ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಹಿನ್ನೆಲೆ: ಜನ ಗಣತಿ, ಎನ್ ಪಿಆರ್ ಎಲ್ಲವೂ ಮುಂದಕ್ಕೆ!

|
Google Oneindia Kannada News

ನವದೆಹಲಿ, ಆ. 31: ಕೊರೊನಾವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜನಗಣತಿ ಮೊದಲನೇ ಹಂತ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR) ಎಲ್ಲವನ್ನು ಮುಂದಿನ ವರ್ಷಕ್ಕೆ ಮುಂಡೂಡಲಾಗಿದೆ. ಭಾರತದ ಜನ ಗಣತಿ ಪ್ರಕ್ರಿಯೆಯು ವಿಶ್ವದಲ್ಲೇ ಅತಿ ದೊಡ್ಡ ಆಡಳಿತಾತ್ಮಕ ಹಾಗೂ ಅಂಕಿ ಅಂಶ ಸಂಗ್ರಹ ಪ್ರಕ್ರಿಯೆ ಎನಿಸಿಕೊಂಡಿದೆ.

Recommended Video

ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

ಈ ಬಾರಿ ಸುಮಾರು 30 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಭಾಗಿಯಾಗಿ, ಅಂಕಿ ಅಂಶ ಸಂಗ್ರಹದಲ್ಲಿ ತೊಡಗಿಕೊಳ್ಳಬೇಕಾಗಿತ್ತು. ಆದರೆ, ಕೊವಿಡ್ 19 ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತಡವಾದರೂ ಸಮಸ್ಯೆಯಿಲ್ಲೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2021ರಲ್ಲಿ ಮೇ ಅಥವಾ ಜೂನ್ ತಿಂಗಳಿನಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಯಿದೆ.

ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?

ಎಲ್ಲವೂ ಸರಿಯಾಗಿದ್ದರೆ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಎನ್ ಪಿ ಆರ್ ಮಾಹಿತಿ ಸಂಗ್ರಹ, ಜನಗಣತಿ, ಮನೆ ಗಣತಿ ಇನ್ನಿತರ ಮಾಹಿತಿ ಸಂಗ್ರಹ ಕಾರ್ಯ ಮುಕ್ತಾಯವಾಗಬೇಕಿತ್ತು. ಆದರೆ, ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

Census, NPR unlikely in 2020 amidst coronavirus pandemic

ಜನಗಣತಿ: ಕಳೆದ 130 ವರ್ಷಗಳಿಂದ ನಡೆದುಕೊಂಡು ಬಂದಿರುವ ಬೃಹತ್ ಅಂಕಿ ಅಂಶ ಕಲೆ ಹಾಕುವ ಪ್ರಕ್ರಿಯೆ ಇದಾಗಿದೆ. ಭಾರತದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಈಗೆಲ್ಲ ಜನಗಣತಿ ಡಾಟಾವನ್ನು ವಿಶೇಷವಾಗಿ ರೂಪಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕ ಪಡೆಯಬಹುದಾಗಿದೆ. ಸಾಮಾನ್ಯ ನಿವಾಸಿಯ ಮಾಹಿತಿ ಸಂಗ್ರಹ ಎನ್ ಪಿ ಆರ್ ಉದ್ದೇಶವಾಗಿದೆ.

NRCಗೂ ಮೊದಲು NPR: ಕೇಂದ್ರದ ಮಹತ್ವದ ತೀರ್ಮಾನNRCಗೂ ಮೊದಲು NPR: ಕೇಂದ್ರದ ಮಹತ್ವದ ತೀರ್ಮಾನ

ಕಟ್ಟಡ ಸಂಖ್ಯೆ, ಸೆನ್ಸಸ್‌ ಹೌಸ್‌ ಸಂಖ್ಯೆ, ನಿವಾಸಿಗಳ ಸಂಖ್ಯೆ, ಕುಡಿಯುವ ನೀರಿನ ಮೂಲ, ಬೆಳಕಿನ ಮೂಲ, ಶೌಚಾಲಯ ವ್ಯವಸ್ಥೆ ಹಾಗೂ ಮಾದರಿ, ಟಿವಿ, ಲ್ಯಾಪ್‌ಟಾಪ್‌, ಇಂಟರ್‌ನೆಟ್‌, ಮೋಟಾರ್‌ ಸೈಕಲ್‌, ಕಾರು, ಮೊಬೈಲ್‌ ಸಂಖ್ಯೆ ಸೇರಿದಂತೆ ಒಟ್ಟು 31 ವಿಚಾರಗಳ ಬಗ್ಗೆ ಪ್ರತಿ ಮನೆಯಿಂದ ಮಾಹಿತಿ ಸಂಗ್ರಹಿಸಲಾಗುವುದು. ಇದೇ ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ಮಾದರಿಯಲ್ಲಿ ನೋಂದಣಿ ಮಾಡಲಾಗುತ್ತಿದೆ.

ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಜನಗಣತಿಯು 1948ರ ಜನಗಣತಿ ಕಾಯ್ದೆಯಿಂದ ಮಾನ್ಯತೆ ಪಡೆದು ನಡೆಯುತ್ತದೆ. ಎನ್‌ಪಿಆರ್‌ಅನ್ನು 1955ರ ಪೌರತ್ವ ಕಾಯ್ದೆಯಡಿ ರೂಪಿಸಲಾದ ನಿಯಮಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. 1955ರ ಪೌರತ್ವ ಕಾಯ್ದೆಗೆ 2004ರಲ್ಲಿ ಸೆಕ್ಷನ್ 14A ಅನ್ನು ಅಡಕ ಮಾಡಲಾಗಿತ್ತು. ಇದರ ಮೂಲಕ ಭಾರತದ ಪ್ರತಿ ನಾಗರಿಕನ ಕಡ್ಡಾಯ ನೋಂದಣಿ ಮಾಡಿಕೊಳ್ಳುವುದು ಹಾಗೂ ಅವರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡುವುದಕ್ಕೆ ಚಾಲನೆ ನೀಡಲಾಗಿತ್ತು.

English summary
The first phase of the Census and the exercise to update the National Population Register (NPR), scheduled for this year but deferred due to the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X