ಸಿಬಿಎಸ್‌ಇ 12ನೇ ತರಗತಿ ಮರು ಪರೀಕ್ಷೆ ದಿನಾಂಕ ಪ್ರಕಟ
ಸಿಬಿಎಸ್‌ಇ 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆಯನ್ನು ಏಪ್ರಿಲ್ 25ಕ್ಕೆ ನಿಗದಿ ಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಸ್ವರೂಪ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಸಿಬಿಎಸ್‌ಇ ಪರೀಕ್ಷೆಯ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿರುವ ಕಾರಣ ಎರಡೂ ವಿಷಯಗಳ ಕುರಿತು ಮರು ಪರೀಕ್ಷೆ ಆಯೋಜಿಸುವುದಾಗಿ ಸಿಬಿಎಸ್‌ಇ ಮಂಡಳಿ ಘೋಷಿಸಿತ್ತು. ಇದೀಗ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ.
ಸಿಬಿಎಸ್‌ಇ 10ನೇ ತರಗತಿಯ ಗಣಿತ ಪ್ರಶ್ನೆ ಪತ್ರಿಕೆಯು ದೆಹಲಿ ಮತ್ತು ಹರಿಯಾಣದಲ್ಲಿ ಮಾತ್ರವೇ ಸೋರಿಕೆ ಆಗಿದ್ದ ಬಗ್ಗೆ ವರದಿ ಇರುವ ಕಾರಣ ಆ ಎರಡೇ ನಗರದಲ್ಲಿ ಮರು ಪರೀಕ್ಷೆಗೆ ಚಿಂತಿಸಲಾಗಿದ್ದು, ಇನ್ನು 15 ದಿನಗಳ ಒಳಗಾಗಿ ನಿರ್ಧಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಅಕಸ್ಮಾತ್ ಎಲ್ಲಾ ಕಡೆಯೂ ಮರು ಪರೀಕ್ಷೆ ನಡೆದರೆ ಅದು ಜುಲೈ ನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶಗೊಂಡಿದ್ದು, ಹಲವಾರು ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ.












Click it and Unblock the Notifications