Breaking; ಸಿಬಿಐನಿಂದ ವಿಡಿಯೊಕಾನ್ ಸಿಇಒ ವೇಣುಗೋಪಾಲ್ ಧೂತ್ ಬಂಧನ
ನವದೆಹಲಿ, ಡಿಸೆಂಬರ್ 26; ವಿಡಿಯೊಕಾನ್ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ, ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತೊಬ್ಬರನ್ನು ಬಂಧಿಸಿದೆ. ಶುಕ್ರವಾರ ರಾತ್ರಿ ಚಂದಾ ಕೊಚ್ಚರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚರ್ ಬಂಧಿಸಲಾಗಿತ್ತು.
ಸೋಮವಾರ ಸಿಬಿಐ ವಿಡಿಯೊಕಾನ್ ಸಿಇಒ ವೇಣುಗೋಪಾಲ್ ಧೂತ್ ಬಂಧಿಸಿದೆ. ಶುಕ್ರವಾರ ರಾತ್ರಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್, ಆಕೆಯ ಪತಿ ದೀಪಕ್ ಕೊಚ್ಚರ್ ಬಂಧಿಸಿತ್ತು.
ವಿಡಿಯೊಕಾನ್ ಸಂಸ್ಥೆಗೆ ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಮಂಜೂರು ಮಾಡಿರುವ, ವಂಚನೆ ನಡೆದಿರುವ ಬಗ್ಗೆ 2019ರಲ್ಲಿ ಸಿಬಿಐ ಎಫ್‌ಐಆರ್ ದಾಖಲು ಮಾಡಿಕೊಂಡಿದೆ. ಈ ಪ್ರಕರಣದ ತನಿಖೆಯ ಭಾಗವಾಗಿವೇ ಮೂವರ ಬಂಧನವಾಗಿದೆ.

ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ವಿಡಿಯೊಕಾನ್ ಸಂಸ್ಥೆಗೆ ಅಕ್ರಮವಾಗಿ ಸಾಲ ಮಂಜೂರಾತಿ ಮಾಡಿದ್ದಾರೆ. ಇದಕ್ಕೆ ಆಕೆಯ ಪತಿ ದೀಪಕ್ ಕೊಚ್ಚರ್ ಸಹ ಸಹಕಾರ ನೀಡಿದ್ದಾರೆ ಎಂಬುದು ಆರೋಪವಾಗಿದೆ.
ಇದೇ ಪ್ರಕರಣದಲ್ಲಿ ಈಗ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್, ಆಕೆಯ ಪತಿ ದೀಪಕ್ ಕೊಚ್ಚರ್, ವೇಣುಗೋಪಾಲ್ ಧೂತ್ ಬಂಧಿಸಲಾಗಿದೆ.
ಐಸಿಐಸಿಐ ಬ್ಯಾಂಕ್‌ನಿಂದ 3 ಸಾವಿರ ಕೋಟಿ ರೂ. ಸಾಲ ಪಡೆದ ಬಳಿಕ ವೇಣುಗೋಪಾಲ್ ದೂತ್ ನ್ಯೂಪವರ್ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಬಳಿಕ ಆ ಕಂಪನಿಯನ್ನು ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಖರೀದಿ ಮಾಡಿದ್ದಾರೆ ಎಂಬುದು ಆರೋಪ.
ವಿಡಿಯೊಕಾನ್ ಸಂಸ್ಥೆಗೆ ನೀಡಿದ 3 ಸಾವಿರ ಕೋಟಿ ರೂ.ಗಳ ಸಾಲದಲ್ಲಿ ಶೇ 80ರಷ್ಟು ಮರುಪಾವತಿಯಾಗಿಲ್ಲ. 2017ರಲ್ಲಿ ಈ ಸಾಲವನ್ನು ಸುಸ್ತಿಸಾಲ ಎಂದು ಘೋಷಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವ ಆರೋಪವೂ ಇದ್ದು, ಇಡಿ ಈ ಕುರಿತು ತನಿಖೆ ನಡೆಸುತ್ತಿದೆ.
ಇಡಿ ದೀಪಕ್ ಕೊಚ್ಚರ್ ಬಂಧಿಸಿ ವಿಚಾರಣೆ ನಡೆಸಿತ್ತು. ಬಳಿಕ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಚಂದಾ ಕೊಚ್ಚರ್‌ಗೆ ಸೇರಿದ ಸುಮಾರು 78 ಕೋಟಿ ರೂ. ಆಸ್ತಿಯನ್ನು ಸಹ ಇಡಿ ಜಪ್ತಿ ಮಾಡಿದೆ.












Click it and Unblock the Notifications