ಛತ್ತೀಸ್‌ಘಡ ಚುನಾವಣೆ: ನಕ್ಸಲರ ಬೆದರಿಕೆ ಮಧ್ಯೆಯೂ ಭರ್ಜರಿ ಮತದಾನ

ರಾಯಪುರ, ನವೆಂಬರ್ 12: ನಕ್ಸಲರ, ಮಾವೋವಾದಿಗಳ ಬೆದರಿಕೆ ಮಧ್ಯೆಯೂ ಛತ್ತೀಸ್‌ಘ ರಾಜ್ಯದ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮವಾಗಿಯೇ ಮತದಾನವಾಗಿದೆ.

ಮೊದಲ ಹಂತದಲ್ಲಿ ಇಂದು 18 ಕ್ಷೇತ್ರಗಳಿಗಷ್ಟೆ ಮತದಾನ ಆಯಿತು. ಒಟ್ಟು ಶೇ 70 ಮತದಾನ ಆಗಿದೆ. ಸಕ್ಸಲರು, ಮಾವೋವಾದಿಗಳು ಬಹಿರಂಗವಾಗಿಯೇ ಮತದಾನ ಮಾಡದಂತೆ ಎಚ್ಚರ ನೀಡಿದ್ದರೂ ಸಹಿತ ಜನರು ಮತಗಟ್ಟೆಗಳಿಗೆ ಬಂದು ಮತಚಲಾಯಿಸಿದ್ದಾರೆ.

ಕೆಲವು ಕಡೆ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ಆಗಿದೆ. ಮಜ್ಜಿಗುದಾ ಗ್ರಾಮದ ಬಳಿ ಪೊಲೀಸರು ಹಾಗೂ ನಕ್ಸಲರ ನಡುವೆ ಮಾರಾಮಾರಿ ಆಗಿದ್ದು, ಕೆಲವು ಪೊಲೀಸರು ಗಾಯಗೊಂಡ ವರದಿ ಆಗಿದೆ.

Chattisgarh Elections 70 per cent voting done in first stage

ನಕ್ಸಲರ ಭಾರಿ ಪ್ರಭಾವ ಇರುವ ದಂತೆವಾಡ, ಭೀಜಿ, ಗೋರ್ಖಾ ಪ್ರದೇಶಗಳಲ್ಲಿ ಕಳೆದ ಬಾರಿಗಿಂತಲೂ ಉತ್ತಮವಾಗಿ ಮತದಾನ ನಡೆದಿದೆ. ಕಳೆದ ಬಾರಿ ಒಂದೂ ಮತ ಚಲಾವಣೆ ಆಗದಿದ್ದ ಭೀಜಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಬೆಳಿಗ್ಗೆ 10 ಗಂಟೆಗೆ 72 ಮತಗಳು ಚಲಾವಣೆ ಆಗಿದ್ದವು.

ಛತ್ತೀಸ್‌ಘಡ್‌ದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆ ಈಗ ನಡೆದಿದ್ದು, ಇನ್ನೂ 72 ಕ್ಷೇತ್ರಗಳಿಗೆ ನವೆಂಬರ್ 20 ರಂದು ಎರಡನೇಯ ಹಂತದ ಮತದಾನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+