ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಕಾಂಜಾವಾಲಾ ಅಪಘಾತ: ಅಪಘಾತಕ್ಕೂ ಮುನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ಅಂಜಲಿ
ದೆಹಲಿ ಕಾಂಜಾವಾಲಾ ಅಪಘಾತದ ಬಗ್ಗೆ ಬಯಲಿಗೆಳೆದಷ್ಟು ವಿಚಾರಗಳು ಹೊರಬರುತ್ತಿವೆ. ಹೊಸ ವರ್ಷದ ದಿನದಂದು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ಸಿಂಗ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ಅಂಜಲಿ ಸಿಂಗ್‌ಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು 12 ಕಿ.ಮೀ ದೂರ ಎಳೆದೊಯ್ದಿದೆ. ಈ ಭೀಕರ ಘಟನೆ ಸಿಸಿಟಿವಿ ದೃರ್ಶಯದಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಹೊರಬಂದ ಹೊಸ ಸಿಸಿಟಿವಿ ಫೂಟೇಜ್‌ನಲ್ಲಿ ಸಾವನ್ನಪ್ಪಿದ ಯುವತಿ ಮತ್ತೋರ್ವ ಯುವತಿಯೊಂದಿಗೆ ಜಗಳವಾಡುತ್ತಿರುವುದು ಕಂಡುಬಂದಿದೆ.
20 ವರ್ಷದ ಅಂಜಲಿ ಸಿಂಗ್ ಅವರು ಶನಿವಾರ ಸಂಜೆ ಹೊಸ ವರ್ಷದ ಮುನ್ನಾದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ರೋಹಿಣಿಯ ಹೋಟೆಲ್‌ನ ಹೊರಗೆ ರೆಕಾರ್ಡ್ ಮಾಡಿದ ದೃಶ್ಯಾವಳಿಯಲ್ಲಿ ತನ್ನ ಸ್ನೇಹಿತೆ ನಿಧಿಯೊಂದಿಗೆ ಆಕೆ ಜಗಳವಾಡುತ್ತಿರುವುದನ್ನು ಕಾಣಬಹುದು. ಅವರು ಪರಸ್ಪರ ಎಲೆದಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವಳು ಸಾಯುವ ಕೇವಲ 15 ನಿಮಿಷಗಳ ಮೊದಲು ಈ ವಿಡಿಯೋ ಸೆರೆಯಾಗಿದೆ.
ಅವರ ಜೋರಾಗಿ ಜಗಳವಾಡಿದ ಕಾರಣ, ಹೋಟೆಲ್ ಸಿಬ್ಬಂದಿ ಅವರನ್ನು ಹೊರಹೋಗುವಂತೆ ಕೇಳಿದರು ಎಂದು ವರದಿಯಾಗಿದೆ. "ಅವರು ಜಗಳವಾಡುತ್ತಿದ್ದರು ಮತ್ತು ನಿಂದನೆ ಮಾಡುತ್ತಿದ್ದರು, ಅದಕ್ಕಾಗಿಯೇ ಮ್ಯಾನೇಜರ್ ಅವರನ್ನು ಹೋಗುವಂತೆ ಹೇಳಿದರು. ಹೀಗಾಗಿ ಅವರು ತಮ್ಮ ಸ್ಕೂಟಿಯಲ್ಲಿ ಹೊರಟರು" ಎಂದು ಪಾರ್ಟಿ ನಡೆದ ಓಯೋ ಹೋಟೆಲ್‌ನ ಉದ್ಯೋಗಿಯೊಬ್ಬರು ಹೇಳಿದರು. ಅಪಘಾತದ ನಂತರ ಹೋಟೆಲ್ ಮುಚ್ಚಲ್ಪಟ್ಟಿದೆ.

ಇತರ ವಿಡಿಯೊಗಳಲ್ಲಿ ಅಂಜಲಿ ಸ್ಕೂಟಿಯಲ್ಲಿ ನಿಧಿ ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಇಬ್ಬರು ಸ್ಥಳಗಳನ್ನು ಬದಲಾಯಿಸಿಕೊಂಡಿದ್ದಾರೆ. ನಿಧಿ ಬಳಿಕ ಅಂಜಲಿ ಸ್ಕೂಟಿ ಓಡಿಸಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐವರು ಜನರಿದ್ದ ಕಾರು ಕುಡಿದ ಅಮಲಿನಲ್ಲಿದ್ದ ಅಂಜಲಿಗೆ ಡಿಕ್ಕಿ ಹೊಡೆದಿದೆ. ಆಕೆಯ ಕಾಲು ಕಾರಿನ ಆಕ್ಸಲ್‌ನಲ್ಲಿ ಸಿಲುಕಿಕೊಂಡಿದೆ. ಅನೇಕ ಯು-ಟರ್ನ್‌ಗಳನ್ನು ತೆಗೆದುಕೊಂಡ ವಾಹನವು ಅವಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಎಳೆದಾಡಿದೆ.
ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಘಟನೆಯ ಬಗ್ಗೆ ಆಕೆ ಪೊಲೀಸರಿಗೆ ಮಾಹಿತಿಯನ್ನು ನೀಡಿಲ್ಲ. ವಿಚಾರಿಸಿದಾಗ ಆಕೆ ಗಾಬರಿಯಾದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮೂರನೇ ತಿರುವಿನಲ್ಲಿ, ದೇಹವು ಕಾರಿನಿಂದ ಸಡಿಲಗೊಂಡು ಬಿದ್ದಿದೆ. ಆಗ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಅಂಜಲಿಯ ದೇಹ ಬಟ್ಟೆ ಇಲ್ಲದೆ, ಚರ್ಮ ಸುಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಜಗಳವಾಡಿದ ಯುವತಿಗೂ ಈ ಅಪಘಾತಕ್ಕೂ ಏನಾದರೂ ಸಂಬಂಧವಿದಿಯಾ?ಹಲವಾರು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.
ಆಕೆಯ ಖಾಸಗಿ ಅಂಗಗಳಿಗೆ ಯಾವುದೇ ಗಾಯವಾಗಿಲ್ಲದ ಕಾರಣ ಶವಪರೀಕ್ಷೆಯು ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications