ಪೆಟ್ರೋಲ್ ಉತ್ಪನ್ನಕ್ಕೆ ಜಿಎಸ್ ಟಿ : ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿ

Posted By:
Subscribe to Oneindia Kannada
   ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ರಾಜ್ಯಗಳ ಮೇಲೆ ಗೂಬೆ ಕೂರಿಸಿದ ಜೇಟ್ಲಿ | Oneindia Kannada

   ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲೇ ತರಬೇಕು ಎಂಬ ಬಗ್ಗೆ ಕೇಂದ್ರ ಸರಕಾರಕ್ಕೂ ಒಲವಿದೆ. ಆದರೆ ರಾಜ್ಯಗಳ ಒಪ್ಪಿಗೆ ಪಡೆದ ನಂತರವಷ್ಟೇ ಆ ತೀರ್ಮಾನ ಸಾಧ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

   ಕೇಂದ್ರಕ್ಕೇನೋ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬೇಕು ಎಂಬುದಿದೆ. ನಾವು ರಾಜ್ಯಗಳ ಒಪ್ಪಿಗೆಗಾಗಿ ಕಾಯುತ್ತಾ ಇದ್ದೀವಿ. ಶೀಘ್ರದಲ್ಲೇ ಈಗಲ್ಲದಿದ್ದರೂ ನಂತರ ರಾಜ್ಯಗಳು ಈ ಪ್ರಸ್ತಾವವನ್ನು ಒಪ್ಪಿಕೊಳ್ಳಬಹುದು ಎಂಬ ಭರವಸೆ ಇದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಜೇಟ್ಲಿ ಉತ್ತರಿಸಿದ್ದಾರೆ.

   ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಬಂದರೆ ಲೀಟರ್ ಗೆ ಬರೀ 38 ರುಪಾಯಿ

   ಪೆಟ್ರೋಲಿಯಂ ಉತ್ಪನ್ನಗಳನ್ನೇನೂ ಜಿಎಸ್ ಟಿಯಿಂದ ಹೊರಗಿಟ್ಟಿಲ್ಲ, ಆದರೆ ಜಿಎಸ್ ಟಿ ಕೌನ್ಸಿಲ್ ನಲ್ಲಿ ನಾಲ್ಕನೇ ಮೂರು ಭಾಗದಷ್ಟು ಬಹುಮತದೊಂದಿದೆ ಒಪ್ಪಿಗೆ ಸಿಗಬೇಕಿದೆ ಅಷ್ಟೇ ಎಂದಿದ್ದಾರೆ.

   Arun Jaitley

   ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಪಿ.ಚಿದಂಬರಂ ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಜಿಎಸ್ ಟಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ತಿದ್ದುಪಡಿಗೆ ಸಲ್ಲಿಸಿದ ಕರಡಿನ ಪ್ರಸ್ತಾವನೆಯಲ್ಲಿ ಯುಪಿಎ ಸರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸಿರಲಿಲ್ಲ. ಹಾಗೆ ಸೇರಿಸಿದರೆ ರಾಜ್ಯಗಳು ಇದನ್ನು ಒಪ್ಪಲಾರವು ಎಂದು ಯುಪಿಎಗೆ ಗೊತ್ತಿತ್ತು ಎಂದಿದ್ದಾರೆ.

   ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಾಕುತ್ತಿರುವ ಹೆಚ್ಚಿನ ತೆರಿಗೆಯ ಪಾಲು ರಾಜ್ಯಗಳದ್ದು ಎಂದು ಜೇಟ್ಲಿ ಹೇಳಿದ್ದಾರೆ. ಹೆಚ್ಚುತ್ತಿರುವ ಕಚ್ಚಾ ತೈಲದ ದರ ಗಮನಿಸಿ ಕೇಂದ್ರ ಸರಕಾರವು ತೆರಿಗೆ ಇಳಿಸಲು ನಿರ್ಧರಿಸಿತು. ಮತ್ತು ಅದನ್ನೇ ಅನುಸರಿಸುವಂತೆ ರಾಜ್ಯಗಳನ್ನು ಕೇಳಿತು. ಆದರೆ ಎನ್ ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಗಳು ಒಪ್ಪಿದವು. ಆದರೆ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಗಳು ನಿರಾಕರಿಸಿದವು ಎಂದಿದ್ದಾರೆ ಜೇಟ್ಲಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Central government favours bringing petroleum products under the ambit of Goods and Services Tax (GST) but only after building a consensus with states, Union Finance Minister Arun Jaitley said on Tuesday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ