ಮುಂದಿನ ವಿಚಾರಣೆ ತನಕ ನೀರು ಬಿಡಬೇಕು :ಸುಪ್ರೀಂ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 18: ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿದ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಸುಪ್ರೀಂಕೋರ್ಟಿನ ತ್ರಿಸದಸ್ಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಮುಂದಿನ ಆದೇಶದ ತನಕ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿತು.

* ಮೇಲ್ಮನವಿ ಅರ್ಜಿ ವಿಚಾರಣೆ ಅಕ್ಟೋಬರ್ 19ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ ತ್ರಿಸದಸ್ಯ ಪೀಠ, ಮುಂದಿನ ಆದೇಶದ ತನಕ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. [ತಮಿಳುನಾಡಿಗೆ ದಿನ ನೀರು ಬಿಡಿ ಎಂದ ಸುಪ್ರೀಂ, ಓಕೆ ಎಂದ ಕರ್ನಾಟಕ]
* ಅದರಂತೆ ಮುಂದಿನ ಆದೇಶದ ತನಕ ತಮಿಳುನಾಡಿಗೆ ಪ್ರತಿ ದಿನ 2,000 ಕ್ಯೂಸೆಕ್ಸ್ ನೀರನ್ನು ಕರ್ನಾಟಕ ಹರಿಸಬೇಕಿದೆ.
* ಕಾವೇರಿ ನ್ಯಾಯಾಧಿಕರಣ ಪ್ರಶ್ನಿಸಿ ತಮಿಳುನಾಡು ಹಾಗೂ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳು ವಿಚಾರಣೆ ಯೋಗ್ಯವಲ್ಲ ಎಂದ ಅಟಾರ್ನಿ ಜನರಲ್.

* ಸಂವಿಧಾನದ ಆರ್ಟಿಕಲ್ 32, 131, 136 ಹಾಗೂ 262 ಉಲ್ಲೇಖಿಸಿ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ.

ತಾಂತ್ರಿಕ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ತ್ರಿಸದಸ್ಯ ಪೀಠದಿಂದ ಮಂಗಳವಾರ ಕೋರ್ಟ್ ಕಲಾಪದ ಅಂತ್ಯಕ್ಕೆ ಮಧ್ಯಂತರ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಈ ನಡುವೆ ಕಾವೇರಿ ಕಣಿವೆ ಪಾತ್ರದಲ್ಲಿರುವ ಸ್ಥಿತಿ ಗತಿಗಳ ಕುರಿತು ತಾಂತ್ರಿಕ ಸಮಿತಿ ತಯಾರಿಸಿರುವ ವಾಸ್ತವ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ಮಂಗಳವಾರ ಮಧ್ಯಾಹ್ನ ನಡೆಯಲಿದೆ.[ಸುಪ್ರೀಂಕೋರ್ಟಿಗೆ ಸಲ್ಲಿಕೆಯಾದ ತಜ್ಞರ ವರದಿಯಲ್ಲಿ ಏನಿದೆ?]

 Cauvery appeal- What Karnataka, TN submit in SC

ಐತೀರ್ಪು ಹಾಗೂ ನಿರ್ವಹಣಾ ಮಂಡಳಿ ರಚನೆ ಬಗ್ಗೆ ವಾದ:
*
ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು ಗೈರು ಹಿನ್ನಲೆಯಲ್ಲಿ ವಿಚಾರಣೆಯನ್ನು ಕೆಲ ಕಾಲ ಮುಂದೂಡಲಾಗಿತ್ತು.
* 2007ರ ಫೆಬ್ರವರಿ 5ರಂದು ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪು ತಪ್ಪಾಗಿದೆ ಎಂದು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಾದಿಸಿವೆ.[ಕಾವೇರಿ ವಿವಾದ : ಕರ್ನಾಟಕದ ಪಾಲಿಗೆ ಮಹತ್ವದ ದಿನ]
* ಕಾವೇರಿ ನದಿಯ ಪ್ರಮಾಣ 740 ಟಿಎಂಸಿ ಅಡಿಯಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ, ತಮಿಳುನಾಡಿಗೆ 419 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ 7 ಟಿಎಂಸಿ ಅಡಿ ನೀರು ಜತೆಗೆ 14 ಟಿಎಂಸಿ ಅಡಿ ಪರಿಸರ ಸಂರಕ್ಷಣೆಗೆ ಬಳಕೆ ಮಾಡಿಕೊಳ್ಳಿ ಎಂದು ನ್ಯಾಯಾಧೀಕರಣ ತೀರ್ಪು ನೀಡಿತ್ತು.
* ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಉನ್ನತ ತಂತ್ರಜ್ಞರ ಸಮಿತಿ ತನ್ನ ವರದಿಯನ್ನು ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದೆ.
* ಅಕ್ಟೋಬರ್ 1 ರಿಂದ ಮೇ 2017ರ ತನಕ 36.38 ಟಿಎಂಸಿ ಅಡಿ ನೀರು ಅಗತ್ಯವಿದೆ. ಸುಮಾರು 4.27 ಲಕ್ಷ ಎಕರೆಗೆ ನೀರುಣಿಸಬೇಕಿದೆ.

* ಅಕ್ಟೋಬರ್ 1 ರಿಂದ ಮೇ 2017ರ ತನಕ 133 ಟಿಎಂಸಿ ಅಡಿ ನೀರು ಅಗತ್ಯವಿದೆ. ಸುಮಾರು 12 ಲಕ್ಷ ಎಕರೆಗೆ ನೀರುಣಿಸಬೇಕಿದೆ.[ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ಕಾವೇರಿ ವಿಚಾರಣೆ]

Supreme court

ಮಂಡಳಿ ರಚನೆ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿತ್ತೇ ಹೊರತೂ ಆದೇಶ ನೀಡಿರಲಿಲ್ಲ ಎಂದು ದ್ವಿಸದಸ್ಯ ಪೀಠದ ಹೇಳಿಕೆಯನ್ನು ತ್ರಿಸದಸ್ಯ ಪೀಠದ ಮುಂದಿಟ್ಟ ಎಜಿ ಮುಕುಲ್ ರೋಹ್ಟಗಿ. ಈ ಬಗ್ಗೆ ಒಂದು ವಾರದಲ್ಲಿ ತೀರ್ಪು ನೀಡುವುದಾಗಿ ಹೇಳಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ.

* ಸಂವಿಧಾನದ ಆರ್ಟಿಕಲ್ 262ರ ಅನ್ವಯ ಮಂಡಳಿ ರಚನೆ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಮೀರಿದ್ದು ಸಂವಿಧಾನದ ಅಧಿಕಾರಕ್ಕೆ ಒಳಪಡುತ್ತದೆ ಎಂದು ಎಜಿ ಮುಕುಲ್ ಅವರು ಹೇಳಿದರು.
* ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡುವ ಅಧಿಕಾರ ಸುಪ್ರೀಂಕೋರ್ಟೀಗೆ ಇಲ್ಲ ಎಂದು ಕರ್ನಾಟಕ ಪರ ವಕೀಲ ನಾರಿಮನ್ ಹೇಳಿಕೆ.
* ಜಿಎಸ್ ಝಾ ನೇತೃತ್ವದ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿಗೆ ತಮಿಳುನಾಡು ಆಕ್ಷೇಪ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Both Karnataka and Tamil Nadu will argue against the verdict of the Cauvery Waters Tribunal. Both states have filed a special leave petition in the Supreme Court challenging the award granted by the tribunal on February 5 2007
Please Wait while comments are loading...