Cauvery: ತಮಿಳುನಾಡಿಗೆ ಬಿಡುವ 12,000 ಕ್ಯುಸೆಕ್‌ ನೀರಿನ ಪ್ರಮಾಣ 6,000 ಕ್ಯುಸೆಕ್‌ಗೆ ಇಳಿಸಲು ಕರ್ನಾಟಕ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (CWMA) 12,000 ಕ್ಯುಸೆಕ್ ನೀರು ಬಿಡುಗಡೆ ನಿರ್ಧಾರ ಎತ್ತಿ ಹಿಡಿದಿತ್ತು. ಇದೀಗ ಕರ್ನಾಟಕ ಈ ನೀರು ಬಿಡುವ ಪ್ರಮಾಣವನ್ನು ಕಡಿಮೆ ಮಾಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದೆ. ಕೆಆರ್ ಎಸ್ ಸೇರಿದಂತೆ ಕರ್ನಾಟಕದ ನಾಲ್ಕು ಜಲಾಶಯಗಳ ಮಾಹಿತಿ ಹಂಚಿಕೊಂಡಿದೆ.

ಕರ್ನಾಟಕವು ತಮಿಳನಾಡಿಗೆ ನಿತ್ಯ 12000 ಕ್ಯುಸೆಕ್ ನೀರನ್ನು ಆಗಸ್ಟ್ 12ರಿಂದ ನಂತರದ ಹದಿನೈದು ದಿನಗಳವರೆಗೆ ಬಿಡುವಂತೆ ಪ್ರಾಧಿಕಾರ ಆದೇಶಿಸಿತ್ತು. ಆಗಸ್ಟ್ 11ರಂದು ನಡೆದ ನೀರು ಬಿಡುಗ ಸಭೆಯ ಅಂಶಗಳನ್ನು ಪುನರ್ ಪರಿಶೀಲಿಸಬೇಕು. ಕರ್ನಾಟಕದಲ್ಲಿ ನೀರಿನ ಸಂಗ್ರಹ ಏರಿಳಿತದಿಂದ ಕೂಡಿದೆ. ತಕ್ಷಣವೇ ನೀರು ಬಿಡುವ ಪ್ರಮಾನವನ್ನು 12,000 ಕ್ಯುಸೆಕ್‌ನಿಂದ 6000ಕ್ಕೆ ಇಳಿಸಬೇಕು ಎಂದು ಕರ್ನಾಟಕ ಒತ್ತಾಯಿಸಿದೆ.

Cauvery Water Row

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ (ಜಲಸಂಪನ್ಮೂಲ) ಗೌರವ್ ಗುಪ್ತಾ ಅವರು ಮಂಗಳವಾರ ಕಾವೇರಿ ನೀರು ನಿರ್ವಹಣಾ ಸಮಿತಿಗೆ ತುರ್ತು ಪ್ರಾತಿನಿಧ್ಯ ನೀಡಿ ನೀರು ಬಿಡುಗಡೆ ನೀರ್ಣಯ ಪರಿಶೀಲಿಸುವಂತೆ ಕೋರಿದ್ದಾರೆ. ಕಳೆದ ಸೋಮವಾರ ಸುಪ್ರೀಂ ಕೋರ್ಟ್‌ ಈ ಬಗ್ಗೆ ಕರ್ನಾಟಕಕ್ಕೆ ಸೂಚನೆ ನೀಡಿದ ಬೆನ್ನಲ್ಲೆ ಕರ್ನಾಟಕ ಪ್ರಾಧಿಕಾರ, ಸಮಿತಿ, ಸಂಬಂಧಿಸಿದ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಿದೆ.

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ, ಅಂಕಿ ಅಂಶ

ಆಗಸ್ಟ್ 18 ರಂದು ಬೆಳಗ್ಗೆ 8 ಗಂಟೆ ಹೊತ್ತಿಗಿನ ಮಾಹಿತಿ ಪ್ರಕಾರ, ರಾಜ್ಯದ ಬಿಳಿಗುಂಡ್ಲುವಿನಲ್ಲಿ ನೀರಿನ ಸಂಗ್ರಹವು 1,55,250 ಕ್ಯೂಸೆಕ್ (13.414 ಟಿಎಂಸಿಎಫ್‌ಟಿ) ಇದೆ. ಆದೇಶದಂತೆ 1,24,500 ಕ್ಯೂಸೆಕ್ (10.757 ಟಿಎಂಸಿಎಫ್‌ಟಿ) ಗಿಂತ ಹೆಚ್ಚು ಬಿಡುವಂತೆ ನಿರ್ದೇಶಿಸಲಾಗಿದೆ ಎಂದು ಕರ್ನಾಟಕ ವಾಸ್ತವ ನೀರಿನ ಅಂಕಿ ಸಂಖ್ಯೆ ನೀಡಿದೆ.

ಮುಂಗಾರು ಋತು ಮುಗಿದಿಲ್ಲ, ತಮಿಳುನಾಡು ಕಾಯಬೇಕು

ಕಾವೇರಿ ಸಮಿತಿ, ಪ್ರಾಧಿಕಾರವು ಮುಂದಿನ ಸೆಪ್ಟಂಬರ್, ಅಕ್ಟೋಬರ್ ಅಂತ್ಯದವರೆಗೆ ಕಾಯದೇ ಈಗಲೇ ತಮ್ಮ ಪಾಲಿನ ನೀರು ಬಿಡುವಂತೆ ತಿಳಿಸಿದ್ದು, ಇದೊಂದು ಆತುರದ ನಿರ್ಧಾರವಾಗಿದೆ. ಮಾಸಿಕ ಮಳೆ ಪ್ರಮಾಣ, ಬರಗಾಲ ದಿಂದ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದೆ. ಹೀಗಿರುವಾಗ ಈಗಲೇ ನೀರು ಬಿಡುವಂತೆ ಕೇಳಿರುವುದರಿಂದ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂದು ರಾಜ್ಯದ ಪರ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?

ಕಾವೇರಿ ನೀರಿಗೆ ಸಂಬಂಧಿಸಿದಂತೆ ಕರ್ನಾಟಕದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ 77.907 ಟಿಎಂಸಿಎಫ್‌ಟಿ ನೀರು ಅಷ್ಟೇ ಇದೆ. ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಇದೇ ಅವಧಿಯಲ್ಲಿ 52.483 ಟಿಎಂಸಿಎಫ್‌ಟಿ ನೀರಿದೆ. ಮುಂಗಾರು ಆರಂಭ ಜೂನ್ 1ರಲ್ಲಿ ಕರ್ನಾಟಕವು 23.663 ಟಿಎಂಸಿಎಫ್‌ಟಿ ನೀರಿತ್ತು. ಆಗ ತಮಿಳುನಾಡು 47.850 ಟಿಎಂಸಿಎಫ್‌ಟಿ ನೀರು ಹೊಂದಿತ್ತು. ಆಗಸ್ಟ್ ವರೆಗೆ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದು ವಾಡಿಕೆ ನೀರು ಸಂಗ್ರಹದ ಶೇ. 47.68ರಷ್ಟು ಕಡಿಮೆ ಎಂದು ಕರ್ನಾಟಕ ವಿವರಿಸಿದೆ.

ನೀರು ಬಿಡಲು ನಿರೀಕ್ಷಿತ ಒಳಹರಿವು ಇಲ್ಲ!

ಮಳೆ ಕಡಿಮೆ ಆಗಿದ್ದರಿಂದ ಜಲಾಶಯಗಳಲ್ಲಿ ಒಳಹರಿವು ಕುಸಿದಿದೆ. ಬಿಳಿಗುಂಡ್ಲುವಿನಲ್ಲಿ 12,000 ಕ್ಯುಸೆಕ್ ನೀರು ಬಿಡಲು ಒಳಹರಿವು ಸುಮಾರು 15,000 ಕ್ಯುಸೆಕ್ ಇರಬೇಕು. ಸದ್ಯ ಅಷ್ಟಿಲ್ಲ, ಹೀಗಾಗಿ ಅಷ್ಟು ನೀರು ಬಿಡಲು ಸಮಸ್ಯೆ ಆಗುತ್ತಿಲ್ಲ. ಆದ್ದರಿಂದ ಪರಿಸ್ಥಿತಿ ಅರ್ಥ ಮಾಡಿಕೊಂಡು ನೀರು ಪ್ರಮಾಣ ಕಡಿಮೆ ಮಾಡಬೇಕು ಎಂದು ಕರ್ನಾಟಕ ಮನವಿ ಮಾಡಿದೆ. ಈ ಕುರಿತು ಪ್ರಾಧಿಕಾರ ಮನವಿಗೆ ಸ್ಪಂದಿಸುತ್ತಾ, ಇಲ್ಲವಾ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+