ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು

By Mahesh
|
Google Oneindia Kannada News

ಲಕ್ನೋ, ಮಾ.26-: ಉತ್ತರ ಪ್ರದೇಶದ ಹೆಸರಾಂತ ಮಾವು ಬೆಳೆಗಾರ ಹಾಜಿಕಲೀಮುಲ್ಲಾ ಅವರು ಮಾವಿನ ಹೊಸ ತಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದಾರೆ. ಮೋದಿ ಮ್ಯಾಂಗೊ (ಮೋದಿ ಮಾವು) ಎಂದು ನಾಮಕರಣ ಮಾಡಿರುವ ಹಣ್ಣು ಪ್ರಧಾನಿ ಅವರು ರುಚಿ ನೋಡಲಿ ಎಂಬುದು ನನ್ನ ಆಸೆ ಎಂದು ಕಲೀಮುಲ್ಲಾ ಹೇಳಿದ್ದಾರೆ.

ಆ ಹಣ್ಣನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಲು ನನಗೆ ಸೂಕ್ತ ಮಾಧ್ಯಮದ ನೆರವು ಸಿಗುತ್ತಿಲ್ಲ ಎಂದು ಮಾವು ಕೃಷಿಗಾಗಿ ಪದ್ಮಶ್ರೀ ಪಡೆದಿರುವ ಕಲೀಮುಲ್ಲಾ ಹೇಳಿದರು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಮಾವು ತಳಿಗಳನ್ನು ಸೃಷ್ಟಿಸಿ ಅದಕ್ಕೆ ಸೆಲೆಬ್ರಿಟಿಗಳ ಹೆಸರನ್ನಿಡುವ ಪರಿಪಾಠವನ್ನು ಕಲೀಮುಲ್ಲಾ ಮುಂದುವರೆಸಿಕೊಂಡು ಬಂದಿದ್ದಾರೆ. [ನಿರ್ಭಯಾ ಹೆಸರಿನಲ್ಲಿ ಮಾವಿನ ಹಣ್ಣು!]

'Aam Aadmi': Celebrated mango grower comes out with ‘Modi mango’

ಈಗ ತಾವೇ ಖುದ್ದಾಗಿ ಮೋದಿಯವರಿಗೆ ಈ ಹಣ್ಣನ್ನು ತಲುಪಿಸಬೇಕು. ಅವರು ಈ ಹಣ್ಣಿನ ಸ್ವಾದವನ್ನು ಸವಿಯುವುದನ್ನು ಕಣ್ಣಾರೆ ನೋಡಬೇಕು ಎಂದು ಕಲೀಮುಲ್ಲಾ ಆಸೆ ವ್ಯಕ್ತಪಡಿಸಿದ್ದಾರೆ. [ಸಿಹಿಸುದ್ದಿ; ಬಂದಿದೆ ಮಾವಿನ ವೈನ್]

ಏಳನೇ ತರಗತಿ ತನಕ ಮಾತ್ರ ವ್ಯಾಸಂಗ ಮಾಡಿರುವ ಕಲೀಮುಲ್ಲಾ ಅವರು ಸುಮಾರು 300ಕ್ಕೂ ಅಧಿಕ ಮಾವು ತಳಿಗಳನ್ನು ಸಂಶೋಧಿಸಿದ್ದಾರೆ. ಅನಾರ್ಕಲಿ ಹೆಸರಿನ ಎರಡು ಬಣ್ಣದ ಹಣ್ಣಿಗೆ 25,000 ರು ಪ್ರೋತ್ಸಾಹ ಧನವನ್ನು ಪಡೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಸೋನಿಯಾ ಗಾಂಧಿ ಸೇರಿದಂತೆ ಹಲವಾರು ಗಣ್ಯರ ಹೆಸರನ್ನು ಹೊಸ ತಳಿಗಳಿಗೆ ನೀಡಿದ್ದಾರೆ. [ಸಚಿನ್, ಸೋನಿಯಾ ನಂತರ ಅಖಿಲೇಶ್ ಮಾವು]

ಮಲಿಯಾಬಾದ್ ನ ಮಾವಿನ ತಜ್ಞ 75 ವರ್ಷದ ಖಾನ್ ಅವರು ಸುಮಾರು 300ಕ್ಕೂ ಅಧಿಕ ಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ. (ಪಿಟಿಐ)

English summary
Celebrated mango grower Haji Kalimullah has come out with a new ‘Modi mango’ variety and wishes that it will reach Prime Minister Narendra Modi so that he can taste the fruit named after him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X