• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಎಸ್‌ಇ ವಿದ್ಯಾರ್ಥಿಗಳ ಅಂಕ ಹಂಚಿಕೆಯ ಪ್ರಸ್ತಾವನೆ ನೀಡಿದ ಕೇಂದ್ರ ಸರ್ಕಾರ

|

ನವದೆಹಲಿ, ಜೂನ್ 26: ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಯಾವ ರೀತಿ ಅಂಕ ನೀಡಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ಪ್ರಸ್ತಾವನೆ ಇಟ್ಟಿದೆ.

ಕೇಂದ್ರ ಸರ್ಕಾರದ ಪ್ರಸ್ತಾವನೆ ಪ್ರಕಾರ ಮೂರಕ್ಕಿಂತ ಹೆಚ್ಚು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರೆ, ಆ ವಿದ್ಯಾರ್ಥಿಗಳ ಬೆಸ್ಟ್‌ ವಿಷಯಗಳ ಅಂಕಗಳನ್ನು ಪರಿಗಣಿಸಿ ಉಳಿದ ಪರೀಕ್ಷೆ ನಡೆಯದ ವಿಷಯಗಳಿಗೆ ಆ ಅಂಕಗಳನ್ನು ಹಂಚಲಾಗುತ್ತದೆ.

Breaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದು

ಒಂದೊಮ್ಮೆ ವಿದ್ಯಾರ್ಥಿಯು ಮೂರಕ್ಕಿಂತ ಕಡಿಮೆ ಪರೀಕ್ಷೆಯಲ್ಲಿ ಹಾಜರಾಗಿದ್ದರೆ ಅದರಲ್ಲಿ ಸರಾಸರಿ ಎರಡು ಅತ್ಯುತ್ತಮ ವಿಷಯಗಳ ಅಂಕಗಳನ್ನು ತೆಗೆದುಕೊಂಡು ಆ ಅಂಕಗಳನ್ನು ಉಳಿದ ವಿಷಯಗಳಿಗೆ ಹಂಚಲಾಗುತ್ತದೆ.

ದೆಹಲಿ ಸೇರಿದಂತೆ ಇನ್ನೂ ಕೆಲವೆಡೆ ಸಿಬಿಎಸ್‌ಇ ವಿದ್ಯಾರ್ಥಿಗಳು ಒಂದು ಅಥವಾ ಎರಡಕ್ಕಿಂತ ಕಡಿಮೆ ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾಗಿರುವುದಿದೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆ ಒಂದು , ಎರಡು ಪರೀಕ್ಷೆಗಳ ಅಂಕದ ಜೊತೆಗೆ ಇನ್ನುಳಿದಂತೆ ಅವರ ಹಿಂದಿನ ಪರೀಕ್ಷೆಗಳ ಒಟ್ಟಾರೆ ಅಂಕಗಳು, ಇಂಟರ್ನರ್ಲ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಅವರಿಗೆ ಸರಾಸರಿ ಅಂಕಗಳನ್ನು ನೀಡಲಾಗುತ್ತದೆ.

ಒಂದೊಮ್ಮೆ ವಿದ್ಯಾರ್ಥಿಗಳು ತಮ್ಮ ಅಂಕವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಇಷ್ಟಪಟ್ಟರೆ ಅದಕ್ಕೂ ಅವಕಾಶ ಮಾಡಿಕೊಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸುವ ಸಾಧ್ಯತೆ ಇದೆ.

English summary
The CBSE in its assessment scheme says that for the students of both class 10 and 12, who have completed all their examinations, their results would be declared based on their performance in the examinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X