ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ ಸಿಎಂಗೆ 'ಸಿಬಿಐ' ಉರುಳು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 31: ಕೇಂದ್ರ ತನಿಖಾ ದಳ (ಸಿಬಿಐ) ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ವಿರುದ್ಧ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಈ ಹಿಂದೆ ಇದೇ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ ವೀರಭದ್ರ ಸಿಂಗ್ ಗೆ ನಿರಾಸೆಯಾಗಿತ್ತು. ಇದೀಗ ಸಿಬಿಐ ಜಾರ್ಜ್ ಶೀಟ್ ಸಲ್ಲಿಸಿದ್ದು ಮುಖ್ಯಮಂತ್ರಿಗೆ ಕಂಟಕ ಎದುರಾಗಿದೆ.[ನ್ಯಾಯಮೂರ್ತಿ ಕರ್ಣನ್ ಗೆ ನಾಲ್ಕು ವಾರಗಳ ಗಡುವು ನೀಡಿದ ಸುಪ್ರೀಂ]

CBI files chargesheet against Himachal Pradesh CM, Virbhadra Singh, others

ಪ್ರಕರಣದ ಹಿನ್ನಲೆ:

2009 ಮತ್ತು 2012ರ ಮಧ್ಯೆ ವೀರಭದ್ರ ಸಿಂಗ್ ಕೇಂದ್ರ ಸಚಿವರಾಗಿದ್ದ ಸಂದರ್ಭ ಸುಮಾರು 6.03 ಕೋಟಿ ರೂಪಾಯಿ ಻಻ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಸಿಂಗ್ ಹಾಗೂ ಅವರ ಪತ್ನಿ ಪ್ರತಿಭಾ ಸಿಂಗ್ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಲೇವಾದೇವಿ ಕಾಯ್ದೆಯಡಿಯಲ್ಲಿ 2015ರಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.[ಕುಟುಕಿದ ಚಾನೆಲ್ ನಿಂದ ಕ್ಷಮೆಯಾಚನೆ, 9 ಜನರ ಮೇಲೆ ಕೇಸ್]

ನಂತರ ಸಿಂಗ್ ರನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಬಂಧಿಸುವುದಾಗಲೀ, ವಿಚಾರಣೆಗೆ ಒಳಪಡಿಸುವುದಾಗಲೀ ಅಥವಾ ಜಾರ್ಜ್ ಶೀಟ್ ಸಲ್ಲಿಕೆ ಮಾಡುವಂತಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿತ್ತು.

ಆದರೆ ಈ ತಡೆಯನ್ನು ತೆರವುಗೊಳಿಸಿದ್ದ ದೆಹಲಿ ಹೈ ಕೋರ್ಟ್ ಪ್ರಕರಣದ ತನಿಖೆಗೆ ಹಾದಿ ಸುಗಮಗೊಳಿಸಿತ್ತು. ಇದೀಗ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ್ದು ಸಿಂಗ್ ಕೊರಳಿನ ಸುತ್ತಾ ಕಾನೂನು ಕುಣಿಗೆ ಇನ್ನೂ ಬಿಗಿಯಾಗಿದೆ.

English summary
The Central Bureau of Investigation has filed a chargesheet naming Himachal Pradesh Chief Minister Virbhadra Singh. The chargesheeet also names Singh's wife among others. Earlier the Delhi High Court had refused to quash or stay the CBI probe against Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X