ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದ ಆರೋಪ : 5 ಸೇನಾಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

|
Google Oneindia Kannada News

ನವದೆಹಲಿ, ಜನವರಿ 02: ಸುಮಾರು 18 ಲಕ್ಷ ರು ಮೌಲ್ಯದ ಆಹಾರ ಸಾಮಾಗ್ರಿ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಲ್ ಸೇರಿದಂತೆ 5 ಸೇನಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ತನಿಖೆ ಆರಂಭಿಸಿದೆ.

'ಸೊಹ್ರಾಬುದ್ದಿನ್ ಎನ್ ಕೌಂಟರ್ ಆಗದಿದ್ದರೆ ಮೋದಿ ಹತ್ಯೆಯಾಗುತ್ತಿತ್ತು' 'ಸೊಹ್ರಾಬುದ್ದಿನ್ ಎನ್ ಕೌಂಟರ್ ಆಗದಿದ್ದರೆ ಮೋದಿ ಹತ್ಯೆಯಾಗುತ್ತಿತ್ತು'

ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಸೇನಾ ತುಕಡಿಗಾಗಿ ಆಹಾರ ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಐವರು ಅಧಿಕಾರಿಗಳು ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ.

10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು 10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು

ಕರ್ನಲ್ ರಮಣ್ ದಹ್ಡಾ, ಲೆಫ್ಟಿನಂಟ್ ಕರ್ನಲ್ ಮಹೇಂದ್ರ ಕುಮಾರ್, ಸುಬೇದಾರ್ ದೇವೇಂದ್ರ ಕುಮಾರ್, ಹವಾಲ್ದಾರ್ ಅಭಯ್ ಸಿಂಗ್, ಸುಬೇದಾರ್ ಸಾಹುರನ್ ಸಾಹು ಹಾಗೂ ಪೂರೈಕೆದಾರ ಕೆಕೆ ಯಾಂಗ್ಫೋ ಅವರ ವಿರುದ್ಧ ಕ್ರಿಮಿನಲ್ ಸಂಚು ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ.

CBI books 5 Army officers for corruption

ಆಹಾರ ಪೂರೈಕೆದಾರ ಯಂಗ್ಫೋ ಅವರು 2015 ಹಾಗೂ 2017ರಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿದ್ದ ಸೇನಾ ತುಕಡಿಗಳಿಗೆ ಪಡಿತರ ಪೂರೈಕೆ ಮಾಡುವಲ್ಲಿ ಅವ್ಯವಹಾರ ನಡೆದಿದೆ. ಸುಬೇದಾರ್ ದೇವೇಂದ್ರ ಕುಮಾರ್ 2.04 ಲಕ್ಷ ರು, ಹವಾಲ್ದರ್ ಅಭಯ್ ಕುಮಾರ್ 98,000 ಹಾಗೂ ಸುಬೇದಾರ್ ಸಾಹುರನ್ ಸಾಹು 7.65 ಲಕ್ಷ ರು ಲಂಚ ಪಡೆದುಕೊಂಡಿದ್ದಾರೆ.

ಇದೇ ರೀತಿ ನಾಗಾಲ್ಯಾಂಡ್ ನಲ್ಲಿ ಪಡಿತರ ಅವ್ಯವಹಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಲೆಫ್ಟಿನಂಟ್ ಕರ್ನಲ್ ಅಮಿತ್ ಶರ್ಮ, ಲೆಫ್ಟಿನಂಟ್ ಕರ್ನಲ್ ಸುತಿಕ್ಷನ್ ರಾಣಾ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಇವರ ವಿರುದ್ದಹ್ 82 ಲಕ್ಷ ರು ಲಂಚ ಪಡೆದಿರುವ ಆರೋಪವಿದೆ. (ಪಿಟಿಐ)

English summary
The CBI has booked five Army personnel, including a colonel, for allegedly receiving bribes worth Rs 18 lakh from a supplier of rations for troops posted in Assam and Arunachal Pradesh, officials said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X