ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪದ ಸಿಸಿಟಿವಿ ದೃಶ್ಯ ಪತ್ತೆ

ಚಂಡೀಗಢ, ಆಗಸ್ಟ್ 8: ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್‌ ಬರಲಾ ಪುತ್ರ ವಿಕಾಸ್‌ ಬರಲಾ ಯುವತಿಯೊಬ್ಬಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾರಿನಲ್ಲಿ ಯುವತಿಯನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.

ನಿನ್ನೆಯಷ್ಟೇ ಹರಿಯಾಣ ಪೊಲೀಸರು ಕಾರು ಚಲಿಸಿದ ಮಾರ್ಗದ 9 ಸಿಸಿಟಿವಿಗಳೂ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಇದೀಗ ಒಂದು ಕ್ಯಾಮೆರಾದ ದೃಶ್ಯಾವಳಿ ಸಿಕ್ಕಿದೆ.

Chandigarh stalking: Crucial CCTV proof agains t BJP leader's son found

ವಿಡಿಯೋದಲ್ಲಿ ಬಿಳಿ ಬಣ್ಣದ ಎಸ್.ಯು.ವಿ ಕಾರ್ ಯುವತಿಯನ್ನು ಹಿಂಬಾಲಿಸುತ್ತಿರುವುದು ಪತ್ತೆಯಾಗಿದೆ.

ಈ ಹಿಂದೆ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಶ್ ಕುಮಾರ್ ಆಗಸ್ಟ್ 4ರಂದು ಮಧ್ಯರಾತ್ರಿ 12.30 ನಿಮಿಷಕ್ಕೆ ನನ್ನನ್ನು ಹಿಂಬಾಲಿಸಿ ಬೆದರಿಕೆ ಹಾಕಿದ್ದರು ಎಂದು 29 ವರ್ಷದ ವರ್ಣಿಕಾ ಖಂಡು ಎಂಬ ಯುವತಿ ದೂರು ದಾಖಲಿಸಿದ್ದರು. ವರ್ಣಿಕಾ ಕುಂದು ಹರಿಯಾಣದ ಐಎಎಸ್ ಅಧಿಕಾರಿ ವೀರೇಂದರ್ ಖಂಡು ಮಗಳಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+