Get Updates
Get notified of breaking news, exclusive insights, and must-see stories!

Chandrayaan 3 Launch: ಭಾರತದ ಭವ್ಯ ಕನಸುಗಳ ಹೊತ್ತ ಹೆಮ್ಮೆಯ ಚಂದ್ರಯಾನ-3, ಉಡಾವಣೆ, ಮುಖ್ಯಾಂಶಗಳು

ಬೆಂಗಳೂರು, ಜುಲೈ 14: ಭಾರತ ಬಹುನಿರೀಕ್ಷಿತ 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'ಯ (ISRO) ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಶ್ರೀಹರಿಕೋಟಾದ ಸತೀಶ್ ದವನ್ ಸ್ಪೇಸ್ ಸೆಂಟರ್‌ ನಿಂದ ನಭಕ್ಕೆ ಜಿಮ್ಮಿದ ಚಂದ್ರಯಾನ ನೌಕೆಯು ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರುವಲ್ಲಿಯೂ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಶ್ರೀಹರಿಕೋಟಾದ ಕೇಂದ್ರದಲ್ಲಿ ವಿಜ್ಞಾನಿಗಳು, ತಂತ್ರಜ್ಞರ ಹರ್ಷ ಮುಗಿಲು ಮುಟ್ಟಿದೆ. ಆಗಸ್ಟ್ ಮೂರು ಇಲ್ಲವೇ ನಾಲ್ಕನೇ ವಾರ ಚಂದ್ರಯಾನ 3ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.

Chandrayaan 3 Launch LIVE

ಚಂದ್ರಯಾನ 3: ಶ್ರೀಹರಿಕೋಟದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಲ್ಲಿ ಉಡಾವಣೆಯಾಗಲಿರುವ ಬಾಹ್ಯಾಕಾಶ ನೌಕೆಯ ಲೈವ್

Jul 14, 2023, 8:55 pm IST

ಧನ್ಯವಾದ ಹೇಳಿದ ಇಸ್ರೋ

ಭಾರತದ ಹೆಮ್ಮೆ ಚಂದ್ರಯಾನ 3 ಯಶಸ್ವಿ ಉಡಾವಣೆಯ ನಂತರ ಎಲ್ಲರಿಗೂ ಧನ್ಯವಾದ ಹೇಳಿದ ಇಸ್ರೋ
Jul 14, 2023, 8:53 pm IST

ಚಂದ್ರನ ಬಾಹ್ಯಾಕಾಶ ಕಾರ್ಯಾಚರಣೆಗಳ ಡೇಟಾಬೇಸ್

ಚಂದ್ರನ ಬಾಹ್ಯಾಕಾಶ ಕಾರ್ಯಾಚರಣೆಗಳ ಡೇಟಾಬೇಸ್ ಪ್ರಕಾರ, ಕಳೆದ ಏಳು ದಶಕಗಳಲ್ಲಿ ನಡೆದ 111 ಚಂದ್ರಯಾನಗಳಲ್ಲಿ 62 ಯಶಸ್ವಿಯಾಗಿವೆ. 111 ಚಂದ್ರಯಾನಗಳಲ್ಲಿ, 62 ಯಶಸ್ವಿಯಾಗಿದೆ, 41 ವಿಫಲವಾಗಿದೆ ಮತ್ತು ಎಂಟು ಭಾಗಶಃ ಯಶಸ್ಸನ್ನು ಸಾಧಿಸಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
Jul 14, 2023, 5:03 pm IST

ಇಸ್ರೋ ಪಿತಾಮಹ ವಿಕ್ರಮ್ ಸಾರಾಭಾಯ್ ಕಂಡ ಕನಸು

Chandrayaan 3 Launch LIVE
'ಇಸ್ರೋ ಪಿತಾಮಹ ವಿಕ್ರಮ್ ಸಾರಾಭಾಯ್' ಮತ್ತು ಇತರರು ಕಂಡ ಕನಸು ಇಂದು ಸಾರ್ಥಕತೆಯನ್ನು ಕಂಡಿದೆ. ಸಂಪನ್ಮೂಲಗಳ ಕೊರತೆಯಿದ್ದರೂ, ಅಗಾಧವಾದ ವಿಶ್ವಾಸವನ್ನು ಅವರು ಹೊಂದಿದ್ದರು. ಇಂದು ವಿಕ್ರಮ್ ಸಾರಾಭಾಯ್ ಅವರಿಗೆ ಸೂಕ್ತವಾದ ಗೌರವ ಸಲ್ಲಿಕೆಯಾಗಿದೆ' ಸತೀಶ್ ಧವನ್ ಸ್ಪೇಸ್ ಸೆಂಟರ್ ನಲ್ಲಿ ಚಂದ್ರಯಾನ 3 ಯಶಸ್ವಿ ಉಡಾವಣೆ ಬಳಿಕ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
Jul 14, 2023, 4:22 pm IST

ಚಂದ್ರಯಾನ ಉಡಾವಣೆ-3 ದೃಶ್ಯ

ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಭಾನಿಗೆ ಚಂದ್ರಯಾನ-3 ಚಿಮ್ಮಿದ ದೃಶ್ಯ.
Jul 14, 2023, 4:15 pm IST

ಇಸ್ರೋದಿಂದ ಅಸಾಧಾರಣ ಕಾರ್ಯ: ಹೊಂಬಾಳೆ ಫಿಲ್ಮ್ಸ್

ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಇಸ್ರೋಗೆ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ' ಶುಭಾಶಯ ತಿಳಿಸಿದೆ. ಇಂದು ಇಸ್ರೋ (ISRO) ಮತ್ತೊಂದು ಅಸಾಧಾರಣ ಕಾರ್ಯಾಚರಣೆ ಆರಂಭಿಸಿದ ಮಹತ್ವದ ದಿನ. Chandrayan3 ರ ಹಿಂದಿರುವ ಅಸಾಧಾರಣ ತಂಡಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಮರ್ಪಣೆ ಮತ್ತು ನಾವೀನ್ಯತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡುತ್ತದೆ, ಒಳ್ಳೆಯದಾಗಲಿ ಎಂದು 'ಹೊಂಬಾಳೆ ಫಿಲ್ಮ್ಸ' ಸಂಸ್ಥೆ ಶುಭ ಕೋರಿದೆ.
Jul 14, 2023, 3:44 pm IST

ಇಸ್ರೋ ವಿಜ್ಞಾನಿಗಳಿಗೆ ಮಾಜಿ ಸಿಎಂ ಬೊಮ್ಮಾಯಿ ಅಭಿನಂದನೆ

ಚಂದ್ರಯಾನ-3 ಅನ್ನು ಭಾರತದ ಹೆಮ್ಮೆಯ ಪ್ರತೀಕ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ದಾರೆ. ಚಂದ್ರಯಾನ-3 ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ. ಭಾರತದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿದೆ. ಈ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಇಸ್ರೋ ಸಂಸ್ಥೆಯ ಎಲ್ಲಾ ಹೆಮ್ಮೆಯ ವಿಜ್ಞಾನಿಗಳಿಗೆ ಅವರು ಟ್ವೀಟ್ ಮೂಲಕ ಹಾರ್ದಿಕ ಅಭಿನಂದನೆ ತಿಳಿಸಿದ್ದಾರೆ.
Jul 14, 2023, 3:27 pm IST

Chandrayaan-3: ಇಸ್ರೋ ಪ್ರಕಾರ 42-45 ದಿನ ಬೇಕು

Chandrayaan 3 Launch LIVE
ಜುಲೈ 14ರಂದು ಯಶಸ್ವಿ ಉಡಾವಣೆಯಾಗಿ ನಿಗದಿತ ಕಕ್ಷೆ ತಲುಪಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳದಲ್ಲಿ ಇಳಿಯಲು ಸುಮಾರು 42-45 ದಿನಗಳು ಬೇಕಾಗಬಹುದು ಎಂದು ಇಸ್ರೋ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.
Jul 14, 2023, 3:16 pm IST

ಚಂದ್ರಯಾನ 3: ಇಸ್ರೋಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಚಂದ್ರಯಾನ 3 ಮಿಷನ್‌ನ ಯಶಸ್ವಿ ಉಡಾವಣೆಗೊಂಡಿದ್ದು, ಈ ಸಂಬಂದ ಇಸ್ರೋಗೆ (ISRO) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. ಇಂದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದೇವೆ. ಈ ಸಾಧನೆಯು ಭಾರತದ ಯುವ ಮನಸ್ಸುಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Jul 14, 2023, 3:05 pm IST

ವಿಜ್ಞಾನಿ-ತಂತ್ರಜ್ಞರ ತಂಡಕ್ಕೆ ಇಸ್ರೋ ಅಧ್ಯಕ್ಷ ಧನ್ಯವಾದ

ಶ್ರೀಹರಿಕೋಟಾದಲ್ಲಿ ಯಶಸ್ವಿ ಉಡಾವಣೆ ಬಳಿಕ ಮೂರು ಹಂತಗಳನ್ನು ದಾಟಿ ನಿಗದಿ ಕಕ್ಷೆ ಸೇರಿದ ಚಂದ್ರಯಾನ 3. ಈ ಯಶಸ್ವಿ ಕಾರಣರಾದ ಎಲ್ಲರಿಗೂ ಸತೀಶ್ ಧವನ್ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಧನ್ಯವಾದ ತಿಳಿಸಿದರು. ಬಳಿಕ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಿಷನ್ ಚಂದ್ರಯಾನ 3 ಕುರಿತು ಮಾತನಾಡಿದರು.
Jul 14, 2023, 2:56 pm IST

3 ಕಕ್ಷೆ ದಾಟಿದ ಚಂದ್ರಯಾನ-3 ನೌಕೆ: ಇಸ್ರೋ ಹರ್ಷ

ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡ ಚಂದ್ರಯಾನ 3 ನೌಕೆಯು ಭೂಮಿಯಿಂದ ಮೂರು ಕಕ್ಷೆಯನ್ನು ಸಂಪೂರ್ಣವಾಗಿ ದಾಟಿದೆ. ಇದನ್ನು ಅಧಿಕೃತಗೊಳಿಸಿದ ಇಸ್ರೋ ವಿಜ್ಞಾನಿಗಳು, ತಂತ್ರಜ್ಞರ ತಂಡದಿಂದ ಹರ್ಷ ವ್ಯಕ್ತವಾಗಿದೆ.
Jul 14, 2023, 2:56 pm IST

ಯಶಸ್ವಿ ಉಡಾವಣೆ

ಯಶಸ್ವಿ ಉಡಾವಣೆ
ಭಾರತದ ಮೂರನೇ ಮಾನವರಹಿತ ಚಂದ್ರಯಾನ, ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಗುರಿಯನ್ನು ಹೊಂದಿದ್ದು, ಶುಕ್ರವಾರ ಮಧ್ಯಾಹ್ನ 2.35ಕ್ಕೆ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
Jul 14, 2023, 2:55 pm IST

ಎರಡೂ ಹಂತ ಯಶಸ್ವಿ

ಎರಡೂ ಹಂತ ಯಶಸ್ವಿ
ಎರಡೂ ಹಂತವನ್ನು ಯಶಸ್ವಿಯಾಗಿ ಮುಗಿಸಿ, ಮೂರನೇ ಹಂತಕ್ಕೆ ಚಂದ್ರಯಾನ 3. ಉಡಾವಣೆ ಪ್ರಕ್ರಿಯೆ ಇದುವರೆಗೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಇಸ್ರೋ ಸ್ಪಷ್ಟನೆ.
Jul 14, 2023, 2:36 pm IST

ಚಂದ್ರನೂರಿಗೆ ಚಂದ್ರಯಾಣ 3 ಯಶಸ್ವಿ ಉಡಾವಣೆ

ಶ್ರೀಹರಿಕೋಟಾದ ಸತೀಶ್ ದವನ್ ಸ್ಪೇಸ್ ಸೆಂಟರ್ ನಿಂದ ಜುಲೈ 14ರಂದು ಶುಕ್ರವಾರ ಮಧ್ಯಾಹ್ನ 2.35ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಆಗಸ್ಟ್‌ನಲ್ಲಿ ಚಂದ್ರನ ಅಂಗಳ ತಲುಪಲಿರುವ ಚಂದ್ರಯಾನ 3.
Jul 14, 2023, 2:32 pm IST

ಮಿಷನ್ ಕಂಟ್ರೋಲ್ ರೂಂನಲ್ಲಿ ಫೈನಲ್ ಕೌಂಟ್ ಡೌನ್

Chandrayaan-3 Launch LIVE
ಮಿಷನ್ ತನ್ನ ಅಂತಿಮ ಕ್ಷಣಗಣನೆಗೆ ಹೋಗುತ್ತಿದ್ದಂತೆ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಿಷನ್ ಕಂಟ್ರೋಲ್ ರೂಂನಲ್ಲಿ ತಮ್ಮ ಇತರ ಸಹದ್ಯೋಗಿಗಳೊಂದಿಗಿನ ದೃಶ್ಯ.
Jul 14, 2023, 2:32 pm IST

ಮಿಷನ್ ಕಂಟ್ರೋಲ್ ರೂಂನಲ್ಲಿ ಫೈನಲ್ ಕೌಂಟ್ ಡೌನ್

ಮಿಷನ್ ಕಂಟ್ರೋಲ್ ರೂಂನಲ್ಲಿ ಫೈನಲ್ ಕೌಂಟ್ ಡೌನ್
ಮಿಷನ್ ತನ್ನ ಅಂತಿಮ ಕ್ಷಣಗಣನೆಗೆ ಹೋಗುತ್ತಿದ್ದಂತೆ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಿಷನ್ ಕಂಟ್ರೋಲ್ ರೂಂನಲ್ಲಿ ತಮ್ಮ ಇತರ ಸಹದ್ಯೋಗಿಗಳೊಂದಿಗೆ.
Jul 14, 2023, 2:31 pm IST

ಮಿಷನ್ ನಿರ್ದೇಶಕ ಎಸ್ ಮೋಹನ್ ಕುಮಾರ್

ಎಲ್ಲಾ ಪೂರ್ವ ಅನುಮತಿಗಳು ಪೂರ್ಣಗೊಂಡ ನಂತರ LVM3 ಬಾಹ್ಯಾಕಾಶ ನೌಕೆ ಉಡಾವಣೆಗೆ ಸಿದ್ಧವಾಗಿದೆ ಎಂದು ಮಿಷನ್ ನಿರ್ದೇಶಕ ಎಸ್ ಮೋಹನ್ ಕುಮಾರ್ ದೃಢಪಡಿಸಿದ್ದಾರೆ. ಸ್ವಯಂಚಾಲಿತ ಉಡಾವಣಾ ಅನುಕ್ರಮವು ಶೀಘ್ರದಲ್ಲೇ ಪ್ರಾರಂಭವಾಗಲಿದೆ.
Jul 14, 2023, 2:20 pm IST

ಚಂದ್ರಯಾನ 3 ಕಣ್ತುಂಬಿಕೊಳ್ಳಲು ಜನರ ಕ್ಯೂ

Chandrayaan-3 Launch LIVE
ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾನಿಗೆ ಹಾರುವ ಚಂದ್ರಯಾನ 3 ಅನ್ನು ಕಣ್ತುಂಬಿಸಿಕೊಳ್ಳಲು ಆಂಧ್ರಪ್ರದೇಶ ರಾಜ್ಯದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ.
Jul 14, 2023, 2:14 pm IST

45 ದಿನದಲ್ಲಿ ಚಂದ್ರನ ಮೇಲೆ ಇಳಿಯಲಿದೆ ಇಸ್ರೋ ನೌಕೆ

ಬಾಹ್ಯಾಕಾಶದಲ್ಲಿ ವಿಸ್ಮಯ ಮೂಡಿಸಲಿರುವ ಇಸ್ರೋ, ಚಂದ್ರಯಾನ 3 ಕ್ಕೆ ಕ್ಷಣಗಣನೆ. ಯೋಜನೆಯ ಅಂದಾಜು ವೆಚ್ಚ 615 ಕೋಟಿ ರೂಪಾಯಿ, ನಿಗದಿತ ಗುರಿಯ ಪ್ರಕಾರ 45ದಿನಗಳಲ್ಲಿ ಚಂದ್ರನ ಬಳಿ ತಲುಪಲಿರುವ ಇಸ್ರೋ ನೌಕೆ.
Jul 14, 2023, 1:44 pm IST

Chandrayaan-3 ಮಿಷನ್‌ಗೆ ಎಲ್ಲವನ್ನೂ ಮಾಡಿದ್ದೇವೆ

ಮಿಷನ್ ಚಂದ್ರಯಾನ-3 ಕ್ಕಾಗಿ ಮಾನವರಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದ್ದು, ಇದ ಯಾವದೇ ಕಾರಣಕ್ಕೂ ವಿಫಲವಾಗಲು ಸಾಧ್ಯವಿಲ್ಲ ಎಂದು ಮಿಷನ್ ಚಂದ್ರಯಾನ-3 ಕುರಿತು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ವಿಶ್ವಾಸ ವ್ಯಕ್ತಪಡಿಸಿದರು.
Jul 14, 2023, 1:00 pm IST

ಸತೀಶ್ ಧವನ್ ಸ್ಪೇಸ್ ಸೆಂಟರ್ ಚಿತ್ರಣ

Chandrayaan 3 Launch LIVE
ಬಹುನಿರೀಕ್ಷೆಯ ಚಂದ್ರಯಾನ 3 ಇದೇ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಆಕಾಶಕ್ಕೆ ಹಾರಲಿದೆ. ಸತೀಶ್ ಧವನ್ ಸ್ಪೇಸ್ ಸೆಂಟರ್
Jul 14, 2023, 12:53 pm IST

Chandrayaan-3: ಚಂದ್ರನ ಮೇಲೆ ಇಳಿಯುವ 2ನೇ ಪ್ರಯತ್ನ

ಚಂದ್ರಯಾನ-3 ಇದು ಚಂದ್ರಯಾನ-2 ಮಿಷನ್‌ನ ಅನುಸರಣೆಯಾಗಿದೆ. ಕಳೆದ ಬಾರಿ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತಗಳಲ್ಲಿ ಇಸ್ರೋ ವಿಫಲವಾಗಿತ್ತು. ಇದೀಗ ಮರಳಿ ಎರಡನೇ ಪ್ರಯತ್ನದಲ್ಲಿರುವ ಇಸ್ರೋ ಚಂದ್ರನ ಮೇಲೆ ಮೃದುವಾಗಿ ಉಪಗ್ರಹ ಇಳಿಸಲಿದ್ದು, ಇದನ್ನು ಜಗತ್ತೆ ಕಾತರದಿಂದ ಕಾಯುತ್ತಿದೆ. ಇಂದು ಮಧ್ಯಾಹ್ನ 02 ಗಂಟೆಗೆ ಚಂದ್ರಯಾನ 3 ಉಡಾವಣೆಗೊಳ್ಳಲಿದೆ.
Jul 14, 2023, 12:40 pm IST

Chandrayaan-3: ಭಾರತ ಚಂದ್ರನನ್ನು ತಲುಪುವುದು ಯಾವಾಗ?

Chandrayaan 3 Launch LIVE
ಭೂಮಿಯಿಂದ ಚಂದ್ರನು ಸರಾಸರಿ ಸುಮಾರು 3,84,400 ಕಿಲೋಮೀಟರ್ ದೂರದಲ್ಲಿದ್ದಾನೆ. ಚಂದ್ರಯಾನ-3 ಭೂಮಿಯ ಏಕೈಕ ಉಪಗ್ರಹವು ಇಷ್ಟು ಮಾರ್ಗ ತಲುಪಲು ದೀರ್ಘ ಸಮಯ ತೆಗೆದುಕೊಳ್ಳಲಿದೆ. ಇಸ್ರೋ ಪ್ರಕಾರ ಮಿಷನ್‌ನ ವಿಕ್ರಮ್ ಲ್ಯಾಂಡರ್ ಮುಂದಿನ ತಿಂಗಳ ಆಗಸ್ಟ್ 23 ಅಥವಾ ಆಗಸ್ಟ್ 24 ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತ ವಾಗಿ ಮತ್ತು ಮೃಧುವಾಗಿ ಲ್ಯಾಂಡ್ ಆಗಲಿದೆ.
Jul 14, 2023, 12:18 pm IST

ಜುಲೈ 14 ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟ ದಿನ:ಪ್ರಧಾನಿ

ಚಂದ್ರಯಾನ 2 ಉಡಾವಣೆಯನ್ನು ಲೈವ್ ನೋಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ 3 ಕುರಿತು ಟ್ವೀಟ್ ಮಾಡಿ ಆಶಿಸಿದ್ದಾರೆ. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ಜುಲೈ 14ರ ದಿನವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಇಂದು ನಮ್ಮ ಮೂರನೇ ಚಂದ್ರಯಾನದ ಪ್ರಯಾಣ ಪ್ರಾರಂಭಿಸಲಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
Jul 14, 2023, 11:28 am IST

ಚಂದ್ರಯಾನ-3 ವೆಚ್ಚದ ವಿವರ

Chandrayaan 3 Launch LIVE
2020ರಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ಕೆ.ಶಿವನ್ ಅವರು, ಚಂದ್ರಯಾನ -3 ಮಿಷನ್ 615 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚವಾಗಲಿದೆ ಎಂದು ಹೇಳಿದ್ದರು. ಇದರಲ್ಲಿ ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್‌ಗೆ 250 ಕೋಟಿ ರೂ. ಹಾಗೂ ಉಡಾವಣಾಗೆ 365 ಕೋಟಿ ರೂ.ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದ್ದರು. 2021 ರಲ್ಲಿ ಚಂದ್ರಯಾನ-3 ಉಡಾವಣೆಯ ನಿರೀಕ್ಷೆ ಇತ್ತು. ಆದರೆ ಕೊರೊನಾ ಪಿಡುಗಿನಿಂದ ವಿಳಂಬವಾಯಿತು. ಇದೀಗ ಇದರ ಖರ್ಚು ಇನ್ನು ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ.
Jul 14, 2023, 10:28 am IST

ಚಂದ್ರನತ್ತ ಭಾರತದ ಮಿಷನ್: ISROಗೆ ಶುಭಕೋರಿದ ಡಿಕೆಶಿ

ಭಾರತೀಯ ಬಾಹ್ಯಾಕಾಶ ಪರಿಶೋಧನಾ ಪ್ರಯಾಣಕ್ಕೆ ಇಂದು ದೊಡ್ಡ ದಿನ. Chandrayan 3 ಉಡಾವಣೆ ಇಸ್ರೋ ಸಜ್ಜಾಗಿದೆ. ಭಾರತ ದೇಶವು ಚಂದ್ರನತ್ತ ಅದ್ಭುತವಾದ ಹೆಜ್ಜೆಯನ್ನು ಇಡುತ್ತಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಇಸ್ರೋದ (ISRO) ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಗೆ ನನ್ನ ಶುಭಾಶಯಗಳು ಎಂದು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Jul 14, 2023, 10:16 am IST

ಮರಳಿನಲ್ಲಿ Chandrayaan 3 ಆಕೃತಿ ರಚಿಸಿ ಶುಭಹಾರೈಕೆ

ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಈ ಬಾರಿಯ ಇಸ್ರೋದ ಚಂದ್ರನ ಮೇಲೆ ಇಳಿಯುವ ಪ್ರಯತ್ನ ಯಶಸ್ವಿಯಾಗಲಿದೆ ಎಂದು ಹಾರೈಕೆಗಳ ಕೇಳಿ ಬರುತ್ತಿವೆ. ಸುದರ್ಶನ ಪಾಟ್ನಾಯಕ್ ಎಂಬುವವರು ಭಾರತವು #Chandrayan3 ನೊಂದಿಗೆ ಚಂದ್ರನ ಮೇಲಿನ ಕಾರ್ಯಾಚರಣೆಗೆ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತೇನೆ. ಈ ಕುರಿತು ಟ್ವೀಟ್‌ನಲ್ಲಿ ಬರೆದುಕೊಂಡಿರುವ ಅವರು, ಒಡಿಶಾದ ಪುರಿ ಬೀಚ್‌ನಲ್ಲಿ ''ವಿಜಯೀ ಭಾವ" ಎಂಬ ಸಂದೇಶದೊಂದಿಗೆ 500 ಸ್ಟೀಲ್ ಬೌಲ್‌ಗಳನ್ನು ಬಳಸಿ, ಚಂದ್ರಯಾನ, ಚಂದ್ರ, ಬಾಹ್ಯಾಕಾಶ ನೌಕೆಯನ್ನು ಮರಳಿನಲ್ಲಿ ರಚಿಸಿ ಶುಭ ಹಾರೈಸಿದ್ದಾರೆ.
Jul 14, 2023, 10:03 am IST

ಇತ್ತೀಚಿನ ವಿಫಲ ಚಂದ್ರಯಾನ ಪಟ್ಟಿ

Chandrayaan 3 Launch LIVE
ಭಾರತದ ಚಂದ್ರಯಾನ-2 ಮಿಷನ್ ಚಂದ್ರನತ್ತ ಸುದೀರ್ಘ ಪ್ರಯಾಣ ಮಾಡಿ ಕೊನೆಯ ಹಂತದವರೆಗೂ ಸಾಗಿತು ಆದರೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯದೇ ಕ್ರಾಶ್ ಆಯಿತು. ಅದೇ ವರ್ಷ ಇಸ್ರೇಲ್‌ನ ಬೆರೆಶೀಟ್ ಬಾಹ್ಯಾಕಾಶ ನೌಕೆ ಸಹ ಚಂದ್ರಯಾನದಲ್ಲಿ ಯಶಸ್ವಿಯಾಗದೇ ವೈಫಲ್ಯ ದಾಖಲಿಸಿತು. ಜಪಾನಿನ ಖಾಸಗಿ ಕಂಪನಿ ನೇತೃತ್ವದ ಮಿಷನ್ ಹಕುಟೊ ಈ ವರ್ಷದ ಆರಂಭದಲ್ಲಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು. ಹಕುಟೊ ಮತ್ತು ಬೆರೆಶೆಟ್ ಎರಡೂ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು ಅಭಿವೃದ್ಧಿಪಡಿಸಿದ ಕಾರ್ಯಾಚರಣೆಗಳಾಗಿವೆ ಎಂದು ತಿಳಿದು ಬಂದಿದೆ.
Jul 14, 2023, 8:41 am IST

ಜುಲೈ 14 ರಂದು ಚಂದ್ರಯಾನ-3 ಉಪಗ್ರಹ ಉಡಾವಣೆ ಏಕೆ ಮಾಡಲಾಗುತ್ತಿದೆ?

ಜುಲೈ 14 ರಂದು ಚಂದ್ರಯಾನ-3 ಉಪಗ್ರಹ ಉಡಾವಣೆ ಏಕೆ ಮಾಡಲಾಗುತ್ತಿದೆ?
ವರ್ಷದ ಈ ಸಮಯದಲ್ಲಿ ಭೂಮಿ ಮತ್ತು ಚಂದ್ರ ಇತರ ಸಮಯಕ್ಕಿಂತ ಹತ್ತಿರದಲ್ಲಿ ಇರುತ್ತವೆ. ಇದೇ ಕಾರಣಕ್ಕಾಗಿ 22 ಜುಲೈ 2019 ರಂದು ಚಂದ್ರಯಾನ-2 ಅನ್ನು ಸಹ ಉಡಾವಣೆ ಮಾಡಲಾಗಿತ್ತು. ಈಗ ಚಂದ್ರಯಾನ-3 ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ.
Jul 14, 2023, 6:32 am IST

ಚಂದ್ರನ ಮೇಲೆ ಲ್ಯಾಂಡಿಂಗ್ ಚೀನಾ ಯಶಸ್ಸು

1960 ರ ದಶಕದಲ್ಲಿ, ಬಾಹ್ಯಾಕಾಶ ಓಟದ ಸಮಯದಲ್ಲಿ, ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯತ್ ಯೂನಿಯನ್ ಬಾಹ್ಯಾಕಾಶ ನೌಕೆಗಳು ಒಂದರನಂತರ ಇನ್ನೊಂದು ಎಂಬಂತೆ ಇಳಿದಿತ್ತು. ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸಿದ ಏಕೈಕ ದೇಶ ಚೀನಾ. 2013 ರಲ್ಲಿ ಚಾಂಗ್’ಇ-5 ಮಿಷನ್‌ನೊಂದಿಗೆ ತನ್ನ ಮೊದಲ ಪ್ರಯತ್ನದಲ್ಲೇ ಚೀನಾ ಯಶಸ್ವಿಯಾಗಿತ್ತು.
Jul 13, 2023, 9:58 pm IST

Chandrayaan live
ಚಂದ್ರಯಾನ 3 ಗೇಮ್ ಚೇಂಜರ್, ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿದೆ - ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+