ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ
ರಾಜಕೀಯ ಪಕ್ಷಗಳಿಗೆ ಹರಿದುಬರುವ ಎಲ್ಲಾ ದೇಣಿಗೆಗಳು ಚೆಕ್ ಅಥವಾ ಎಲೆಕ್ಟ್ರಾನಿಕ್ ಪೇಮೆಂಟ್ ಮೂಲಕವೇ ಬರಬೇಕು ಎಂದು ಘೋಷಿಸಿದ ಕೇಂದ್ರ ಸಚಿವ ಜೇಟ್ಲಿ
ನವದೆಹಲಿ, ಫೆಬ್ರವರಿ 1: ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರು.ಗಳ ಮೊತ್ತದ ಹಣವು ಅಜ್ಞಾತ ಮೂಲಗಳಿಂದ ಹರಿದು ಬರುವುದನ್ನು ತಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಯಾವುದೇ ರಾಜಕೀಯ ಪಕ್ಷವು ಒಂದು ಮೂಲದಿಂದ ಕೇವಲ 2 ಸಾವಿರ ರು. ಮಾತ್ರವೇ ಪಡೆಯುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಲೋಕಸಭೆಯಲ್ಲಿ 2017-18ರ ಬಜೆಟ್ ಮಂಡನೆ ವೇಳೆ ಇದನ್ನು ಘೋಷಿಸಿದ್ದಾರೆ. ಅದರಂತೆ, ಪ್ರತಿಯೊಂದು ರಾಜಕೀಯ ಪಕ್ಷವು ಯಾವುದೋ ಅಜ್ಞಾತ ಮೂಲದಿಂದ ಲೆಕ್ಕವಿಲ್ಲದಷ್ಟು ಹಣವನ್ನು ಡೊನೇಷನ್ ರೂಪದಲ್ಲಿ ಪಡೆಯುವುದನ್ನು ನಿಲ್ಲಿಸುವ ಕ್ರಮದ ಬಗ್ಗೆ ಘೋಷಿಸಿದರು.[ಅಜ್ಞಾತ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ 11 ಸಾವಿರ ಕೋಟಿ ಹಣ!]

ಅದಷ್ಟೇ ಅಲ್ಲದೆ, ರಾಜಕೀಯ ಪಕ್ಷಗಳಿಗೆ ಹಣ ನೀಡುವವರು ಚೆಕ್, ಇಲೆಕ್ಟ್ರಾನಿಕ್ ಪೇಮೆಂಟ್ ಮೂಲಕವೇ ನೀಡುವುದನ್ನು ಕಡ್ಡಾಯಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.












Click it and Unblock the Notifications