ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ ಸರ್ಕಾರ ನಿರಾಕರಣೆ

By Manjunatha
|
Google Oneindia Kannada News

Recommended Video

ಇಂಧನ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ ಸರ್ಕಾರ ನಕಾರ | Oneindia Kannada

ನವದೆಹಲಿ, ಸೆಪ್ಟೆಂಬರ್ 05: ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿ ಏರುತ್ತಿದ್ದರೂ ಸಹ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹಿಂಪಡೆಯಲು ಅಥವಾ ಕಡಿಮೆ ಮಾಡಲು ಸರ್ಕಾರ ಸಿದ್ಧವಿಲ್ಲ.

ಇಂಧನ ಬೆಲೆ ಮಿತಿ ಮೀರು ಏರುತ್ತಿರುವ ಕಾರಣ ಅಬಕಾರಿ ಸುಂಕವನ್ನು ತಗ್ಗಿಸಿ ಇಂಧನ ಬೆಲೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕುತ್ತದೆ ಎಂದು ಹೇಳಲಾಗಿತ್ತು. ಆದರೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು 'ಅಬಕಾರಿ ಸುಂಕ ತಗ್ಗಿಸುವುದಿಲ್ಲ' ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 82ರೂ.ಗೆ ಸನಿಹಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 82ರೂ.ಗೆ ಸನಿಹ

ಅಬಕಾರಿ ಸುಂಕ ಕಡಿತ ಮಾಡಿದರೆ ವಿತ್ತಿಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಾವು ಹಣಕಾಸಿನ ಅಸತೋಲನ ತಂದು ಕೊಳ್ಳುವುದು ತರವಲ್ಲ, ನಾವು ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಕಡೆಗೆ ಗಮನವಹಿಸಿದ್ದೇವೆ' ಎಂದು ಹಣಕಾಸು ಇಲಾಖೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

Central government rules out reduction of excise duty on fuel

ಡಾಲರ್ ಮುಂದೆ ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಹೆಚ್ಚುತ್ತಿರುವ ತೈಲ ಬೆಲೆಯಿಂದಾಗಿ ಪೆಟ್ರೋಲ್, ಡೀಸೆಲ್‌ಗಳು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಪ್ರಸ್ತುತ ಪೆಟ್ರೋಲ್ ಬೆಲೆಯು ಬೆಂಗಳೂರಿನಲ್ಲಿ ಲೀಟರ್‌ಗೆ 81.98 ಇದೆ. ಡೀಸೆಲ್ ಬೆಲೆ ಲೀಟರ್‌ಗೆ 73.72 ರೂಪಾಯಿ ಇದೆ. ಇನ್ನು ಎಲ್‌ಪಿಜಿ ಬೆಲೆ ಕೆ.ಜಿಗೆ 41.69 ಇದೆ.

ಬಿತ್ತು ಬಿತ್ತು ಬಿತ್ತು...ಒಂದು ಡಾಲರ್ ಗೆ 71.21 ರುಪಾಯಿಬಿತ್ತು ಬಿತ್ತು ಬಿತ್ತು...ಒಂದು ಡಾಲರ್ ಗೆ 71.21 ರುಪಾಯಿ

ಮೂಡಿ (moody) ಹೂಡಿಕೆದಾರರ ಸೇವಾ ಸಂಸ್ಥೆಯ ವರದಿ ಪ್ರಕಾರ ಭಾರತವು 2019ರ ಹಣಕಾಸು ವರ್ಷದ ಅಂತ್ಯದ ವೇಳೆಗೆ 3.3 ರಷ್ಟು ವಿತ್ತಿಯ ಕೊರತೆಯನ್ನು ಅನುಭವಿಸಲಿದೆ. ಈಗ ಇಂಧನ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದರೆ ವಿತ್ತಿಯ ಕೊರತೆ ಹೆಚ್ಚಾಗುತ್ತದೆ ಎಂಬುದು ಕೇಂದ್ರದ ಲೆಕ್ಕಾಚಾರ.

ಪ್ರಸ್ತುತ ಪ್ರತಿ ಲೀಟರ್‌ಗೆ 19.48 ರೂಪಾಯಿ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಡೀಸೆಲ್‌ ಮೇಲೆ 15.33 ರೂಪಾಯಿ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇಂಧನ ಬೆಲೆಯ ಬಹುತೇಕ ಅರ್ಧದಷ್ಟು ಬೆಲೆ ರಾಜ್ಯ ಮತ್ತು ಕೇಂದ್ರಗಳು ವಿಧಿಸುವ ತೆರಿಗೆಗಳಿಂದಲೇ ಆಗಿರುತ್ತದೆ.

'ಪೆಟ್ರೋಲ್- ಡೀಸೆಲ್ ಬೆಲೆ ಹೊತ್ತಿ ಉರಿಯಲು ಅಮೆರಿಕದ ನೀತಿ ಕಾರಣ''ಪೆಟ್ರೋಲ್- ಡೀಸೆಲ್ ಬೆಲೆ ಹೊತ್ತಿ ಉರಿಯಲು ಅಮೆರಿಕದ ನೀತಿ ಕಾರಣ'

ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಇಂಧನ ಬೆಲೆ ಇಳಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಸಾರ್ವಜನಿಕರು ಒಂದೋ ಆಂಧೋಲನದ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಅಥವಾ ವಾಹನಗಳನ್ನು ಬಳಕೆ ಕಡಿಮೆ ಮಾಡಬೇಕು. ಇಲ್ಲವೆ ಡಾಲರ್ ಎದುರು ರೂಪಾಯಿ ಬಲಗೊಳ್ಳುವವರೆಗೆ ಕಾಯಬೇಕು.

English summary
Central government did not reduce excise duty on petrol and diesel. Finance minister office says to media that 'we should rather be fiscally prudent'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X