CBSE Class 10, 12 Exam 2026: ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಮುಂದೂಡಿಕೆ: ಇಲ್ಲಿದೆ ದಿನಾಂಕಗಳ ವಿವರ
CBSE Board Exam 2026: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಗಳ ಪರೀಕ್ಷೆಯನ್ನು ಮುಂದೂಕೆ ಮಾಡಲಾಗಿದ್ದು, ದಿನಾಂಕಗಳನ್ನು ಮರು ನಿಗದಿಪಡಿಸಲಾಗಿದೆ. ಹಾಗಾದ್ರೆ ಯಾವಾಗಿನಿಂದ ಆರಂಭ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಡಳಿತಾತ್ಮಕ ಕಾರಣಗಳ ಹಿನ್ನೆಲೆ ಸಿಬಿಎಸ್ಸಿ 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕಗಳನ್ನು ಮುಂದೂಡಿಕೆ ಮಾಡಲಾಗಿದೆ. ಈ ಸಂಬಂಧ ಸಿಬಿಎಸ್‌ಇ ಎಲ್ಲಾ ಸಂಯೋಜಿತ ಶಾಲೆಗಳಿಗೆ ಅಧಿಕೃತ ಸೂಚನೆ ನೀಡಿದೆ. ಸಿಬಿಎಸ್‌ಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಮೊದಲು 10ನೇ ತರಗತಿ ಪರೀಕ್ಷೆಯನ್ನು 2026ರ ಮಾರ್ಚ್ 3ರಂದು ಪರೀಕ್ಷೆ ನಿಗದಿ ಮಾಡಲಾಗಿತ್ತು, ಇದೀಗ ಪರೀಕ್ಷೆಯನ್ನು ಮಾರ್ಚ್ 11ಕ್ಕೆ ಮುಂದೂಡಿಕೆ ಮಾಡಲಾಗಿದೆ. ಅಲ್ಲದೆ, ಮಾರ್ಚ್ 3ರಂದು ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆ ಏಪ್ರಿಲ್ 10ಕ್ಕೆ ಮರುನಿಗದಿ ಮಾಡಲಾಗಿದೆ.

ಪರೀಕ್ಷೆಯ ದಿನಾಂಕದ ಕುರಿತು ಯಾವುದೇ ಗೊಂದಲ ಅಥವಾ ವದಂತಿಗಳನ್ನು ತಪ್ಪಿಸಲು ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಕ್ಷಣ ತಿಳಿಸುವಂತೆ ಮಂಡಳಿಯು ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ದಿನಾಂಕ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ ಮಾಡಲಾಗುತ್ತಿದೆ. ಹೊಸ ದಿನಾಂಕಗಳು ವಿದ್ಯಾರ್ಥಿಗಳ ಪ್ರವೇಶ ಪತ್ರಗಳಲ್ಲಿಯೂ ಇರಲಿವೆ ಎಂದು ಮಾಹಿತಿ ನೀಡಿದೆ.
ಈ ಬಾರಿ ಸಿಬಿಎಸ್ಸಿಯ 10 ಮತ್ತು 12ನೇ ತರಗತಿ ಪರೀಕ್ಷೆ ಹಾಜರಾತಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅದರ ಆಧಾರದ ಮೇಲೆ ಪ್ರಮುಖ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಶೇಕಡ 75ರಷ್ಟು ಹಾಜರಾತಿ ಕಡ್ಡಾಯ ಆಗಿದೆ. ಗಂಭೀರ ವೈದ್ಯಕೀಯ ಪರಿಸ್ಥಿತಿ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮ ಅಥವಾ ತುರ್ತು ಪರಿಸ್ಥಿತಿಗಳಂತಹ ಕೆಲವು ಅಸಾಧಾರಣ ಪರಿಸ್ಥಿತಿ ಹಿನ್ನೆಲೆ ಶೇಕಡ 25ರಷ್ಟು ಹಾಜರಾತಿಯ ವಿನಾಯಿತಿ ನೀಡಿದೆ.
ಇನ್ನೂಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಡಾ.ಸಂಯಮ್ ಭಾರದ್ವಾಜ್ ಮಾತನಾಡಿ, ಪರೀಕ್ಷೆಗಳನ್ನು ಸುಗಮ ಮತ್ತು ಪಾರದರ್ಶಕವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ಶಾಲೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ನಿರ್ಧಾರಕ್ಕೆ ಸಹಕರಿಸುತ್ತಾರೆ ಎಂದು ಮಂಡಳಿ ಬಯಸುತ್ತದೆ. ಈ ಬದಲಾವಣೆಯು ವಿದ್ಯಾರ್ಥಿಗಳಿಗೆ ತಯಾರಿ ನಡೆಸಲು ಹೆಚ್ಚುವರಿ ಸಮಯವನ್ನು ನೀಡುತ್ತದೆ. ಒತ್ತಡ ಇಲ್ಲದೆ ಉತ್ತಮವಾಗಿ ತಯಾರಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications