ಡಿಕೆ ರವಿ ಕೇಸ್ : ಚೆನ್ನೈ ಸಿಬಿಐ ತಂಡದಿಂದ ತನಿಖೆ
ಬೆಂಗಳೂರು, ಮಾ.23: ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಸಂಸ್ಥೆಗೆ ಕರ್ನಾಟಕ ಸರ್ಕಾರ ಸೋಮವಾರ ವಹಿಸಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಚೆನ್ನೈ ಘಟಕದಿಂದ ಈ ಪ್ರಕರಣದ ತನಿಖೆ ನಡೆಯಲಿದೆ.
ಚೆನ್ನೈ ಘಟಕದ ಸಿಬಿಐ ತಂಡದಲ್ಲಿ ಮೂರರಿಂದ ಐದು ಜನ ಸದಸ್ಯರಿರುವ ಸಾಧ್ಯತೆಯಿದೆ. ಅದರೆ, ಕರ್ನಾಟಕ ವಿಭಾಗದ ಯಾವುದೇ ಅಧಿಕಾರಿಗಳು ತನಿಖಾ ತಂಡದಲ್ಲಿರುವುದಿಲ್ಲ. ಕರ್ನಾಟಕ ಕೇಡರ್ ಗೆ ಸೇರಿದ ಇಬ್ಬರು ಅಧಿಕಾರಿಗಳಿದ್ದರೂ ಅವರನ್ನು ತನಿಖಾ ತಂಡಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಎಂಬ ಮಾಹಿತಿ ಒನ್ ಇಂಡಿಯಾಕ್ಕೆ ಲಭ್ಯವಾಗಿದೆ. [ರವಿ ಸಾವಿನ ತನಿಖೆ ಸಿಬಿಐಗೆ : ಸರ್ಕಾರದ ಅಧಿಕೃತ ಹೇಳಿಕೆ]
ಕೇಂದ್ರ ಗೃಹ ಸಚಿವಾಲಯದಿಂದ ಸಿಬಿಐ ಕೇಂದ್ರ ಕಚೇರಿಗೆ ಅಧಿಕೃತವಾಗಿ ನೋಟಿಫಿಕೇಷನ್ ಸಿಕ್ಕ ಕೂಡಲೇ ಚೆನ್ನೈನಿಂದ ಸಿಬಿಐ ತನಿಖಾ ತಂಡ ಬೆಂಗಳೂರಿಗೆ ಆಗಮಿಸಲಿದೆ. ಅಲ್ಲಿಂದ ತನಿಖೆ ಆರಂಭಗೊಳ್ಳಲಿದೆ.
ಸಿಬಿಐ ತಂಡದ ಮೊದಲ ಹೆಜ್ಜೆ:
* ಡಿಕೆ ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ತಂಡ ಇಲ್ಲಿ ತನಕ ನಡೆಸಿರುವ ತನಿಖೆಯ ವರದಿಯನ್ನು ಸಿಬಿಐ ತಂಡ ಮೊದಲಿಗೆ ಪಡೆದುಕೊಳ್ಳಲಿದೆ. [ಜನ ಸಾಮಾನ್ಯರು ಸಿಬಿಐಗೆ ದೂರು ನೀಡಬಹುದೇ?]
* ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಬಂದಿರುವ ಪ್ರಾಥಮಿಕ ವೈದ್ಯಕೀಯ ವರದಿಯನ್ನು ಪಡೆದುಕೊಳ್ಳಲಾಗುತ್ತದೆ.
* ನಂತರ ಎಫ್ ಎಸ್ ಎಲ್, ಆಟೋಪ್ಸಿ ಸೇರಿದಂತೆ ಸಂಪೂರ್ಣ ವೈದ್ಯಕೀಯ ವರದಿ ಸಿಬಿಐ ಕೈ ಸೇರಲಿದೆ.

* ವೈದ್ಯಕೀಯ ವರದಿಯ ಸತ್ಯಾಸತ್ಯತೆ ಬಗ್ಗೆ ಸಂಶಯ ಉಂಟಾದರೆ, ಮೃತ ದೇಹವನ್ನು ಸಮಾಧಿಯಿಂದ ಹೊರಕ್ಕೆ ತೆಗೆದು ಮತ್ತೊಮ್ಮೆ ಪರೀಕ್ಷೆ ನಡೆಸಬಹುದು.
* ಡಿಕೆ ರವಿಗೆ ವಿಷಪ್ರಾಶನ ಮಾಡಲಾಗಿದೆ. ರಾಸಾಯನಿಕಗಳನ್ನು ಪ್ರಯೋಗಿಸಲಾಗಿದೆ ಎಂಬ ಗಾಳಿಸುದ್ದಿಯತ್ತಲೂ ಸಿಬಿಐ ಗಮನ ಹರಿಸುವ ಸಾಧ್ಯತೆ ಹೆಚ್ಚಿದೆ.
* ಅಪಾರ್ಟ್ಮೆಂಟ್ ನ ಸಿಸಿಟಿವಿ ಹಾಗೂ ಘಟನೆ ನಡೆದ ಸ್ಥಳದ ವೀಕ್ಷಣೆ ಹಾಗೂ ವಿವರಣೆ ಪಡೆದುಕೊಳ್ಳಲಿದೆ. [ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲು]
272 ವಾಟ್ಸಪ್ ಸಂದೇಶಗಳು ತನಿಖೆಗೆ:
* ಡಿಕೆ ರವಿ ಮೃತಪಟ್ಟ ದಿನದಂದು ಬೆಳಗ್ಗೆ 11.22ಕ್ಕೆ ಮಾಡಿದ ಕರೆ, ಕೊನೆ ಸಂದೇಶ, ಕಾಲ್ ರೆಕಾರ್ಡ್ಸ್, ವಾಟ್ಸಪ್ ಸಂದೇಶದ ಮಾಹಿತಿ ಸೈಬರ್ ಸೆಲ್ ನಿಂದ ಪಡೆದುಕೊಳ್ಳಲಾಗುತ್ತದೆ. [ಸಿಐಡಿ ತನಿಖೆಯಲ್ಲಿ ಯಾರು ಟಾರ್ಗೆಟ್]
* ಡಿಕೆ ರವಿ ಮೊಬೈಲ್ ಫೋನಿನಿಂದ ವಾಟ್ಸಪ್ ಮೆಸೆಂಜರ್ ಮೂಲಕ ಕಳಿಸಲಾದ 272 ಸಂದೇಶಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ.
* ಡಿಕೆ ರವಿ ಅವರ ಎರಡು ಮೊಬೈಲ್ ಫೋನಿನ ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿತ ಕರೆಗಳ ವಿವರ ಪಡೆಯಲಾಗುತ್ತದೆ.
ಕಂಪನಿಗಳಿಗೆ ನೋಟಿಸ್:
ಡಿಕೆ ರವಿ ಸಾಯುವುದಕ್ಕೂ ಮುನ್ನ ದಾಳಿ ನಡೆಸಿದ ಕಂಪನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಗತ್ಯ ಬಿದ್ದರೆ ಕಂಪನಿಗಳ ವಿಚಾರಣೆಗಾಗ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. [ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?]
ಹಲವಾರು ರಾಜಕಾರಣಿಗಳಿಗೆ ಸೇರಿದ ರಿಯಲ್ ಎಸ್ಟೇಟ್ ಕಂಪನಿಗಳು ಸಿಬಿಐ ತನಿಖೆಗೆ ಒಳಪಡಿಸಲಾಗುತ್ತದೆ.ಡಿಕೆ ರವಿಗೆ ಬಂದಿದೆ ಎನ್ನಲಾದ ಬೆದರಿಕೆ ಕರೆಗಳು, ಕಚೇರಿ ಸಿಸಿಟಿವಿ ದೃಶ್ಯಗಳು, ಅಪಾರ್ಟ್ಮೆಂಟ್ ಸಿಬ್ಬಂದಿ ಸೇರಿದಂತೆ ಎಲ್ಲಾ ಕೋನಗಳಿಂದ ತನಿಖೆ ಕೈಗೊಳ್ಳಲಿದ್ದಾರೆ.












Click it and Unblock the Notifications