Central Government Employees: ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವೇತನ, ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
Central Government Employees: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈ ತಿಂಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ವೇತನ ಲಭ್ಯವಾಗಲಿದೆ. ಸಾಮಾನ್ಯವಾಗಿ ತಿಂಗಳ ಕೊನೆಯ ದಿನದಂದು ಜಮಾ ಆಗುತ್ತಿದ್ದ ಸಂಬಳ ಮತ್ತು ಪಿಂಚಣಿ ಹಣವನ್ನು ಈ ಬಾರಿ ಸೆಪ್ಟೆಂಬರ್ 25ರಂದೇ ನೌಕರರ ಖಾತೆಗಳಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೇಶವ್ಯಾಪಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ 3 ದಿನಗಳ ಮುಷ್ಕರ (ಸೆಪ್ಟೆಂಬರ್ 28ರಿಂದ 30ರವರೆಗೆ) ಈ ಪ್ರಮುಖ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ತಿಂಗಳಾಂತ್ಯದಲ್ಲಿ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸುವುದರಿಂದ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರಿ ಸಿಬ್ಬಂದಿ ಹಾಗೂ ಪಿಂಚಣಿದಾರರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗದೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಯಾರಿಗೆಲ್ಲ ದೊರೆಯಲಿದೆ ಈ ಸೌಲಭ್ಯ?
* ರಕ್ಷಣಾ ಇಲಾಖೆ
* ಅಂಚೆ ಇಲಾಖೆ
* ದೂರಸಂಪರ್ಕ ಇಲಾಖೆ
5 ದಿನಗಳ ಮುಂಚಿತವಾಗಿಯೇ ಸ್ಯಾಲರಿ
ಈ ಇಲಾಖೆಯವರು ಸೇರಿದಂತೆ ಕೇಂದ್ರದ ಎಲ್ಲಾ ಆಡಳಿತಾತ್ಮಕ ಮತ್ತು ರಕ್ಷಣಾ ವಿಭಾಗಗಳ ನೌಕರರು ಹಾಗೂ ಪಿಂಚಣಿದಾರರಿಗೆ ಎಂದಿಗಿಂತ 5 ದಿನಗಳ ಮುಂಚಿತವಾಗಿಯೇ ಈ ತಿಂಗಳ ಹಣ ಕೈಸೇರಲಿದೆ. ಮಾಸಾಂತ್ಯದ ಬ್ಯಾಂಕ್ ಮುಷ್ಕರದಿಂದ ಸಾರ್ವಜನಿಕ ನಗದು ವ್ಯವಹಾರ ಮತ್ತು ಎಟಿಎಂ ಸೇವೆಗಳ ಮೇಲೆಯೂ ಭಾಗಶಃ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರಿ ನೌಕರರಿಗೆ ಮುಂಚಿತವಾಗಿ ವೇತನ ಬಿಡುಗಡೆ ಮಾಡಲು ನಿರ್ಧರಿಸಿರುವುದು ನೌಕರರ ವಲಯದಲ್ಲಿ ನೆಮ್ಮದಿ ತಂದಿದೆ.
ಬ್ಯಾಂಕ್ ಮುಷ್ಕರಕ್ಕೆ ಕಾರಣವೇನು?
ಶೇಕಡ 90ಕ್ಕೂ ಹೆಚ್ಚು ಬ್ಯಾಂಕ್ ಸಿಬ್ಬಂದಿಯನ್ನು ಪ್ರತಿನಿಧಿಸುವ 'ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್' ಈ 3 ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ಕೆಲಸದ ಅವಧಿ ಜಾರಿಗೊಳಿಸಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಪ್ರಮುಖ ಬೇಡಿಕೆಯಾಗಿದೆ. ಆನ್‌ಲೈನ್ ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂ ಸೇವೆಗಳು ಲಭ್ಯವಿರಲಿವೆ. ಆದರೂ ತಾಂತ್ರಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಸೆಪ್ಟೆಂಬರ್ 27ರೊಳಗಾಗಿ ತಮ್ಮ ಅಗತ್ಯ ಬ್ಯಾಂಕ್ ವಹಿವಾಟುಗಳನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.


Click it and Unblock the Notifications
