ಚಾಲನಾ ಪರವಾನಗಿ ಕಿಸೆಯಲ್ಲಿ ಇಟ್ಟುಕೊಂಡು ಓಡಾಡಬೇಕಿಲ್ಲ

Written By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 07 :{blurb}
ಕೇಂದ್ರ ಸರ್ಕಾರ ಕೊಡಮಾಡಿರುವ ಡಿಜಿಟಲ್ ಲಾಕರ್ ನಲ್ಲಿ ದಾಖಲೆಗಳನ್ನು ಭದ್ರ ಮಾಡಿ ಇಟ್ಟುಕೊಂಡಿದ್ದರೆ ಸಾಕು. ಆರ್ ಟಿಒ ಅಧಿಕಾರಿಗಳು, ಪೊಲೀಸರು ಸಹ ಇದನ್ನು ಮಾನ್ಯ ಮಾಡಬೇಕಾಗುತ್ತದೆ.

india

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಯೋಜನೆಯ ವಿವರಗಳನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಚಾಲನಾ ಪರವಾನಗಿಯ ಅಸಲಿ ಪ್ರತಿ ತೆಗೆದುಕೊಂಡು ಬಂದಿಲ್ಲ ಎಂದು ಪೊಲೀಸರು ಇನ್ನು ಮುಂದೆ ರಾಗ ಎಳೆಯುವ ಹಾಗಿಲ್ಲ.

ಡಿಜಿಟಲ್ ಲಾಕರ್ ನಲ್ಲಿ ನಿಮಗೆ ಒಂದು ಜಿಬಿ ಸ್ಥಳಾವಕಾಶ ಲಭ್ಯವಾಗುತ್ತದೆ. ಇಲ್ಲಿ ನಿಮ್ಮ ಆಧಾರ್ ಕಾರ್ಡ್, ಮತದಾನದ ಗುರುತಿನ ಪತ್ರ, ಚಾಲನಾ ಪರವಾನಗಿ ಸೇರಿದಂತೆ ಅನೇಕ ಮೂಲಭೂತ ದಾಖಲೆಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಲು ಅವಕಾಶ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to a facility launched today, drivers would not be required to carry their driving licence and registration certificate, but can store them in 'DigiLocker', the secured national digital locker system. The soft copy can then be verified by the traffic police and law enforcement agencies when required. Notably, DigiLocker helps in consolidating all important documents in digital form.
Please Wait while comments are loading...