ಮದುವೆಯ ಬಂಧವನ್ನು ಗಟ್ಟಿಯಾಗಿ ಬೆಸೆಯುವ ಟೈಟನ್

Posted By:
Subscribe to Oneindia Kannada

ಮದುವೆಯೆಂದ್ರೆ ಅದು ಒಂದು ಸಂಭ್ರಮ. ಅಲ್ಲಿ ಬಂಧುಮಿತ್ರರನ್ನು ಭೇಟಿ ಮಾಡುವುದರ ಜೊತೆಗೆ ಸಂಗೀತ, ನೃತ್ಯ, ನಗು ಮತ್ತು ಭರ್ತಿ ಪ್ರೀತಿ ತುಂಬಿರುತ್ತದೆ. ಬದುಕಿನ ಅವಿಸ್ಮರಣೀಯ ಘಳಿಗೆಗಳಲ್ಲಿ ಮದುವೆಯೂ ಒಂದು. ವಿವಾಹವೆಂಬುದು ಎರಡು ದೇಹ, ಮನಸುಗಳ ಬಂಧ ಮಾತ್ರವಲ್ಲ, ಪ್ರತಿಯೊಂದು ವಿಭಿನ್ನವಾಗಿರುತ್ತವೆ, ಆತ್ಮೀಯವಾಗಿರುತ್ತವೆ, ಸೃಜನಾತ್ಮಕವಾಗಿರುತ್ತವೆ.

ಇಲ್ಲಿ ಪ್ರತಿಯೊಂದು ಸಮಯಕ್ಕನುಗುಣವಾಗಿ ನಡೆಯುತ್ತಿರುತ್ತದೆ. ಮಾಂಗಲ್ಯಕ್ಕೆ ಸೂಕ್ತವಾದ ಮುಹೂರ್ತವಿದ್ದಂತೆ, ಪ್ರತಿಯೊಂದು ಆಚರಣೆ, ಪದ್ಧತಿಗಳಿಗೆ ಒಂದು ಸೂಕ್ತವಾದ ಘಳಿಗೆ ಇದ್ದೇ ಇರುತ್ತದೆ. ಮದುವೆಯಾಗುವ ವಧುವರರಿಗೆ ಈ ಸಮಯ ನೆನಪಿನಲ್ಲುಳಿಯುವಂಥದ್ದು.

Celebrate the bonds of matrimony with Titan

ಇಂಥದೊಂದು ಮುಹೂರ್ತ ವಧುವರರನ್ನು ಬಂಧಿಸುವ ನಿಶ್ಚಿತಾರ್ಥದೊಂದಿಗೆ ಆರಂಭವಾಗುತ್ತದೆ. ಗಂಡುಹೆಣ್ಣಿನ ಕಡೆಯವರು ಸಮಯ ನಿಗದಿ ಮಾಡಿಕೊಂಡು ಫಲತಾಂಬೂಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಉಡುಗೊರೆಗಳು ಅದಲುಬದಲಾಗುತ್ತವೆ. ನಗುಮುಖದೊಂದಿಗೆ ಪರಿಚಯಗಳಾಗುತ್ತವೆ. ಇಲ್ಲಿನಿಂದಲೇ ಬಾಂಧವ್ಯದ ಆರಂಭವಾಗುತ್ತದೆ. ಇಂಥ ಸಮಯದಲ್ಲಿ ಸಂಗಾತಿಯಾಗುವವರಿಗೆ ಪ್ರೀತಿ, ಆತ್ಮೀಯತೆ ತೋರಲು ಒಂದು ಒಲವಿನ ಉಡುಗೊರೆಗಿಂತ ಮಹತ್ವದ್ದು ಮತ್ತೊಂದೇನಿರುತ್ತದೆ.

ಇದು ಹೇಳಿಕೇಳಿ ಮದುವೆಯ ಸೀಸನ್. ಭಾರತದ ನೆಚ್ಚಿನ ವಾಚ್ ಕಂಪನಿಯಾಗಿರುವ ಟೈಟನ್ ಪ್ರತಿಯೊಬ್ಬರಿಗೂ ವಿಶೇಷವಾದದ್ದನ್ನು ನೀಡಲು ಸಿದ್ಧವಾಗಿದೆ. ನೋಡಲು ಆಕರ್ಷಕವಾಗಿ ಕಾಣುವ, ಕಟ್ಟಿಕೊಳ್ಳುತ್ತಲೇ ಕೈಗೆ ಮೆರುಗು ನೀಡುವ ವಾಚು ಸಂಗಾತಿಗೆ ಪರ್ಫೆಕ್ಟ್ ಉಡುಗೊರೆಯಾಗಬಲ್ಲದು. ನವನವೀನ ವಿನ್ಯಾಸದ, ಉತ್ಕೃಷ್ಟ ಗುಣಮಟ್ಟದ ಗಡಿಯಾರ ತಯಾರಿಸುವ ಪರಂಪರೆಯನ್ನು ಟೈಟನ್ ಯಾವತ್ತಿಗೂ ಮುಂದುವರಿಸಿಕೊಂಡು ಬಂದಿದೆ. ವಿಶೇಷ ಸಮಯದಲ್ಲಿ ವಿಶೇಷವಾದ ಉಡುಗೊರೆ.

Celebrate the bonds of matrimony with Titan

ಚಿನ್ನ, ರೋಸ್ ಗೋಲ್ಡ್ ಮತ್ತು ಬೆಳ್ಳಿಯಿಂದ ಆಕರ್ಷಕವಾಗಿ ರೂಪಿಸಲಾಗಿರುವ ಈ ಗಡಿಯಾರಗಳು ಮದುವೆಯ ಈ ಸಂದರ್ಭದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪವನ್ನು, ಆಕರ್ಷಕ ಮೆರುಗನ್ನು ನೀಡುತ್ತವೆ. ಆಕರ್ಷಕ ಅಂಕಿಗಳು, ಅವನ್ನು ಸುತ್ತುವ ಅತ್ಯಾಕರ್ಷಕ ಮುಳ್ಳುಗಳು ಮದುವೆಯ ಸುಸಂದರ್ಭದಲ್ಲಿ ಹೊಸ ಅರ್ಥವನ್ನೇ ನೀಡುತ್ತವೆ.

ಪ್ರೀತಿ, ಬಾಂಧವ್ಯ, ಆತ್ಮೀಯತೆಯ ದ್ಯೋತಕವಾಗಿರುವ ಮದುವೆಯಲ್ಲಿ ಹೊಸಬಗೆಯ ಆನಂದದ ಬುಗ್ಗೆ ಉಕ್ಕಿಸುವ ಈ ಟೈಟನ್ ವಾಚುಗಳ ಬೆಲೆ 3,495 ರು.ಯಿಂದ 9,495 ರು.ವರೆಗೆ ಇದೆ. ವರ್ಲ್ಡ್ ಆಫ್ ಟೈಟನ್ ಮತ್ತು ಹೆಲಿಯೋಸ್ ಸ್ಟೋರ್ಸ್ ಗಳಲ್ಲಿ, ಲೈಫ್ ಸ್ಟೈಲ್, ಸ್ಟಾಪರ್ಸ್ ಸ್ಟಾಪ್ ನಂಥ ಮಲ್ಟಿ ಬ್ರಾಂಡ್ ಔಟ್ ಲೆಟ್ ಗಳಲ್ಲಿ, ಅಧಿಕೃತ ಟೈಟನ್ ಮಳಿಗೆಗಳಲ್ಲಿ ಇವು ಲಭ್ಯ.

Celebrate the bonds of matrimony with Titan

ಈ ಉತ್ಪನ್ನಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಟೈಟನ್ ಕಂಪನಿಯ ಬಗ್ಗೆ

ಟೈಟನ್ ಕಂಪನಿ ಲಿಮಿಟೆಡ್ (ಮೊದಲಿಗೆ ಟೈಟನ್ ಇಂಡಸ್ಟ್ರೀಸ್ ಲಿಮಿಟೆಡ್) ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮತ್ತು ಟಾಟಾ ಗ್ರೂಪ್ ಜಂಟಿ ಉದ್ಯಮ. ಟೈಟನ್ ವಾಚಸ್ ಲಿಮಿಟೆಡ್ ಹೆಸರಿನಲ್ಲಿ 1987ರಲ್ಲಿ ಆರಂಭವಾಯಿತು. 1994ರಲ್ಲಿ ಆಭರಣ ಮತ್ತು ಟೈಟನ್ ಐಪ್ಲಸ್ ಕ್ಷೇತ್ರಗಳಲ್ಲಿಯೂ ಟಾಟಾ ವಿಸ್ತರಿಸಿಕೊಂಡಿತು. 2013ರಲ್ಲಿ SKINN ಆರಂಭಿಸುವುದರೊಂದಿಗೆ ಟಾಟಾ ಸುಗಂಧ್ರದ್ರವ್ಯ ಉತ್ಪನ್ನಕ್ಕೂ ಕೈಹಾಕಿತು.

Celebrate the bonds of matrimony with Titan

ಇವದು, ಟೈಟನ್ ಕಂಪನಿ ಲಿಮಿಟೆಡ್ ವಾಚ್, ಆಭರಣ ಮತ್ತು ಕನ್ನಡಕ ಉತ್ಪನ್ನಗಳಲ್ಲಿ ಅನಭಿಷಿಕ್ತ ದೊರೆಯಂತಾಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಆಯಾ ಉದ್ಯಮದ ರೂಪುರೇಷೆಯನ್ನೇ ಬದಲಾಯಿಸಿದೆ. 2015-16 ಹಣಕಾಸು ವರ್ಷದಲ್ಲಿ ಕಂಪನಿ 11,176 ಕೋಟಿ ರುಪಾಯಿಯಷ್ಟು ಆದಾಯ ಗಳಿಸಿದರೂ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.5.2ರಷ್ಟು ಇಳಿತವನ್ನು ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This wedding season, India’s most preferred watch brand Titan, has something for everyone. An elegant watch with a dashing dial and gracefully crafted metal perfection, makes for a perfect gift. Celebrate the bonds of matrimony with Titan.
Please Wait while comments are loading...