10, 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿಬಿಎಸ್ಇ ಹೊಸ ಯೋಜನೆ
ನವದೆಹಲಿ, ಜುಲೈ 05: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22ನೇ ಸಾಲಿನ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಶೇಷ ಮೌಲ್ಯಮಾಪನ ವ್ಯವಸ್ಥೆಯ ಕುರಿತು ಅಧಿಸೂಚನೆ ಹೊರಡಿಸಿದೆ.
ಎರಡೂ ತರಗತಿಗಳನ್ನು ಶೇ.50ರಷ್ಟು ಪಠ್ಯಕ್ರಮದ ಮಾದರಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ಮೊದಲ ಭಾಗದ ಪರೀಕ್ಷೆಗಳು ನಡೆಯಲಿವೆ ಎಂದು ಸಿಬಿಎಸ್ಇ ತಿಳಿಸಿದೆ. 2020-21ನೇ ಸಾಲಿನ ಸಿಬಿಎಸ್ಇ ಪರೀಕ್ಷೆಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2021-22ನೇ ಸಾಲಿನ ಪಠ್ಯಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ.
ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚಿನ ಒತ್ತು ಮತ್ತು ಆದ್ಯತೆಯನ್ನು ನೀಡಲಾಗಿದೆ. ಇದರ ಮಧ್ಯೆ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಗಳನ್ನು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಬಿಡುಗಡೆಗೊಳಿಸಿದ್ದು, ಈ ಕುರಿತು ಮಾಹಿತಿಯನ್ನು ಮುಂದೆ ಓದಿ.

ಸಿಬಿಎಸ್ಇ ಹೊರಡಿಸಿರುವ ಅಧಿಸೂಚನೆ ಪ್ರಮುಖ ಅಂಶಗಳು:
- 2021-22ರ ಶೈಕ್ಷಣಿಕ ಸಾಲಿನ ಪಠ್ಯಕ್ರಮವನ್ನು ವಿಷಯ ತಜ್ಞರಿಂದ ವ್ಯವಸ್ಥಿತ ವಿಧಾನದ ಮೂಲಕ ವಿಭಜಿಸಲಾಗುವುದು. ಎರಡು ಭಾಗಗಳಾಗಿ ವಿಂಗಡಿಸಲಾದ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅವಧಿಯ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
- 2022ರ ಶೈಕ್ಷಣಿಕ ಸಾಲಿನ ಪಠ್ಯಕ್ರಮದ ಬಗ್ಗೆ 2021ರ ಜುಲೈನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಎನ್‌ಸಿಇಆರ್‌ಟಿ ಮೂಲಕ ಶಾಲೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪಠ್ಯಕ್ರಮದ ಬಗ್ಗೆ ತಿಳಿಸಲಾಗುತ್ತದೆ.
- ಸಿಬಿಎಸ್‌ಇ ಘೋಷಿಸಲಿರುವ ಮಾರ್ಗಸೂಚಿಗಳು ಮತ್ತು ಮಾಡರೇಶನ್ ನೀತಿಯ ಪ್ರಕಾರ, ಆಂತರಿಕ ಮೌಲ್ಯಮಾಪನ ಅಥವಾ ಪ್ರಾಕ್ಟಿಕಲ್ ಅಥವಾ ಪ್ರಾಜೆಕ್ಟ್ ವರ್ಕ್ ಬಗ್ಗೆ ನ್ಯಾಯಯುತವಾಗಿ ಅಂಕಗಳ ನೀಡುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು.
ಸಿಬಿಎಸ್‌ಇ ಪಠ್ಯಕ್ರಮದ ವ್ಯವಹಾರದ ವಿವರಗಳು:
- ಶಾಲೆಗಳನ್ನು ತೆರೆಯುವುದಕ್ಕೆ ಪ್ರಾಧಿಕಾರ ಅನುಮತಿ ನೀಡುವವರೆಗೂ ದೂರ ಶಿಕ್ಷಣ ಕ್ರಮದಲ್ಲಿ ಬೋಧನೆ ಮುಂದುವರಿಸುವುದು
- 9 ಮತ್ತು 10 ನೇ ತರಗತಿಗಳಿಗೆ, ಆಂತರಿಕ ಮೌಲ್ಯಮಾಪನವು (ಅವಧಿ I ಮತ್ತು II ರ ವರ್ಷವಿಡೀ) ಮೂರು ನಿಮಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಪುಷ್ಟೀಕರಣ, ಪ್ರಾಯೋಗಿಕ ಕೆಲಸ, ಮಾತಗಾರಿಕೆ, ಆಲಿಸುವ ಚಟುವಟಿಕೆ ಹಾಗೂ ಯೋಜನಾ ವೈಖರಿಯನ್ನು ಒಳಗೊಂಡಿರುತ್ತದೆ.
- 11 ಮತ್ತು 12 ನೇ ತರಗತಿಗಳಿಗೆ, ಆಂತರಿಕ ಮೌಲ್ಯಮಾಪನವು (ಅವಧಿ I ಮತ್ತು II ರ ವರ್ಷವಿಡೀ) ವಿಷಯದ ಅಂತ್ಯ ಅಥವಾ ಘಟಕ ಪರೀಕ್ಷೆ, ಪರಿಶೋಧನಾ ಚಟುವಟಿಕೆ, ಪ್ರಾಯೋಗಿಕ, ಯೋಜನೆಗಳನ್ನು ಒಳಗೊಂಡಿರುತ್ತದೆ.
- ಎಲ್ಲಾ ಮೌಲ್ಯಮಾಪನಗಳಿಗೆ ವಿದ್ಯಾರ್ಥಿಗಳ ವಿವರವನ್ನು ರಚಿಸುವುದಕ್ಕಾಗಿ ಡಿಜಿಟಲ್ ರೂಪದಲ್ಲಿ ಶಾಲೆಗಳು ಸಾಕ್ಷ್ಯಗಳನ್ನು ಉಳಿಸಿಕೊಳ್ಳುತ್ತವೆ.
- ಸಿಬಿಎಸ್‌ಇ ಐಟಿ ವೇದಿಕೆಯಲ್ಲಿ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್‌ಲೋಡ್ ಮಾಡಲು ಶಾಲೆಗಳಿಗೆ ಅನುಕೂಲವಾಗಲಿದೆ.
More From
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications