Bharat Rice-Atta: ಕಡಿಮೆ ಬೆಲೆಯಲ್ಲಿ 'ಭಾರತ್ ಅಕ್ಕಿ- ಗೋಧಿ ಹಿಟ್ಟು' ಮಾರಾಟಕ್ಕೆ ಗ್ರೀನ್ ಸಿಗ್ನಲ್
ಬೆಂಗಳೂರು, ನವೆಂಬರ್ 05: ಸಬ್ಸಿಡಿ ಬೆಲೆಯಲ್ಲಿ ದೇಶದ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳ ಒದಗಿಸುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ ಮತ್ತು ಗೋದಿ ಹಿಟ್ಟು' ಚಿಲ್ಲರೆ ಮಾರಾಟದ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ. ಇದೊಂದು ಸರ್ಕಾರದ ಬದ್ಧತೆಯ ಉಪಕ್ರವಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು 'ಭಾರತ್ ಅಕ್ಕಿ' ಚಿಲ್ಲರೆ ಮಾರಾಟದ NCCF, NAFED ಮತ್ತು ಕೇಂದ್ರೀಯ ಭಂಡಾರ್‌ನ ಮೊಬೈಲ್ ವಾಹನಗಳಿಗೆ ಮಂಗಳವಾರ (ನವೆಂಬರ್ 5) ಹಸಿರು ನಿಶಾನೆ ತೋರಿಸಿದರು. ದೇಶದ ಜನರಿಗೆ ಭಾರತ್ ಅಟ್ಟಾ ಪ್ರತಿ ಕೆಜಿಗೆ 30 ರೂ. ಹಾಗೂ ಭಾರತ್ ರೈಸ್ ಪ್ರತಿ ಕೆ.ಜಿ.ಗೆ 34 ರೂಪಾಯಿಗೆ ಇಷ್ಟು ಕಡಿಮೆ ಬೆಲೆಗೆ ಸಿಗುತ್ತದೆ.

ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಬ್ಸಿಡಿ ಬೆಲೆಯಲ್ಲಿ ಗ್ರಾಹಕರಿಗೆ ಆಹಾರ ಪದಾರ್ಥಗಳ ಒದಗಿಸಲಾಗುತ್ತಿದೆ. ಭಾರತ್ ಬ್ರಾಂಡ್‌ನ ಅಡಿಯಲ್ಲಿ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆ ಆಹಾರ ಪದಾರ್ಥಗಳ ಚಿಲ್ಲರೆ ಮಾರಾಟ ಮಾಡಲಾಗುತ್ತದೆ. ಈ ಉಪಕ್ರಮವು ಪದಾರ್ಥಗಳ ಮೇಲೆ ಸ್ಥಿರ ಬೆಲೆ ಕಾಪಾಡಲು ಸಹಾಯವಾಗಿದೆ ಎಂದು ಅವರು ತಿಳಿಸಿದರು.
ಭಾರತ್ ಅಕ್ಕಿ, ಹಿಟ್ಟು ಲಭ್ಯತೆ ಪ್ರಮಾಣ
ಚಿಲ್ಲರೆ ಮಾರಾಟದ ಹಂತ - II ರಲ್ಲಿ ಮೊದಲ ಹಂತದಲ್ಲಿ 3.69 LMT (ಲಕ್ಷ ಮಿಲಿಯನ್ ಟನ್) ಗೋಧಿ ಹಾಗೂ 2.91 LMT ಅಕ್ಕಿಯನ್ನು ಚಿಲ್ಲರೆ ಮಾರಾಟಕ್ಕೆ ಒದಗಿಸಲಾಗಿದೆ. ಈ ವಾಹನಗಳು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥ ತಲುಪಿಸಲಿವೆ.
ಈ ಮೊದಲಿದ್ದ ಚಿಲ್ಲರೆ ಮಾರಾಟದ ಹಂತ - Iರಂದು ಅಂದಾಜು 15.20 LMT ಭಾರತ್ ಗೋಧಿ ಹಿಟ್ಟು ಮತ್ತು 14.58 LMT ಭಾರತ್ ಅಕ್ಕಿಯನ್ನು ಸಬ್ಸಡಿ ದರಲ್ಲಿ ನೀಡಲಾಗಿತ್ತು ಎಂದು ಅವರು ವಿವರಿಸಿದರು.

5 ಮತ್ತು 10 ಕೆಜಿ ಚೀಲಗಳಲ್ಲೂ ಲಭ್ಯ
ಗ್ರಾಹಕರು ಭಾರತ್ ಅಟ್ಟಾ ಮತ್ತು ಭಾರತ್ ರೈಸ್ ಅನ್ನು ನೀವು ಕೇಂದ್ರೀಯ ಭಂಡಾರ್, NAFED ಮತ್ತು NCCF ಮತ್ತು ಇ-ಕಾಮರ್ಸ್, ದೊಡ್ಡ ದೊಡ್ಡ ರಿಟೇಲರ್ ಅಂಗಡಿಗಳಲ್ಲಿ, ಹೊತ್ತು ಬರುವ ಮೊಬೈಲ್ ವಾಹನಗಳಲ್ಲಿ ಖರೀದಿಸಬಹುದಾಗಿದೆ. ಈ ಹಂತ IIರಲ್ಲಿ 'ಭಾರತ್' ಬ್ರಾಂಡ್‌ಗಳ ಅಕ್ಕಿ ಮತ್ತು ಹಿಟ್ಟು ನಿಮಗೆ 5 ಕೆಜಿ ಮತ್ತು 10 ಕೆಜಿ ಚೀಲಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದ ಮಧ್ಯಮವರ್ಗದವರಿಗೂ ಸಣ್ಣ ಪ್ರಮಾಣದಲ್ಲಿ ಖರೀದಿಸಲು ಅನುಕೂಲವಾಗುತ್ತದೆ.
ಅಧಿಕ ಭತ್ತ ಸಂಗ್ರಹಣೆಯ ಗುರಿ
ನೆರೆಯ ಪಂಜಾಬ್ ರಾಜ್ಯದಲ್ಲಿ ಭತ್ತದ ಸಂಗ್ರಹಣೆ ಮಾಡಲಾಗಿದೆ. ಸದ್ಯಕ್ಕೆ ಪಂಜಾಬ್‌ನಲ್ಲಿ 184 LMT ಭತ್ತ ಸಂಗ್ರಹಣೆಯ ಗುರಿ ಹೊಂದಿದ್ದೇವೆ. ರೈತರಿಂದ ಮಂಡಿಗಳಿಗೆ ತರುವ ಪ್ರತಿಯೊಂದು ಧಾನ್ಯವನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದೇ ನವೆಂಬರ್ 4ನೇ ರವರೆಗೆ ಪಂಜಾಬ್ ಮಾರುಕಟ್ಟೆ ಅಂಗಡಿಗಳಿಗೆ ಒಟ್ಟು 104.63 LMT ಭತ್ತ ಬಂದಿದೆ ಎಂದು ಅವರು ಲೆಕ್ಕ ಕೊಟ್ಟಿದ್ದಾರೆ.
ಭಾರತ ಸರ್ಕಾರ ನಿರ್ಧರಿಸಿದಂತೆ ಗ್ರೇಡ್ 'ಎ' ಭತ್ತವನ್ನು ಎಂಎಸ್‌ಪಿ ರೂ. 2320ಗೆ ಖರೀದಿಸಲಾಗುತ್ತಿದೆ. ಪ್ರಸಕ್ತ 2024-25 ರಲ್ಲಿ ಈವರೆಗೆ ಕೇಂದ್ರ ಸರ್ಕಾರವು ಒಟ್ಟು ಭತ್ತವು 20557 ಕೋಟಿ ಮೌಲ್ಯದ ಭತ್ತ ಸಂಗ್ರಹಿಸಿದೆ. ಅದರಿಂದ 5.38 ಲಕ್ಷ ರೈತರಿಗೆ ಆರ್ಥಿಕವಾಗಿ ಸಹಾಯವಾಗಿದೆ ಎಂದು ಪ್ರಹ್ಲಾದ್ ಜೋಶಿಯವರು ತಿಳಿಸಿದರು.












Click it and Unblock the Notifications