Get Updates
Get notified of breaking news, exclusive insights, and must-see stories!

Public Holiday: ಏಪ್ರಿಲ್ 14 ಸಾರ್ವಜನಿಕ ರಜೆ ದಿನವೆಂದು ಕೆಂದ್ರ ಸರ್ಕಾರ ಘೋಷಣೆ

Public Holiday: ದೇಶದಲ್ಲಿ ಹಲವು ದಿನಗಳನ್ನು ಸಾರ್ವಜನಿಕ ರಜೆ ದಿನಗಳನ್ನಾಗಿ ಘೋಷಣೆ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರವು ಈ ಸಾಲಿಗೆ ಏಪ್ರಿಲ್‌ 14 ಅನ್ನು ಕೂಡ ಸೇರ್ಪಡೆ ಮಾಡಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೇಂದ್ರ ಸರ್ಕಾರವು ಶುಕ್ರವಾರ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಿದೆ.

Central Government Declares April 14 as Public Holiday Know details

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಖಾತೆಯಲ್ಲಿ ಈ ಘೋಷಣೆ ಮಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಂವಿಧಾನದ ಶಿಲ್ಪಿ, ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದವರು, ನಮ್ಮ ಗೌರವಾನ್ವಿತ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಜಿ ಅವರ ಜನ್ಮ ದಿನಾಚರಣೆಯಂದು ಈಗ ಸಾರ್ವಜನಿಕ ರಜಾದಿನವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.

ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ಬಾಬಾ ಸಾಹೇಬ್ ಅವರ ನಿಷ್ಠಾವಂತ ಅನುಯಾಯಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ ಎಂದು ಶೇಖಾವತ್ ಹೇಳಿದರು. ಇನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಏಪ್ರಿಲ್ 14, 1891ರಂದು ಮಧ್ಯಪ್ರದೇಶದ ಮಾವ್‌ನಲ್ಲಿ ಜನಿಸಿದರು. ಅವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದಲಿತ ಸಮುದಾಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪ್ರಬಲ ಪ್ರತಿಪಾದಕರಾಗಿದ್ದರು. ಅಂಚಿನಲ್ಲಿರುವ ಮತ್ತು ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಭಾರತದ ಅಭಿವೃದ್ಧಿಗೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಹಾಗೂ ಅವರನ್ನು ಸ್ಮರಿಸಲಾಗುತ್ತದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

* 2025ರ ಜನವರಿ 14ರ: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* 2025ರ ಫೆಬ್ರವರಿ 26 ಬುಧವಾರ - ಮಹಾ ಶಿವರಾತ್ರಿ
* 2025ರ ಮಾರ್ಚ್‌ 31 ಸೋಮವಾರ: ಖುತುಬ್ ಎ ರಂಜಾನ್
* 2025ರ ಏಪ್ರಿಲ್‌ 10 ಗುರುವಾರ: ಮಹಾವೀರ ಜಯಂತಿ
* 2025ರ ಏಪ್ರಿಲ್‌ 14 ಸೋಮವಾರ: ಡಾ.ಬಿಆರ್ ಅಂಬೇಡ್ಕರ್ ಜಯಂತಿ
* 2025ರ ಏಪ್ರಿಲ್‌ 18 ಶುಕ್ರವಾರ: ಗುಡ್ ಫ್ರೈಡೆ
* 2025ರ ಏಪ್ರಿಲ್‌ 30 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
* 2025ರ ಮೇ 01 ಗುರುವಾರ: ಕಾರ್ಮಿಕ ದಿನಾಚರಣೆ
* 2025ರ ಜೂನ್‌ 07 ಶನಿವಾರ: ಬಕ್ರೀದ್
* 2025ರ ಆಗಸ್ಟ್‌ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* 2025ರ ಆಗಸ್ಟ್‌ 27 ಬುಧವಾರ: ಗಣೇಶ ಚತುರ್ಥಿ
* 2025ರ ಸೆಪ್ಟೆಂಬರ್ 05 ಶುಕ್ರವಾರ: ಈದ್ ಮಿಲಾದ್
* 2025ರ ಅಕ್ಟೋಬರ್ 1 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2025ರ ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ
* 2025ರ ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* 2025ರ ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
* 2025ರ ಅಕ್ಟೋಬರ್ 22 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
* 2025ರ ನವೆಂಬರ್ 01 ಶನಿವಾರ -ಕನ್ನಡ ರಾಜ್ಯೋತ್ಸವ
* 2025ರ ಡಿಸೆಂಬರ್ 25 ಗುರುವಾರ: ಕ್ರಿಸ್ ಮಸ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+