• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

BSNL 4ಜಿ ಉನ್ನತೀಕರಣ: ಚೀನಾ ತಂತ್ರಜ್ಞಾನ ಬಳಸದಂತೆ ಕೇಂದ್ರ ಎಚ್ಚರಿಕೆ

|

ಬೆಂಗಳೂರು, ಜೂನ್ 18: ಚೀನಾದ ಡಿಜಿಟಲ್ ತಂತ್ರಜ್ಞಾನ ಹಾಗೂ ಅಪ್ಲಿಕೇಷನ್ ನಡುವೆ ಇಡೀ ದೇಶಾದ್ಯಂತ ಹುಯಿಲೆಬ್ಬಿದೆ.

ದೇಶದ ಡಿಜಿಟಲ್ ಮಾರುಕಟ್ಟೆಯ ಖಾತೆದಾರರ ಮಾಹಿತಿಗಳನ್ನು ಚೀನಾದ ಅಪ್ಲಿಕೇಷನ್‌ಗಳು ಕದಿಯುತ್ತಿವೆ. ಇದು ದೇಶದ ಭದ್ರತೆಗೆ ಅಪಾಯವೆಂದು ಗುಪ್ತಚರ ದಳ ದೇಶಕ್ಕೆ ಎಚ್ಚರಿಸಿವೆ ಎನ್ನಲಾಗಿದೆ.

ಈ ಚೀನಿ App ಬಳಸುತ್ತಿದ್ದರೆ ಅಪಾಯ ಎಚ್ಚರಿಕೆ!

ಏತನ್ಮಧ್ಯೆ 4ಜಿ ತಂತ್ರಜ್ಞಾನ ಅಳವಡಿಕೆಗೆ ಯಾವುದೇ ಚೀನೀಯ ಉತ್ಪನ್ನಗಳನ್ನು ಬಳಸದಂತೆ ಬಿಎಸ್‌ಎನ್‌ಎಲ್‌ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.

ಚೀನೀ ಉತ್ಪನ್ನಗಳನ್ನು ಬಳಸುವುದರಿಂದ ಮಾಹಿತಿಗಳು ಸೋರಿಕೆಯಾಗಬಹುದು ಡೇಟಾಗಳು ಸುಲಭವಾಗಿ ಚೀನಾಗೆ ರವಾನೆಯಾಗಬಹುದು ಎಂಬುದು ಕೇಂದ್ರ ಸರ್ಕಾರದ ಆತಂಕವಾಗಿದೆ.

ಹೀಗಾಗಿ ದೇಶೀಯ ಉತ್ಪನ್ನ ಹಾಗೂ ತಂತ್ರಜ್ಞಾನಗಳಿಗೆ ಬಿಎಸ್‌ಎನ್ಎಲ್ ಗಮನವಹಿಸಿದೆ.ಈಗಾಗಲೇ ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷವು ಎರಡು ದೇಶಗಳ ನಡುವಿನ ವಾಣಿಜ್ಯ , ವ್ಯವಹಾರ ಸಮರಕ್ಕೆ ನಾಂದಿ ಹಾಡಿದಂತಾಗಿದೆ.

ಭಾರತ-ಚೀನಾ ಗಡಿ ಉದ್ವಿಗ್ನತೆ: ಚೀನಾದ ಉತ್ಪನ್ನಗಳ ಬಹಿಷ್ಕಾರಕ್ಕೆ ಪಟ್ಟಿಯನ್ನು ಪ್ರಕಟಿಸಿದ CAIT

ಚೀನಾ ಮೂಲದ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಬೇಕು ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಭದ್ರತಾ ದೃಷ್ಟಿಯಿಂದ ಕೆಲವು ಚೀನಾ ಅಪ್ಲಿಕೇಷನ್‌ನಿಂದ ದೂರವಿರಿ ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿದೆ. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 43 ಮಂದಿ ಚೀನಾ ಯೋಧರು ಮೃತಪಟ್ಟಿದ್ದಾರೆ.

English summary
The Department of Telecom is set to ask state-owned telecommunications company Bharat Sanchar Nigam Limited (BSNL) not to use Chinese equipment in the upgradation of its 4G faculties, which is being supported as part of the company's rehabilitation package.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X