ರಾಮ್ ರಹೀಮ್ ಲಗೇಜ್ ಎತ್ತಿದ್ದಕ್ಕೆ ಸೇವೆಯಿಂದ ವಜಾ!

ರಾಮ್ ರಹೀಂ ಲಗೇಜ್ ಹಿಡಿದೊಯ್ದಿದ್ದಕ್ಕೆ ಹರ್ಯಾಣದ ರಾಜ್ಯ ಸರ್ಕಾರದ ಅಟಾರ್ನಿ ಜನರಲ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದ ಹರ್ಯಾಣ ಸರ್ಕಾರ. ಸಿಬಿಐ ನ್ಯಾಯಾಲಯದಲ್ಲಿ ದೋಷಿ ಎಂದು ಆದೇಶಿಸಲ್ಪಟ್ಟ ನಂತರ ಬಾಬಾಗೆ ಸಹಾಯ ಮಾಡಿದ್ದರು.

ಚಂಡೀಗಢ, ಆಗಸ್ಟ್ 26: ಬಾಬಾ ರಾಮ್ ರಹೀಮ್ ಅವರ ಲಗೇಜ್ ಹಿಡಿದುಕೊಂಡಿದ್ದರೆಂಬ ಕಾರಣಕ್ಕೆ ಹರ್ಯಾಣ ಸರ್ಕಾರ ತನ್ನ ರಾಜ್ಯದ ಡೆಪ್ಯೂಟಿ ಅಡ್ವೊಕೇಟ್ ಜನರಲ್ ಆಗಿದ್ದ ಗುರುದಾಸ್ ಸಿಂಗ್ ಸಲ್ವಾರಾ ಎಂಬುವರನ್ನು ಸೇವೆಯಿಂದ ವಜಾಗೊಳಿಸಿದೆ.

ಆಗಸ್ಟ್ 25ರಂದು ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯ ಅಂತಿಮ ತೀರ್ಪು ನೀಡಿದ್ದ ಸಿಬಿಐ ನ್ಯಾಯಾಲಯ, ಅವರ ಬಂಧನಕ್ಕೆ ಆದೇಶಿಸಿತ್ತು.

Caught Holding Gurmeet Ram Rahim's Bag, Haryana Deputy Attorney General Fired

ಈ ತೀರ್ಪು ಹೊರಬಿದ್ದ ನಂತರ, ರಾಮ್ ರಹೀಮ್ ಬಾಬಾ ಅವರನ್ನು ಬಂಧಿಸಲಾಗಿತ್ತು. ಆಗ, ಬಾಬಾ ಅವರು ನ್ಯಾಯಾಲಯದಿಂದ ಹೊರಬರುವ ವೇಳೆ ಅವರಿಗೆ ಸಹಾಯ ಮಾಡಲು ಬಂದ ವಕೀಲ ಗುರುದಾಸ್ ಸಿಂಗ್ ಸಲ್ವಾರಾ, ಬಾಬಾ ಅವರ ಲಗೇಜ್ ಗಳಲ್ಲಿ ಒಂದಾದ ಕಿತ್ತಳೆ ಬಣ್ಣದ ಸೂಟ್ ಕೇಸ್ ಅನ್ನು ಎತ್ತಿಕೊಂಡು ಅವರ ವಾಹನ ಬಳಿಯವರೆಗೆ ಬಂದು ಅದನ್ನು ಅವರ ಸಹಾಯಕರಿಗೆ ನೀಡಿದ್ದರು.

ಇದು ಕೋರ್ಟ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಇದರ ವಿಡಿಯೋ ಫೂಟೇಜ್ ಗಳನ್ನು ನೋಡಿದ ಸರ್ಕಾರ, ಸಲ್ವಾರಾ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+