ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್, ಸೋನಿಯಾ ನಂತರ ಅಖಿಲೇಶ್ ಮಾವು

By Mahesh
|
Google Oneindia Kannada News

Akhilesh Yadav
ಲಖ್ನೋ, ಏ.30: ಕ್ರಿಕೆಟರ್ ಸಚಿನ್ ಮಾವುಗಳು, ತಾರೆ ಐಶ್ವರ್ಯಾ ಮಾವು ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನ ಮಾವಿನ ತಳಿ ಸೃಷ್ಟಿಯಾಗಿತ್ತು. ಈಗ ಉತ್ತರಪ್ರದೇಶದ ಯುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರದಿ.

ಕಸಿ ತಜ್ಞ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಖಾನ್ ಅವರು 'ಅಖಿಲೇಶ್ ಆಮ್' ಈ ಋತುವಿನಲ್ಲಿ ಹೊರ ತರುತ್ತಿದ್ದಾರೆ.

ಕಡಿಮೆ ವಯಸ್ಸಿನ ಮಾವಿನ ಮರವೊಂದು ಫಲ ಕೊಟ್ಟಿದ್ದು ಕಂಡು ಆ ಮಾವಿನ ತಳಿಗೆ 'ಅಖಿಲೇಶ್' ಹೆಸರು ಸೂಕ್ತ ಎಂದು ಕಲೀಮುಲ್ಲಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಅಖಿಲೇಶ್ ಮಾವು ಹೇಗಿದೆ: ಕೆಂಬಣ್ಣದ ರುಚಿಕರ ಈ ಮಾವಿನ ಹಣ್ಣಿನ ಸಿಪ್ಪೆ ತೆಳುವಾಗಿದ್ದು ಜನಪ್ರಿಯವಾಗಲಿದೆ. ಈ ಮಾವಿನ ತಳಿಯ ಮೊದಲ ಫಸಲನ್ನು ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಅರ್ಪಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ.

ಮಲಿಯಾಬಾದ್ ನ ಮಾವಿನ ತಜ್ಞ 70 ವರ್ಷದ ಖಾನ್ ಅವರು ಸುಮಾರು 300ಕ್ಕೂ ಅಧಿಕ ಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ.

English summary
The famous 'dussheri' belt of Uttar Pradesh has a new offering this summer - 'Akhilesh aam', a new variety of mango named after the state's youngest Chief Minister Akhilesh Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X