ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ

Posted By:
Subscribe to Oneindia Kannada

ಬೆಂಗಳೂರು, ಸೆ. 26: ಕರ್ನಾಟಕದಲ್ಲಿರುವ ಕಾವೇರಿ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಲಾಗುವುದು ಎಂದು ಕರ್ನಾಟಕ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.

ಸೆ. 21 ರಿಂದ 27ರ ತನಕ ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ ಕಾವೇರಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಅರ್ಜಿ ಹಾಕಿದೆ. [ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]

ಕುಡಿಯುವ ನೀರಿನ ಅಗತ್ಯ : ರಾಜ್ಯದ ಕಾವೇರಿ ಜಲಾಶಯಗಳಲ್ಲಿನ ನೀರು ಮುಂದಿನ ವರ್ಷ ಜೂನ್ ತಿಂಗಳವರೆಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯವಿದೆ. ನೀರಿನ ಬರ ಎದುರಾಗಿರುವುದರಿಂದ ನೀರು ಬಿಡುಗಡೆಯ ಆದೇಶದಿಂದ ಮುಕ್ತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಕೋರಲಿದೆ. ಇದರಿಂದ ಸಂವಿಧಾನ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ. ಒಟ್ಟಾರೆ, ಬಿಕ್ಕಟ್ಟು ನಡೆದು ಬಂದ ಹಾದಿಯ ಹಿನ್ನೋಟ ಇಲ್ಲಿದೆ: [ಕುಡಿಯುವುದಕ್ಕೆ ಮಾತ್ರ ಕಾವೇರಿ: ನಿರ್ಣಯದ ಪೂರ್ಣ ಪಾಠ]

Cauvery dispute: Path to a Constitutional crisis

* 1892 ಹಾಗೂ 1924: ನೀರು ಹಂಚಿಕೆ ವಿಷಯವಾಗಿ ಎರಡು ಒಪ್ಪಂದಗಳು ಉಭಯ ರಾಜ್ಯಗಳ ನಡುವೆ ಆಗಿದೆ.

* 1974: ಈ ಹಿಂದಿನ ಒಪ್ಪಂದದ ಅವಧಿ ಮುಕ್ತಾಯ. ಕರ್ನಾಟಕದಿಂದ ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಪ್ರದೇಶವೂ ಹೆಚ್ಚಳ.

* 1970 ರಿಂದ 1980: ವಸ್ತುಸ್ಥಿತಿ ಪರಿಶೀಲನಾ ಸಮಿತಿ ಸ್ಥಾಪನೆ. ತಮಿಳುನಾಡಿನಲ್ಲಿ 1,440,000 ಎಕರೆಯಿಂದ 2,580,000 ಎಕರೆ ಪ್ರದೇಶ ಇದ್ದರೆ, ಕರ್ನಾಟಕದಲ್ಲಿ 6,80,000 ಎಕರೆ ಇದೆ ಎಂದು ವರದಿ. ತಮಿಳುನಾಡು ಹೆಚ್ಚಿನ ಪಾಲು ಸಹಜವಾಗಿ ಕೇಳಲು ಆರಂಭಿಸಿತು.[ಒಂದು 'ಟಿ.ಎಂ.ಸಿ' ನೀರಿನ ಪ್ರಮಾಣ ಎಂದರೆ ಎಷ್ಟಾಗುತ್ತೆ?]

* 1990 : ಉಭಯ ರಾಜ್ಯಗಳು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸ್ಥಿತಿ ಉಂಟಾಯಿತು. ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ಪ್ರಾಧಿಕಾರ(CWDT) ಕೇಂದ್ರಕ್ಕೆ ನೀಡಿದ ನಿರ್ದೇಶನ ಉಭಯ ರಾಜ್ಯಗಳಿಗೂ ಸಮ್ಮತವಾಗಲಿಲ್ಲ. [ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!]

* 1991: CWDT ಮಧ್ಯಂತರ ಆದೇಶ ಹೊರಡಿಸಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಎದುರಾಗಿ ಅನೇಕ ರೈತರ ಸಾವಿಗೂ ಕಾರಣವಾಯಿತು. ಇದೆಲ್ಲ ಕಾನೂನಿನ ಲೆಕ್ಕಕ್ಕೆ ಸಿಗಲೇ ಇಲ್ಲ.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

Cauvery dispute: Path to a Constitutional crisis a Timeline

* 1995: ಸುಪ್ರೀಂಕೋರ್ಟಿಗೆ ಮತ್ತೆ ತಕರಾರು ಅರ್ಜಿ ಹಾಕಿದ ತಮಿಳುನಾಡು. ಪ್ರಾಧಿಕಾರವನ್ನು ಕೇಳುವಂತೆ ತಮಿಳುನಾಡಿಗೆ ಸುಪ್ರೀಂಕೋರ್ಟಿನಿಂದ ನಿರ್ದೇಶನ. ಅಂದಿನ ಪ್ರಧಾನಿ ನರಸಿಂಹ ರಾವ್ ಅವರ ಮಧ್ಯ ಪ್ರವೇಶಕ್ಕೆ ಸೂಚನೆ. ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಹರಿಸುವಂತೆ ಪ್ರಧಾನಿಯಿಂದ ಕರ್ನಾಟಕಕ್ಕೆ ಸೂಚನೆ. ಆದರೆ, ಮಧ್ಯಂತರ ಆದೇಶ ತಪ್ಪಾಗಿದೆ ಎಂದು ಕರ್ನಾಟಕದ ಪ್ರತಿಕ್ರಿಯೆ.[1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ: ಎಚ್ಡಿಡಿ]

* 1998: ಕಾವೇರಿ ನದಿ ನೀರು ಪ್ರಾಧಿಕಾರ ರಚನೆ, CWDT ಮಧ್ಯಂತರ ಆದೇಶ ಪಾಲಿಸಲು ಬೇಕಾದ ಕ್ರಮ ಜರುಗಿಸಲು ನ್ಯಾಯಾಲಯದಿಂದ ಸೂಚನೆ.

* 2002: ತಮಿಳುನಾಡಿಗೆ 0.8 ಟಿಎಂಸಿ ಅಡಿ ನೀರು ಹರಿಸುವಂತೆ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಸೂಚನೆ. ಕರ್ನಾಟಕದಿಂದ ನಿರಾಕರಣೆ. ಪ್ರಕರಣ ಮತ್ತೆ ಸುಪ್ರೀಂಕೋರ್ಟ್ ಅಂಗಳಕ್ಕೆ ನಂತರ ಆದೇಶ ಪಾಲಿಸಿದ ಅಂದಿನ ಸಿಎಂ ಎಸ್ ಎಂ ಕೃಷ್ಣ.

* 2005 : ನೀರು ಹಂಚಿಕೆ ಫಾರ್ಮ್ಯೂಲಾ ಅಳವಡಿಸಲು ನಿರಾಕರಿಸಿದ ಕರ್ನಾಟಕ. ಆರು ಸುತ್ತಿನ ಮಾತುಕತೆ ಉಭಯ ರಾಜ್ಯಗಳ ರೈತರು ಕೂಡಾ ಸಭೆಯಲ್ಲಿ ಭಾಗಿ.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]

* 2007: CWDT ಯಿಂದ ಅಂತಿಮ ಆದೇಶ ಪ್ರಕಟಣೆ. 740 ಟಿಎಂಸಿ ಅಡಿ ನೀರಿನಲ್ಲಿ ತಮಿಳುನಾಡಿಗೆ 419 ಟಿಎಂಸಿ ಅಡಿ ಹಾಗೂ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು, ಕೇರಳಕ್ಕೆ 30 ಟಿಎಂಸಿ ಅಡಿ ಹಾಗೂ ಪುದುಚೇರಿಗೆ 7 ಟಿಎಂಸಿ ಅಡಿ ನೀರು ಎಂದು ಇತ್ಯರ್ಥವಾಯಿತು. ಆದೇಶದ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿದವು.

Cauvery dispute: Path to a Constitutional crisis a Timeline

* 2012: 9,000ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್. ಪ್ರಧಾನಿ ಆದೇಶ ಪಾಲಿಸದ ಕರ್ನಾಟಕಕ್ಕೆ ಸುಪ್ರೀಂಕೋರ್ಟಿನಿಂದ ಛೀಮಾರಿ.[ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ]

* 2013: CWDT ಅಂತಿಮ ಆದೇಶದ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರ. ಕಾವೇರಿ ನಿರ್ವಹಣಾ ಸಮಿತಿ ಸ್ಥಾಪನೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ ತಮಿಳುನಾಡು. 2,480 ಕೋಟಿ ರು ನಷ್ಟ ಪರಿಹಾರ ಕೋರಿದ ತಮಿಳುನಾಡು.

* ಸೆಪ್ಟೆಂಬರ್ 05, 2016: ಹತ್ತು ದಿನದ ಮಟ್ಟಿಗೆ ತಮಿಳುನಾಡಿಗೆ 15,000 ಕ್ಯೂಸೆಕ್ಸ್ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ ಸುಪ್ರೀಂಕೋರ್ಟ್. ಕರ್ನಾಟಕದಲ್ಲಿ ಪ್ರತಿಭಟನೆ, ಹಿಂಸಾಚಾರ, ಪರಿಸ್ಥಿತಿ ಉದ್ವಿಗ್ನ.

* ಸೆಪ್ಟೆಂಬರ್ 12, 2016: ಸುಪ್ರೀಂ ಆದೇಶ ಮಾರ್ಪಾಟು ಮಾಡುವಂತೆ ಅರ್ಜಿ, 12,000 ಕ್ಯೂಸೆಕ್ಸ್ ಹರಿಸುವಂತೆ ಬದಲಿ ಆದೇಶ. ಕರ್ನಾಟಕದಲ್ಲಿ ಮುಂದುವರೆದ ಪ್ರತಿಭಟನೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

* ಸೆಪ್ಟೆಂಬರ್ 19, 2016: ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರನ್ ನೇತೃತ್ವದಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ. ತಮಿಳುನಾಡಿಗೆ 3,000 ಕ್ಯೂಸೆಕ್ಸ್ ಹರಿಸುವಂತೆ ಮೇಲುಸ್ತುವಾರಿ ಸಮಿತಿ ಆದೇಶ.

Cauvery dispute: Path to a Constitutional crisis a Timeline

* ಸೆಪ್ಟೆಂಬರ್ 20, 2016: ಏಳು ದಿನದ ಮಟ್ಟಿಗೆ 6,000 ಕ್ಯೂಸೆಕ್ಸ್ ಹರಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಉಭಯ ರಾಜ್ಯಗಳಿಂದ ಮತ್ತೆ ಅರ್ಜಿ.[ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]

* ಸೆಪ್ಟೆಂಬರ್ 23, 2016: ಕರ್ನಾಟಕದ ಶಾಸಕಾಂಗ ಸಭೆ, ವಿಶೇಷ ಅಧಿವೇಶನದಲ್ಲಿ ಕಾವೇರಿ ನೀರು ಕುಡಿಯುವುದಕ್ಕೆ ಮಾತ್ರ ಎಂಬ ನಿರ್ಣಯ ಕೈಗೊಳ್ಳಲಾಯಿತು. ಸುಪ್ರೀಂಕೋರ್ಟಿನಲ್ಲಿ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ ತಮಿಳುನಾಡು.

* ಸೆಪ್ಟೆಂಬರ್ 27, 2016: ಸೆ.20ರ ಆದೇಶ ಮರು ಪರಿಶೀಲನೆ ಮಾಡುವಂತೆ ಅರ್ಜಿ ಸಲ್ಲಿಸಿದ ಕರ್ನಾಟಕ, ಕರ್ನಾಟಕ ಸರ್ಕಾರ vs ಸುಪ್ರೀಂಕೋರ್ಟ್ ನಡುವೆ, ಶಾಸಕಾಂಗ vs ನ್ಯಾಯಾಂಗ ನಡುವಿನ ಸಮರಕ್ಕೆ ವೇದಿಕೆ ಸಜ್ಜು.
* ತಮಿಳುನಾಡಿಗೆ ಸೆ.27ರಿಂದ ಸೆ.30ರ ತನಕ 3 ದಿನ ಸೇರಿದಂತೆ 18 ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While Karnataka has told the Supreme Court that it can't release Cauvery water to Tamil Nadu till December due to shortage, here is a look at the timeline of the whole issue
Please Wait while comments are loading...