2047ರ ವೇಳೆಗೆ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ಲಾನ್-ವೆಚ್ಚ ಎಷ್ಟು?
ನವದೆಹಲಿ, ಮಾರ್ಚ್, 23: ದೇಶದಲ್ಲಿ ಎಕ್ಸ್‌ಪ್ರೆಸ್ ವೇಗಳು ಅಬೀವೃದ್ಧಿಯಾಗುತ್ತಲೇ ಇವೆ. ಹಾಗೆಯೇ 2047ರ ಹೊತ್ತಿಗೆ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಾಗಾದರೆ ಆ ಪ್ಲಾನ್ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಯೋಜನೆಯಿಂದ ಟ್ರಕ್‌ಗಳು ಒಂದು ದಿನದಲ್ಲಿ 800 ಕಿಲೋ ಮೀಟರ್ ಕ್ರಮಿಸಲು ಸಾಧ್ಯ ಆಗಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಟ್ರಕ್‌ಗಳು ಒಂದು ದಿನದಲ್ಲಿ 300-350 ಕಿಲೋ ಮೀಟರ್ ಕ್ರಮಿಸುತ್ತವೆ. ಇದು ಯುಎಸ್ ಮತ್ತು ಯುರೋಪ್‌ನ ಅಂಕಿ-ಅಂಶಗಳಿಗಿಂತ ಕಡಿಮೆ ಆಗಿದೆ.

ಯುರೋಪ್‌ನಲ್ಲಿ ದಿನಕ್ಕೆ 750 ಕಿಲೋ ಮೀಟರ್ ಆಗಿದ್ದರೆ, ಯುಎಸ್‌ನಲ್ಲಿ ಚಾಲಕರು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ದಿನಕ್ಕೆ 1,100-1,200 ಕಿಲೋ ಮೀಟರ್‌ವರೆಗೆ ಕಾನೂನುಬದ್ಧವಾಗಿ ಚಾಲನೆ ಮಾಡಬಹುದು. ಎಕ್ಸ್‌ಪ್ರೆಸ್‌ವೇಗಳು ಮತ್ತು ಹೊಸ ಹೆದ್ದಾರಿಗಳೊಂದಿಗೆ ವೇಗದ ಹೆಚ್ಚಳವು ಲಾಜಿಸ್ಟಿಕ್ಸ್ ವೆಚ್ಚವನ್ನು ಶೇಕಡಾ 3-4ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವರದಿಗಳ ಪ್ರಕಾರ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER), ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಮತ್ತು ತಜ್ಞರೊಂದಿಗೆ ಸಮಾಲೋಚನೆ ಮಾಡಿ ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚಗಳು ಒಟ್ಟು ಆರ್ಥಿಕ ಉತ್ಪಾದನೆಯ ಶೇಕಡಾ 7.8ರಿಂದ 8.9ರ ನಡುವೆ ಇರುತ್ತದೆ.
ಲಾಜಿಸ್ಟಿಕ್ಸ್ ಅನ್ನು ಹೆಚ್ಚು ಪರಿಣಾಮಕಾರಿ ಆಗಿ ಮಾಡಲು 2030ರ ವೇಳೆಗೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ವಿಶ್ವ ಬ್ಯಾಂಕ್‌ನ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ ಶ್ರೇಯಾಂಕವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಲಾಜಿಸ್ಟಿಕ್ಸ್ ನೀತಿಯನ್ನು ಹೊರತಂದಿತ್ತು.
2047ರ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜಾಲದ ಅಭಿವೃದ್ಧಿಗಾಗಿ ಮಾಸ್ಟರ್‌ಪ್ಲಾನ್ ದೇಶದ ರಾಷ್ಟ್ರೀಯ ಹೆದ್ದಾರಿಗಳ ಒಟ್ಟಾರೆ ಚೌಕಟ್ಟನ್ನು ಬಹುಮುಖವಾಗಿ ಹೆಚ್ಚಿಸುತ್ತದೆ ಎಂದು ಅಧಿಕಾರಿ ತಿಳಿಸಿದರು. ಮಾಸ್ಟರ್‌ಪ್ಲಾನ್ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಿದ್ಧಪಡಿಸಿದ ಬ್ರಾಡರ್ ವಿಷನ್ 2047ರ ಭಾಗ ಆಗಿದೆ.
ಈ ಯೋಜನೆಯಡಿ 50,000 ಕಿಲೋ ಮೀಟರ್ ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಗಳ ಜೋಡಣೆಯು ದೇಶದ ಯಾವುದೇ ಸ್ಥಳದಿಂದ ಕೇವಲ 100-125 ಕಿಲೋ ಮೀಟರ್ ಆಗಿರುತ್ತದೆ. ಪ್ರಸ್ತುತ ದೇಶದಲ್ಲಿ ಎಕ್ಸ್‌ಪ್ರೆಸ್‌ವೇಗಳ ಒಟ್ಟು ಉದ್ದ 2913 ಕಿಲೋ ಮೀಟರ್ ಆಗಿರುತ್ತದೆ. ದೇಶದಲ್ಲಿ ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಉದ್ದ 1.46 ಲಕ್ಷ ಕಿಲೋ ಮೀಟರ್ ಆಗಿದ್ದು, ಭಾರತ್‌ಮಾಲಾ ನಂತಹ ಚಾಲ್ತಿಯಲ್ಲಿರುವ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಎಕ್ಸ್‌ಪ್ರೆಸ್‌ವೇಗಳು ಮತ್ತು ವಿಸ್ತರಣೆಗಳನ್ನು ಪೂರ್ಣಗೊಳಿಸುವುದರಿಂದ ಒಟ್ಟು ಉದ್ದವು 2 ಲಕ್ಷ ಕಿ.ಮೀ. ಮೀರುತ್ತದೆ.
ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ಹೊರತುಪಡಿಸಿ, ಅಸ್ತಿತ್ವದಲ್ಲಿರುವ ಹೆದ್ದಾರಿಗಳಲ್ಲಿ ಸಾಮರ್ಥ್ಯ ವರ್ಧನೆಗೆ ಸರ್ಕಾರವು ಗಮನಹರಿಸಿದೆ. 2014ರಲ್ಲಿ ಶೇಕಡಾ 30ರಷ್ಟು ಇದ್ದ 2 ಲೇನ್ ಅಗಲಕ್ಕಿಂತ ಕಡಿಮೆ ಇರುವ ಹೆದ್ದಾರಿಗಳ ಪಾಲು 2023ರಲ್ಲಿ ಶೇಕಡಾ 10ಕ್ಕೆ ಇಳಿದಿದೆ. ಅವುಗಳ ಒಟ್ಟಾರೆ ಉದ್ದವು 2014ರಲ್ಲಿ 27,517 ಕಿಲೋ ಮೀಟರ್‌ನಿಂದ 14,850 ಕಿಲೋ ಮೀಟರ್‌ಗೆ ಇಳಿಕೆಯಾಗಿದೆ.
ಎರಡು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ 4 ಲೇನ್‌ಗಳಿಗಿಂತ ಕಡಿಮೆಯಿರುವ ಹೆದ್ದಾರಿಗಳ ಪಾಲು ಶೇಕಡಾ 58 ಅಥವಾ 85,096 ಕಿಲೋ ಮೀಟರ್‌ಗೆ ಏರಿದೆ. ನಾಲ್ಕು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಹೆದ್ದಾರಿಗಳ ಉದ್ದವು 46,179 ಕಿಲೋ ಮೀಟರ್‌ಗೆ ಏರಿಕೆ ಆಗಿದೆ. ಇದು ಒಟ್ಟು ಶೇಕಡಾ 32ರಷ್ಟು ಆಗಿದ್ದು, ಇದು 2014ರಲ್ಲಿ 18,371 ಕಿಲೋ ಮೀಟರ್ ಹೆಚ್ಚಾಗಿದೆ.
ಒಟ್ಟಿನಲ್ಲಿ ದೇಶದಲ್ಲಿ ಹೊರ ದೇಶದಂತೆಯೇ ದೇಶದಲ್ಲಿಯೂ ಕೂಡ ಎಕ್ಸ್‌ಪ್ರೆಸ್ ವೇಗಳು ಅಭಿವೃದ್ಧಿಯಾಗುತ್ತಿದ್ದು, ಇದೀಗ ಮತ್ತಷ್ಟು ಕಿಲೋ ಮೀಟರ್ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.












Click it and Unblock the Notifications