ಮಗಳ ಮದುವೆಗೆ ಟೀ ಮಾರೋನು ಕೊಟ್ಟಿದ್ದು 1.50 ಕೋಟಿ ವರದಕ್ಷಿಣೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಜೈಪುರ್, ಏಪ್ರಿಲ್ 13: ರಾಜಸ್ತಾನದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬನ ಮೇಲೆ ಅದಾಯ ತೆರಿಗೆ ಇಲಾಖೆಯ ಕಣ್ಣು ಬಿದ್ದಿದೆ. ಆತ ತನ್ನ ಮಗಳ ಮದುವೆ ವೇಳೆ ವರದಕ್ಷಿಣೆ ಎಂದು ಕೊಟ್ಟಿದ್ದೇ 1.51 ಕೋಟಿ ರುಪಾಯಿಯಂತೆ. ಇಲ್ಲಿನ ಹದುವಾತದಲ್ಲಿ ಟೀ ಮಾರುವ ಲೀಲಾ ರಾಮ್ ಗುಜ್ಜರ್ ನೋತುಗಳನ್ನು ಎಣಿಸಿ, ವರನ ಕಡೆಯವರಿಗೆ ಕೊಡುವ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋ ಪ್ರಚಾರಕ್ಕೆ ಬರುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆತನಿಗೆ ನೋಟಿಸ್ ನೀಡಿದ್ದಾರೆ. ಹೇಗಪ್ಪ ಇಷ್ಟು ದುಡ್ಡು ಬಂತು, ವಿವರಣೆ ನೀಡಿ ಎಂದು ಕೇಳಿದ್ದಾರೆ. ಆದರೆ ಆದಾಯದ ಮೂಲ ತಿಳಿಸಲು ಆತನಿಗೆ ತಿಳಿಸಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಆತನಿಗೆ ನೋಟಿಸ್ ನೀಡಿ, ಆದಾಯದ ಮೂಲವನ್ನು ತೋರಿಸುವ ದಾಖಲೆಗಳನ್ನು ಹಾಜರುಪಡಿಸಲು ತಿಳಿಸಲಾಗಿದೆ.[ತಮಿಳುನಾಡಿನ ವ್ಯಾಪಾರಿಯಿಂದ PMGKYಗೆ 246 ಕೋಟಿ ಜಮೆ]

Chaiwala in Rajasthan under IT radar for paying Rs 1.5 crore dowry

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಬಿದ್ದಿರುವುದು ಒಂದು ಕಡೆಯಾಯಿತು. ಇದರ ಜತೆಗೆ ತನ್ನ ನಾಲ್ವರು ಅಪ್ರಾಪ್ತ ಹೆಣ್ಣುಮಕ್ಕಳಿಗೆಮದುವೆ ಮಾಡಿದ್ದಾನೆ. ಇನ್ನು ವರದಕ್ಷಿಣೆ ಕೊಡುವುದು ಕಾನೂನಿನ ಪ್ರಕಾರ ಅಪರಾಧ. ಆ ಆರೋಪ ಕೂಡ ಲೀಲಾ ರಾಮ್ ಗುಜ್ಜರ್ ಮೇಲೆ ಇದೆ.[ಮಂಗಳೂರು: ಐಟಿ ದಾಳಿ, ಒಂದೇ ದಿನದಲ್ಲಿ ಸಿಕ್ಕಿರೋದು ರು.172 ಕೋಟಿ!]

ಸದ್ಯಕ್ಕೆ ಆತ ತಲೆ ಮರೆಸಿಕೊಂಡಿದ್ದಾನೆ. ಆತನ ಮನೆಗೆ ಪೊಲೀಸರಿಗೆ ಭೇಟಿ ನೀಡಿದ ವೇಳೆ ಬಾಗಿಲಿಗೆ ಬೀಗ ಬಿದ್ದಿದ್ದನ್ನು ನೋಡಿ ವಾಪಸಾಗಿದ್ದಾರೆ. ಆತ ಹಾಗೂ ಆತನ ಕುಟುಂಬದವರ ಶೋಧಕ್ಕಾಗಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tea seller has come under the radar of the Income Tax department after he coughed up Rs 1.51 crore as dowry for his daughters for their wedding. Leela Ram Gujjar who is a tea stall owner at Haduata in Rajasthan is seen in a video counting the notes and handing them over to the family of the groom.
Please Wait while comments are loading...