ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಕೊಡುಗೆ

Posted By:
Subscribe to Oneindia Kannada

ನವದೆಹಲಿ, ಜೂನ್ 29: ಕೇಂದ್ರ ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಗುತ್ತಿದೆ. ಅಲ್ಪ ಸ್ವಲ್ಪ ತಿದ್ದುಪಡಿಯೊಂದಿಗೆ 7ನೇ ವೇತನ ಆಯೋಗದ ಶಿಫಾರಸ್ಸಿಗೆ ಬುಧವಾರದಂದು ಎನ್ ಡಿಎ ಕ್ಯಾಬಿನೆಟ್ ನಿಂದ ಒಪ್ಪಿಗೆ ಸಿಕ್ಕಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಜೆ ಈ ಸಿಹಿ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ವಿತ್ತ ಸಚಿವಾಲಯವು ಶೇ 23.55ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳಕ್ಕೆ ಮನವಿ ಸಲ್ಲಿಸಿತ್ತು. 6ನೇ ವೇತನ ಆಯೋಗ ಶೇ 20ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು.[ಐಟಿ ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!]

ಯಾವಾಗಿಂದ ಜಾರಿ: ಜನವರಿ 01, 2016ರಿಂದ ಪೂರ್ವಾನ್ವಯವಾಗುವಂತೆ ಹೊಸ ಶಿಫಾರಸು ಜಾರಿಗೊಳ್ಳಲಿದೆ.

Centre to announce pay and pension hikes for govt employees

ಯಾರಿಗೆ ಲಾಭ: 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 58 ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿದಾರರಿಗೆ ಹೆಚ್ಚುವರಿ ವೇತನ, ಭತ್ಯೆ ಸಿಗಲಿದೆ.[ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ]

ಕನಿಷ್ಠ, ಗರಿಷ್ಠ ವೇತನ: 18,000 ರು ಆಗಲಿದೆ (ಹಾಲಿ 7,000 ರು ಇದೆ), ಗರಿಷ್ಠ ವೇತನ 2.5 ಲಕ್ಷ ರು(90 ಸಾವಿರ ರು ನಷ್ಟಿದೆ)[ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಏರಿಕೆ ಬಂಪರ್!]

ಕೇಂದ್ರ ಬೊಕ್ಕಸಕ್ಕೆ ಎಷ್ಟು ಹೊರೆ: 1.02 ಲಕ್ಷ ಕೋಟಿ ರು.

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Cabinet on Wednesday approved the recommendations of the Seventh Pay Commission with minor changes, a top official source told. Union Finance Minister Arun Jaitley will announce the hikes this evening. Over 23% pay hike likely for govt. employees, pensioners
Please Wait while comments are loading...