Viral Video: ಅಡುಗೆ ವಿಡಿಯೋಗೆ ಕೊಳಕು ಕಾಮೆಂಟ್: ಚೆಫ್ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ, ವೈರಲ್!

Chef Cooking Video: ಭಾರತದಲ್ಲಿ ಜಾತಿ ತಾರತಮ್ಯದಷ್ಟೇ ವರ್ಣ ತಾರತಮ್ಯವೂ ಸಹ ಹೆಚ್ಚಾಗಿದೆ. ಆದರೆ, ಈ ವಿಚಾರ ಚರ್ಚೆಯಾಗಿದ್ದು, ಬಹಳ ಕಡಿಮೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚೆಫ್ (Chef)ವೊಬ್ಬರ ಅಡುಗೆ ವಿಚಾರ ಚರ್ಚೆ ಆಗದೆ ಅವರ ದೇಹದ ಬಣ್ಣದ ಬಗ್ಗೆ ಚರ್ಚೆ ಆಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಚೆಫ್‌ವೊಬ್ಬರ ಬಣ್ಣದ ಬಗ್ಗೆ ಅಪಹಾಸ್ಯ ಮಾಡಲಾಗಿದೆ. ಇದಕ್ಕೆ ಆ ಚೆಫ್ ಸಹ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವು ಇದೀಗ ವೈರಲ್ ಆಗುತ್ತಿದ್ದು, ಕೆಲವರ ಮನಸ್ಥಿತಿ ಎಷ್ಟು ಕೆಟ್ಟದಾಗಿ ಎನ್ನುವುದನ್ನು ತೋರಿಸಿದೆ.

ಕೇರಳ ಮೂಲದ ಚೆಫ್‌ವೊಬ್ಬರನ್ನು ಬಣ್ಣದ ಕಾರಣಕ್ಕೆ ಅಪಹಾಸ್ಯ ಮಾಡಲಾಗಿದೆ. ಈ ಕಾಮೆಂಟ್ ಅನ್ನು ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯ ಹಂಚಿಕೊಂಡಿದ್ದಾರೆ. ಚೆಫ್ ತಾವು ಮಾಡುವ ಅಡುಗೆಗಳನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ವ್ಯಕ್ತಿಯೊಬ್ಬರು ಮಾಡಿರುವ ಕಾಮೆಂಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಚೆಫ್‌ನ ಮೈಬಣ್ಣದ ಬಗ್ಗೆ ಮಾಡಿರುವ ಕಾಮೆಂಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Chef Cooking Video Troll Comment on Cooking Video Chef s Classy Response Wins Hearts Online

ಕಾರ್ತಿಕೇಯನ್ ಸೆಲ್ವರಾಜ್ ಎನ್ನುವ ಕೇರಳದ ಚೆಫ್ ತಮ್ಮ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ಖಾತೆ imkarthi_89ಯ ಮೂಲಕ ವಿವಿಧ ಅಡುಗೆ ವಿಡಿಯೋಗಳನ್ನು ಹಂಚಿಕೊಳ್ಳುವುದಿದೆ. ಕಾರ್ತಿಕೇಯನ್ ಸೆಲ್ವರಾಜ್ ಅವರು, ಚಿಕನ್ ಫ್ರೈಡ್ ರೈಸ್‌ನ ರೆಸಿಪಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಕಾರ್ತಿಕೇಯನ್ ಸೆಲ್ವರಾಜ್ ಚಿಕನ್ ಫ್ರೈಡ್ ರೈಸ್ ಮಾಡುವುದು ಹೇಗೆ ಎಂದು ತೋರಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗಿದೆ. 129,000ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದು, ಮೆಚ್ಚಿಕೊಂಡಿದ್ದಾರೆ. ಆದರೆ. ankit_gupta0716 ಎನ್ನುವ ವ್ಯಕ್ತಿ ಚೆಫ್‌ನ ಮೈ ಬಣ್ಣದ ಬಗ್ಗೆ ಮಾತನಾಡಿದ್ದಾನೆ.

Chef Cooking Video: ಚೆಫ್ ಕೊಟ್ಟ ರಿಪ್ಲೈ ವೈರಲ್

ನಿಮ್ಮ ಕೈ ಬಣ್ಣ್‌ ತುಂಬಾನೇ ಕಪ್ಪಾಗಿದೆ, ನಾನು ನೀವು ಮಾಡಿದ ಅಡುಗೆ ತಿನ್ನಲ್ಲ ಅಂತ ಕಾಮೆಂಟ್ ಮಾಡಿದ್ದಾನೆ. ಸೆಲ್ವರಾಜ್ ಕಾಮೆಂಟ್ ಅನ್ನು ತೆಗೆದು ಹಾಕದೆ ಇರುವುದಕ್ಕೆ ನಿರ್ಧರಿಸಿದ್ದಾರೆ. ಬದಲಾಗಿ ಅವರು ತಮ್ಮ ವೃತ್ತಿಜೀವನದಲ್ಲಿ ಸೇವೆ ಸಲ್ಲಿಸಿದ ಕೆಲವು ಪ್ರಮುಖ ವಿಷಯಗಳನ್ನು ಹೈಲೈಟ್ ಮಾಡುವ ಮೂಲಕ Instagram ಪೋಸ್ಟ್‌ನ ಕಾಮೆಂಟ್‌ಗೆ ನಯವಾಗಿ ತಿರುಗೇಟು ನೀಡಿದ್ದಾರೆ.

"ಸರಿ, ಸರಿ, ಈ ಕಪ್ಪು ಚರ್ಮದ ಚೆಫ್ ಇದನ್ನು ಪೂರೈಸಿದ್ದಾರೆ' ಎನ್ನುವ ಸಾಲುಗಳೊಂದಿಗೆ "ಭಾರತದ ಕೆಲವು ಸರ್ಕಾರಿ ಮುಖ್ಯಸ್ಥರು", "ಭಾರತದ ಕೆಲವು ಅಧ್ಯಕ್ಷರು", ಪ್ರಿನ್ಸ್ ಚಾರ್ಲ್ಸ್ ಮತ್ತು ಬೆಲ್ಜಿಯಂನ ರಾಜರಿಗೆ ಅಡುಗೆ ಮಾಡಿದ್ದೇನೆ ಎಂದಿದ್ದಾರೆ. ಜಗತ್ತಿನಾದ್ಯಂತ ತುಂಬಾ ಕರುಣಾಳು ಅತಿಥಿಗಳಿದ್ದಾರೆ. ಸರಿ, ಪಟ್ಟಿ ತುಂಬಾ ದೊಡ್ಡದಾಗಿದೆ; ಅದನ್ನು ವಿವರಣೆ ನೀಡಲು ಸಹ ಆಗಲ್ಲ ಎಂದು ಚೆಫ್ ಹೇಳಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಫಿದಾ ಆಗಿದ್ದಾರೆ.

ತಮಿಳುನಾಡಿನಲ್ಲಿ ಜನಿಸಿದ ಕಾರ್ತಿಕೇಯನ್ ಸೆಲ್ವರಾಜ್, ತಾಜ್ ಗ್ರೂಪ್ ಆಫ್ ಹೋಟೆಲ್‌ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಚೆನ್ನೈ, ಕೊಚ್ಚಿ ಮತ್ತು ಮಧುರೈನಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಸೆಲ್ವರಾಜ್ ಅವರ Instagram ಖಾತೆಯನ್ನು 818,000 ಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+