• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ, ಇಡಿ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಿಸಿ ಕೇಂದ್ರದಿಂದ ಸುಗ್ರೀವಾಜ್ಞೆ

|
Google Oneindia Kannada News

ನವದೆಹಲಿ, ನವೆಂಬರ್‌ 14: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಪ್ರಸ್ತುತ ಕೇಂದ್ರೀಯ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ಎರಡು ವರ್ಷ ಆಗಿದೆ.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡುವ ಎರಡೂ ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ. ಉನ್ನತ ಏಜೆನ್ಸಿಗಳ ಮುಖ್ಯಸ್ಥರು ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮೂರು ವರ್ಷಗಳವರೆಗೆ ಪ್ರತಿ ವರ್ಷ ವಿಸ್ತರಣೆಗಳನ್ನು ನೀಡಬಹುದಾಗಿದೆ. "ಸಂಸತ್ತು ಅಧಿವೇಶನ ಇರುವಾಗ ಮತ್ತು ಅಧ್ಯಕ್ಷರು ಕೂಡಲೇ ಕ್ರಮಕೈಗೊಳ್ಳಲು ಅಗತ್ಯವಾದ ಸಂದರ್ಭಗಳು ಅಸ್ತಿತ್ವದಲ್ಲಿದೆ. ಅಸಾಧಾರಣ ಸಂದರ್ಭದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಲು ಅವಕಾಶ ಇದೆ," ಎಂದು ಸುಗ್ರೀವಾಜ್ಞೆ ಹೇಳುತ್ತದೆ.

ಬೆಂಗಳೂರು; ಐಟಿ ದಾಳಿಯ ವಿವರಗಳು, ಸಿಕ್ಕಿದ ಹಣ, ಆಸ್ತಿ ಮಾಹಿತಿಬೆಂಗಳೂರು; ಐಟಿ ದಾಳಿಯ ವಿವರಗಳು, ಸಿಕ್ಕಿದ ಹಣ, ಆಸ್ತಿ ಮಾಹಿತಿ

ಇತ್ತೀಚೆಗೆ ನ್ಯಾಯಮೂರ್ತಿ ಎಲ್‌ಎನ್ ರಾವ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ಪ್ರಕರಣದಲ್ಲಿ ತೀರ್ಪುನ್ನು ನೀಡಿದೆ. 2018 ರಲ್ಲಿ ಅಧಿಕಾರ ವಹಿಸಿಕೊಂಡ ಜಾರಿ ನಿರ್ದೇಶನಾಲಯ ಮುಖ್ಯಸ್ಥ ಎಸ್‌ಕೆ ಮಿಶ್ರಾ ಅವರ ಅಧಿಕಾರ ಅವಧಿ ವಿಸ್ತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಎಲ್‌ಎನ್ ರಾವ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ತೀರ್ಪನ್ನು ನೀಡಿದೆ. "ಅಪರೂಪದ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅಧಿಕಾರವಾಧಿಯನ್ನು ವಿಸ್ತರಣೆ ಮಾಡಬಹುದು," ಎಂದು ಸುಪ್ರೀಂ ಕೋರ್ಟ್ ಪೀಠವು ಎಸ್‌ಕೆ ಮಿಶ್ರಾ ಅವರ ಅಧಿಕಾರ ಅವಧಿ ವಿಸ್ತರಣೆಗೆ ಸಂಭಂಧಿಸಿ ತೀರ್ಪಿನಲ್ಲಿ ಹೇಳಿದೆ.

ನವೆಂಬರ್‍ 17 ರಂದು ಜಾರಿ ನಿರ್ದೇಶಾನಾಲಯದ ಮುಖ್ಯಸ್ಥರ ಅಧಿಕಾರಾವಧಿ ಕೊನೆಯಾಗಲಿದ್ದು ಈ ನಡುವೆ ಅಧಿಕಾರವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಈ ಬೆನ್ನಲ್ಲೇ ಈ ಸುಗ್ರೀವಾಜ್ಞೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ವಿಸ್ತರಣೆಯ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ನಡುವೆ ಹಲವಾರು ಮಂದಿ ಈ ನಿರ್ಧಾರವನ್ನು ಟೀಕೆ ಮಾಡಿದ್ದಾರೆ. ಈ ಹಿಂದೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಉನ್ನತ ನಾಯಕರು ಮತ್ತು ಮಾಜಿ ಸಚಿವರನ್ನು ಗುರಿಯಾಗಿಸಿಕೊಂಡಿದೆ. ವಿರೋಧ ಪಕ್ಷದ ಉನ್ನತ ನಾಯಕರು ಮತ್ತು ಮಾಜಿ ಸಚಿವರ ವಿರುದ್ಧವಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರಗಳು ಬಳಸುತ್ತಿದೆ ಎಂದು ಆರೋಪ ಮಾಡಿದೆ. ಕಂದಾಯ ಇಲಾಖೆ, ಹಣಕಾಸು ಸಚಿವಾಲಯದ ಅಡಿಯಲ್ಲಿನ ವಿಶೇಷ ಹಣಕಾಸು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಆಗಿದೆ. ವಿದೇಶಿ ವಿನಿಮಯ ಕಾನೂನುಗಳು ಮತ್ತು ನಿಯಮಗಳು ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯವು ತನಿಖೆ ಮಾಡುತ್ತದೆ.

ಸಿಬಿಐ, ಇಡಿ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆಗೆ ಖಂಡನೆ

ಕೇಂದ್ರ ಸರ್ಕಾರವು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವುದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. "ಇದು ಆಘಾತಕಾರಿ ಮತ್ತು ಅಸಹ್ಯಕರ ಘಟನೆಯಾಗಿದೆ. ಹಾಗೆಯೇ ಸಿಬಿಐ ಹಾಗೂ ಇಡಿಯ ಸ್ವಾತಂತ್ಯ್ರವನ್ನು ಮತ್ತಷ್ಟು ಹಾಳು ಮಾಡುವ ಯತ್ನ ಇದಾಗಿದೆ," ಎಂದು ವಿರೋಧ ಪಕ್ಷಗಳು ದೂರಿದೆ.

"ಕೇಂದ್ರ ಸರ್ಕಾರವು ತಮ್ಮ ಅನುಕೂಲಕ್ಕಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಮುಂದೆ ಪ್ರಧಾನಿ ಅಧಿಕಾರ ಅವಧಿಯನ್ನು ವಿಸ್ತರಣೆ ಮಾಡಲು ಹೊಸ ಕಾನೂನು ತರುತ್ತಾರಾ?," ಎಂದು ಕಾಂಗ್ರೆಸ್‌ ವಕ್ತಾರ ಶ್ರೀವತ್ಸ ಪ್ರಶ್ನಿಸಿದ್ದಾರೆ.

"ಮುಂದೆ ಈ ಬಿಜೆಪಿ ಸರ್ಕಾರ ಪ್ರಧಾನ ಮಂತ್ರಿಯ ಅಧಿಕಾರ ಅವಧಿಯನ್ನು ಹತ್ತು ವರ್ಷಗಳಿಗೆ ಏರಿಕೆ ಮಾಡಬಹುದು. ಪ್ರಜಾಪ್ರಭುತ್ವ ಭಾರತಕ್ಕೆ ಮುಖ್ಯವಾಗಿರುವ ಎಲ್ಲಾ ಸಂಸ್ಥೆಗಳನ್ನು ಮೋದಿಯು ನಿರ್ಲಜ್ಜವಾಗಿ ಮುಗಿಸುತ್ತಾರೆ. ಬಿಜೆಪಿ, ಆರ್‌ಎಸ್‌ಎಸ್‌, ಇಸಿ, ಸಿಬಿಐ, ಐಟಿ, ಇಡಿಯ ಮಹಾಘಟಬಂಧನ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಾರೆ," ಎಂದು ದೂರಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Centre brings ordinance to extend tenure of ED, CBI directors up to 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion