ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಢ: ರಾಜೀನಾಮೆಗೆ ಮುಂದಾದ ಬಿಜೆಪಿ ಸಿಎಂ ರಮಣ್ ಸಿಂಗ್‌

|
Google Oneindia Kannada News

ರಾಯಪುರ, ಡಿಸೆಂಬರ್ 11: ಛತ್ತೀಸ್‌ಗಢದಲ್ಲಿ ಮೂರು ಬಾರಿ ಸರ್ಕಾರ ರಚಿಸಿದ್ದ ಬಿಜೆಪಿ ಈ ಬಾರಿ ಹಿನಾಯ ಸೋಲಿನತ್ತ ದಾಪುಗಾಲು ಹಾಕುತ್ತಿದ್ದಂತೆ ಮುಖ್ಯಮಂತ್ರಿ ರಮಣ ಸಿಂಗ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸ್ವತಃ ರಮಣ್ ಸಿಂಗ್ ಅವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಸೋಲುವ ಭೀತಿ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಚುನಾವಣೆ ಸೋಲಿನ ಜವಾಬ್ದಾರಿ ಹೊತ್ತು ರಾಜೀನಾಮೆಗೆ ಮುಂದಾಗಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಎಲ್ಲೆಡೆಯೂ ಬಿಜೆಪಿ ಧೂಳಿಪಟ!ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಎಲ್ಲೆಡೆಯೂ ಬಿಜೆಪಿ ಧೂಳಿಪಟ!

ಛತ್ತೀಸ್‌ಗಢ ಚುನಾವಣೆಯಲ್ಲಿ ಈವರೆಗಿನ ಫಲಿತಾಂಶದ ಮಟ್ಟಿಗೆ. ಕಾಂಗ್ರೆಸ್‌ 64 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 90 ಕ್ಷೇತ್ರಗಳಿರುವ ಛತ್ತೀಸ್‌ಘಡದಲ್ಲಿ ಭಾರಿ ಗೆಲುವಿನತ್ತ ಕಾಂಗ್ರೆಸ್ ದಾಪುಗಾಲು ಹಾಕಿದೆ.

Chattisgarh election result: BJP facing big defeat

ಛತ್ತೀಸ್‌ಘಡ: 15 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹಾದಿಯಲ್ಲಿ ಕಾಂಗ್ರೆಸ್ಛತ್ತೀಸ್‌ಘಡ: 15 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹಾದಿಯಲ್ಲಿ ಕಾಂಗ್ರೆಸ್

ಕಳೆದ ಮೂರು ಬಾರಿ ಅಧಿಕಾರ ಮಾಡಿದ್ದ ಬಿಜೆಪಿ ಕೇವಲ 18 ಸೀಟುಗಳಲ್ಲಷ್ಟೆ ಮುನ್ನಡೆಯಲ್ಲಿದೆ. ಬಿಎಸ್‌ಪಿ 6 ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಛತ್ತೀಸ್‌ಗಢದ ಕಳೆದ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಪಕ್ಷವು 39 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ.

English summary
Chattisgarh election result Congress towards big win and BJP towards big defeat. Congress already in lead in 64 seats out of 90. BJP CM Raman Singh his way to submit his resign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X