ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶ: ಭಾರತ- ಚೀನಾ ಗಡಿ ಉದ್ದಕ್ಕೂ 22 ಹೊಸ ಮೊಬೈಲ್ ಟವರ್‌ ಸ್ಥಾಪನೆ

|
Google Oneindia Kannada News

ನವದೆಹಲಿ ಡಿ. 22: ಭಾರತ- ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಮೊಬೈಲ್ ಸಂಪರ್ಕವನ್ನು ಸುಧಾರಿಸಲು ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ 22 ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಿಲಿಟರಿಗಾಗಿ ಮಿನಿ ಹೈಡಲ್ ಯೋಜನೆಯನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ.

ರಾಜ್ಯದ ಗಡಿ ಪ್ರದೇಶಗಳಲ್ಲಿ 22 ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಕೇಂದ್ರ ಸರ್ಕಾರವು ಈಗಾಗಲೇ ಅದನ್ನು ಮಂಜೂರು ಮಾಡಿದೆ ಎಂದು ತವಾಂಗ್‌ನ ಡೆಪ್ಯೂಟಿ ಕಮಿಷನರ್ ಕೆಸಾಂಗ್ ನ್‌ಗುರುಪ್ ದಾಮೊ ಎಎನ್‌ಐಗೆ ತಿಳಿಸಿದ್ದಾರೆ.

ಭಾರತ್‌ ಜೋಡೋ ಯಾತ್ರೆ ತಡೆಯಲು ಬಿಜೆಪಿಯಿಂದ ಹೊಸ ಕುತಂತ್ರ: ರಾಹುಲ್‌ ಗಾಂಧಿಭಾರತ್‌ ಜೋಡೋ ಯಾತ್ರೆ ತಡೆಯಲು ಬಿಜೆಪಿಯಿಂದ ಹೊಸ ಕುತಂತ್ರ: ರಾಹುಲ್‌ ಗಾಂಧಿ

"ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್ ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಿವೆ. ಬಿಎಸ್‌ಎನ್‌ಎಲ್ 18 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಿದೆ. ಏರ್‌ಟೆಲ್ 4 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಿದೆ. ನಾವು ಈ ಮೊದಲು 45 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ನೀಡಿದ್ದೆವು. ಕೇಂದ್ರ ಸರ್ಕಾರ ಸದ್ಯಕ್ಕೆ 22 ಮೊಬೈಲ್ ಟವರ್‌ಗಳಿಗೆ ಅನುಮೋದನೆ ನೀಡಿದೆ" ಎಂದು ಮಾಹಿತಿ ನೀಡಿದ್ದಾರೆ.

Central Government Decided to Install 22 New Mobile Towers in Arunachal Pradesh

ಭದ್ರತಾ ಪಡೆಗಳಿಗೆ ಮತ್ತು ನಾಗರಿಕರಿಗೆ ಉತ್ತಮ ಮೊಬೈಲ್ ಸಂಪರ್ಕವನ್ನು ಗುರಿಯಾಗಿಟ್ಟುಕೊಂಡು ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಸುಧಾರಿಸಲು ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ. ರಕ್ಷಣಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

ಇನ್ನು, ಈ 22 ಹೊಸ ಮೊಬೈಲ್ ಟವರ್‌ಗಳನ್ನು ಗಡಿ ಪ್ರದೇಶಗಳಾದ ಚುನಾ, ಯಾಂಗ್ಟ್ಸೆ, ದಮ್‌ಟೆಂಗ್ ಬುಮ್ಲಾ, ಕ್ಲೆಮ್ಟಾ, ವೈ ಜಂಕ್ಷನ್, ಟಿ ಗೊಂಪಾ ಪ್ರದೇಶ, ಲುಂಪೊ, ಜೆಮಿತಾಂಗ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಕೆಸಾಂಗ್ ನ್‌ಗುರುಪ್ ದಾಮೊ ಹೇಳಿದ್ದಾರೆ.

ಟಿ ಗೊಂಪಾ ಪ್ರದೇಶದಲ್ಲಿ ಸೇನೆಗಾಗಿ 200 ಕಿಲೋವ್ಯಾಟ್‌ನ ಮಿನಿ ಹೈಡಲ್ ಯೋಜನೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೇ ಮಾಗೋಡು ಪ್ರದೇಶದಲ್ಲಿ ಮತ್ತೊಂದು ಮಿನಿ ಹೈಡಲ್ ಯೋಜನೆಯನ್ನು ಸರ್ಕಾರ ನಿರ್ಮಿಸಲಿದೆ. ಜೊತೆಗೆ ಬಯಲು ಸೀಮೆ ಪ್ರದೇಶಗಳಿಗೂ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಯೋಜಿಸಿದೆ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಡಳಿತವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರದ ಈ ಯೋಜನೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೋಡಲಾಗುತ್ತಿದೆ.

English summary
Central government decided to install 22 new mobile towers near Line of Actual Control (LAC) in Arunachal Pradesh. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X