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ದಾಖಲಾಯಿತು.

ದಿಢೀರನೇ ಬಂದ ಮಳೆಯಿಂದ ಚೆನ್ನೈ ನಗರದ ಅಣ್ಣಾ ಸಲೈ ಪ್ರದೇಶ ಸೇರಿದಂತೆ ಇನ್ನಿತರ ಕಡೆಗಳಲ್ಲಿ, ವೃತ್ತ ಮತ್ತು ಕೆಲವು ರಸ್ತೆ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಕಂಡು ಬಂತು. ರಸ್ತೆ ಮೇಲೆ ನಿಂತ ನೀರಲ್ಲೇ ವಾಹನಗಳು ಸಂಚರಿದವು. ಕೆಲ ಕಾಲ ಸವಾರರು ಕಿರಿ ಕಿರಿಯನ್ನು ಅನುಭವಿಸಿದರು.

Chennai has Face Today Sudden Rain Lashes, IMD Predicts Heavy Rain for Next 1 Week, Forecast

ಹಲವು ದಿವಸಗಳ ಹಿಂದೆ ಬಂಗಾಳಕೊಲ್ಲಿಯ ವೈಪರಿತ್ಯದಿಂದ ಸ್ವಲ್ಪ ಮಳೆ ಆಗಿದೆ. ಅದಾದ ನಂತರ ಇಂದು ಚೆನ್ನೈ ನಗರದ ವಾಯುವ್ಯ ಭಾಗಗಳು ಹಾಗೂ ಪಶ್ಚಿಮ ಉಪನಗರಗಳು ತೀವ್ರವಾದ ಮಂತ್ರಗಳನ್ನು ಪಡೆದಿವೆ. ಒಂದೆರಡು ದಿನ ದಕ್ಷಿಣ ತಮಿಳುನಾಡಿನ ಭಾಗದ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಮಾಪನಶಾಸ್ತ್ರ ಇಲಾಖೆಯು ಮುನ್ಸೂಚನೆ ನೀಡಿದೆ.

ಮುಂದಿನ ಒಂದು ವಾರ ಮಳೆ

ಅರಬ್ಬಿ ಸಮುದ್ರದ್ಲಲಿನ ಹವಾಮಾನ ಬದಲಾವಣೆಯು ಕರ್ನಾಟಕ ಸೇರಿದಂತೆ ತಮಿಳುನಾಡಿನ ಮೇಲೆ ಪ್ರಭಾವ ಭೀರಿದೆ. ತಮಿಳುನಾಡಿನಲ್ಲಿ ಪುದುಚೇರಿ ಮತ್ತು ಕಾರೈಕಲ್ ಪ್ರದೇಶದ ಕೆಲವು ಭಾಗಗಳಲ್ಲಿ ಇಂದು ಗುರುವಾರ ಜನವರಿ 4ರಿಂದ ಮುಂದಿನ ಒಂದು ವಾರದವರೆಗೆ ಹಗುರದಿಂದ ಸಾಧಾರಣವಾಗಿ ಮಳೆ ಆಗುವ ಲಕ್ಷಣಗಳಿವೆ.

ಚೆನ್ನೈ ಸುತ್ತಮುತ್ತಲಿನ ಥೇಣಿ, ದಿಂಡಿಗಲ್ ಮತ್ತು ನೀಲಗಿರಿ ಸೇರಿದಂತೆ ಇನ್ನೂ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ ಕೆಲವೆಡೆ ಬೆಳಗ್ಗೆ ದಟ್ಟ ಮಂಜು ಕವಿಯುವ ಸಂಭವವಿದೆ.

Chennai has Face Today Sudden Rain Lashes, IMD Predicts Heavy Rain for Next 1 Week, Forecast

ಚೆನ್ನೈ ವಿವಿಧ ಜಿಲ್ಲೆಗಳ ಮಳೆ ಮುನ್ಸೂಚನೆ ಹೀಗಿದೆ

ತಮಿಳುನಾಡಿನ ಕರಾವಳಿಯ ಹಲವೆಡೆ, ಒಳನಾಡಿನ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಪುದುಕೊಟ್ಟೈ, ತಂಜಾವೂರು, ತಿರುವರೂರ್, ಕನ್ಯಾಕುಮಾರಿ, ತಿರುನಲ್ವೇಲಿ, ತೆಂಕಾಸಿ, ನಾಗಪಟ್ಟಣಂ, ವಿರುದುನಗರ ಮೈಲಾಡುತುರೈ ಜಿಲ್ಲೆಗಳಲ್ಲಿ ಶನಿವಾರ (ಜ.6) ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆ ಬೀಳಲಿದೆ.

ಅದೇ ರೀತಿ, ತಮಿಳುನಾಡಿನ ಕರಾವಳಿಯಲ್ಲಿ ಹಲವೆಡೆ ಮತ್ತು ಒಳನಾಡಿನ ತಮಿಳುನಾಡು, ಪುದುವೈ ಮತ್ತು ಕಾರೈಕಲ್‌ನಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಕಡಲೂರು, ವಿಲ್ಲುಪುರಂ, ತಿರುವಳ್ಳೂರು, ಚೆನ್ನೈ, ರಾಣಿಪೇಟ್ ಜಿಲ್ಲೆಗಳು, ಚೆಂಗಲ್ಪಟ್ಟು, ಕಾಂಚೀಪುರಂ, ಮತ್ತು ಪುದುಚೇರಿಯಲ್ಲಿ ಜನವರಿ 8 ರಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಐಎಂಡಿ ತಿಳಿಸಿದೆ.

ಚೆನ್ನೈ ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ತಾಪಮಾನ ಕಡಿಮೆ ಇರಲಿದೆ. ಗರಿಷ್ಠ ತಾಪಮಾನ 30ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು 22ರಿಂದ 23 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+