ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ2 : ಬೇರ್ಪಟ್ಟ ಲ್ಯಾಂಡರ್ -ಆರ್ಬಿಟರ್, ಇಸ್ರೋ ಮೈಲಿಗಲ್ಲು

|
Google Oneindia Kannada News

ಬೆಂಗಳೂರು, ಸೆ. 02: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಇಂದು ಮಹತ್ವದ ತಿರುವು ಪಡೆಯಲಿದೆ. ಅಂತಿಮ ಹಂತದ ಕಕ್ಷೆ ಬದಲಾವಣೆಯನ್ನು ಕಾಣಬಹುದಾಗಿದೆ.

ಕಕ್ಷೆ ಬದಲಾವಣೆ ಚಟುವಟಿಕೆಯಲ್ಲಿ ಐದನೇ ಹಾಗೂ ಅಂತಿಮ ಚಟುವಟಿಕೆ ಭಾನುವಾರ ಸಂಜೆ 6.21ಕ್ಕೆ ನಡೆದಿದೆ ಹೀಗಾಗಿ, ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಇನ್ನೊಂದು ಹೆಜ್ಜೆ ಸಾಕು.

ಆರ್ಬಿಟರ್ ಹಾಗೂ ಲ್ಯಾಂಡರ್ ಬೇರ್ಪಡುವ ಹಂತ ಸರಾಗವಾಗಿ ನೆರವೇರಲಿದೆ, ಚಂದ್ರನ ಮೇಲೆ ಲ್ಯಾಂಡರ್ ಇಳಿದರೆ, ಆರ್ಬಿಟರ್ ಚಂದ್ರನ ಸುತ್ತ ಇನ್ನೊಂದು ವರ್ಷ ತಿರುಗಲಿದೆ. ಆರ್ಬಿಟರ್​ನಿಂದ ವಿಕ್ರಂ ಲ್ಯಾಂಡರ್ ಸೋಮವಾರ ಮಧ್ಯಾಹ್ನ 12.45-1.45ರ ನಡುವೆ ಯಶಸ್ವಿಯಾಗಿ ಬೇರ್ಪಟ್ಟಿದೆ ಎಂದು ಇಸ್ರೋ ಪ್ರಕಟಿಸಿದೆ.

Chandrayaan 2 Successful separation of lander Vikram from orbiter

"ಭಾನುವಾರ ಸಂಜೆ 6.21ಕ್ಕೆ ಆರ್ಬಿಟರ್​ನಲ್ಲಿರುವ ಇಂಜಿನನ್ನು 52 ಸೆಕೆಂಡ್ ಚಾಲನೆಯಲ್ಲಿರಿಸುವ ಮೂಲಕ ನಿಗದಿಯಂತೆ 119 ಕಿ.ಮಿ್ X127 ಕಿ.ಮೀ ಚಂದ್ರನ ಕಕ್ಷೆಗೆ ಆರ್ಬಿಟರ್ ಸೇರ್ಪಡೆಯಾಗಿದೆ"ಎಂದು ಇಸ್ರೋ ಟ್ವೀಟ್ ಮಾಡಿದೆ.

ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2

"ಸೆ. 3ರಂದು ನಾವು ಮೂರು ಸೆಕೆಂಡುಗಳ ಕಾಲ ಸಣ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಲ್ಯಾಂಡರ್‌ನ ವ್ಯವಸ್ಥೆ ಸಹಜವಾಗಿ ನಡೆಯುತ್ತಿದೆಯೇ ಎಂಬುದನ್ನು 24 ಗಂಟೆಗಳ ಕಾಲ ಪರಿಶೀಲಿಸಲಾಗುತ್ತಿದೆ. ಸೆ. 7ರಂದು ರಾತ್ರಿ 1.55ಕ್ಕೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ" ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದರು

ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ: ನಾಸಾ ಮೆಚ್ಚುಗೆಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ: ನಾಸಾ ಮೆಚ್ಚುಗೆ

ಸೆ.7ರಂದು ಪ್ರಧಾನಿ ನರೇಂದ್ರ ಮೋದಿ ಜತೆಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳು, ಚಂದ್ರಯಾನ ನೌಕೆ ಚಂದ್ರನ ಮೇಲೆ ಇಳಿಯುವುದನ್ನು ನೋಡಲಿದ್ದಾರೆ.

ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 7ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಜ್ಞಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ.

English summary
The crucial separation of lander Vikram from Chandrayaan 2 Orbiter achieved successfully. According to ISRO, the separation was successful 12:45 PM and 1:45 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X